ಪಿರಿಯಾಪಟ್ಟಣ: ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿನಿಂದ ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದು ಪತ್ರಕರ್ತ ಎಚ್. ಕೆ. ಮಹೇಶ್ ತಿಳಿಸಿದರು.
ತಾಲ್ಲೂಕಿನ ತಾತನಹಳ್ಳಿ ಗ್ರಾಮದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಕಾರ್ಮಿಕ ಸಮುದಾಯದ ಪಾತ್ರವಿದೆ, ರೈತರ, ಕಾರ್ಮಿಕರ, ಶೋಷಿತರ ಹಿತವನ್ನು ಕಾಯುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಉತ್ತಮ ಆಡಳಿತವನು ಸಾರ್ವಜನಿಕರಿಗೆ ನೀಡಲು ಸಾಧ್ಯ. ಕಾರ್ಮಿಕರು ಕೂಡ ಸಂಘಟಿತಾರಾಗಿತಮಗೆ ದೊರಕಬೇಕಾದ ಸವಲತ್ತುಗಳ ಬಗ್ಗೆ ಜಾಗೃತಿಯನ್ನು ಹೊಂದಬೇಕು. ಈ ಕಾರಣದಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿಕಾರ್ಮಿಕರಿಗೆ ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ಸಂವಿಧಾನದಡಿಯಲ್ಲಿ ನೀಡಿದ್ದಾರೆ.
ಅಸಂಘಟಿತ ಕಾರ್ಮಿಕರು ಇಂದಿಗೂಆರ್ಥಿಕ ಮತ್ತು ಸಾಮಾಜಿಕವಾಗಿ ಸುಸ್ಥಿತಿಯಲ್ಲಿದ್ದಾರೆ ಇವರುಗಳ ಏಳಿಗೆಗೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ನೀಡಿದರೂ ಕೂಡ ಅವುಗಳ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಇದು ಬೇಸರದ ಸಂಗತಿಯಾಗಿದೆ.ಇದರ ಜೊತೆಗೆ ನಿಜವಾದ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸದೇ ನಿರ್ಲಕ್ಷತನ ವಹಿಸುತ್ತಿರುವುದು ಕೂಡ ಒಂದೆಡೆ ಕಾರ್ಮಿಕರ ಜೀವನ ಸ್ಥಿತಿ ತಲುಪಲು ಕಾರಣವಾಗಿದೆ ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಮಗುವನ್ನು ಪಡೆದು ಆರ್ಥಿಕವಾಗಿ ಸದೃಢತೆಯನ್ನು ಹೊಂದಬೇಕು ಎಂದು ತಿಳಿಸಿದರು.
ಈ ಸಂದರ್ಭ ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷ ಅಶೋಕ್ ಮೈಸೂರು ಜಿಲ್ಲಾ ಉಸ್ತುವಾರಿ ಚನ್ನಬಸವ, ಜಿಲ್ಲಾಧ್ಯಕ್ಷ ಸಿಎಸ್ ವೆಂಕಟೇಶ್, ಉಪಾಧ್ಯಕ್ಷ ಚೆಲುವರಾಜ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ, ತಾಲೂಕು ಗೌರವ ಅಧ್ಯಕ್ಷ ಚಿಕ್ಕ ಮಹಾದೇವ ,ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಗೋವಿಂದ ,ಸದಸ್ಯರಾದ ಸೋಮಣ್ಣ ,ಶಫಿ ,ಜಗದೀಶ್, ಪುಟ್ಟಣ್ಣ ,ಲಕ್ಕಪ್ಪ, ನಾಗರಾಜ್ ಕೃಷ್ಣ ,ಡಾಕ್ಟರ್ ಬಿಆರ್ ಅಂಬೇಡ್ಕರ್ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಶೇಖರ್, ಉಮೇಶ್, ಮತ್ತಿತರರಿದ್ದರು.