Advertisement

ಭಾರ್ಗವ ಬಳಗದಿಂದ ವಿಶ್ವ ಕುಂದಾಪ್ರ ದಿನಾಚರಣೆ

06:12 PM Aug 02, 2022 | Team Udayavani |

ಧಾರವಾಡ: ಇಲ್ಲಿನ ಭಾರ್ಗವ ಬಳಗದ ವತಿಯಿಂದ ವಿಶ್ವ ಕುಂದಾಪ್ರ ದಿನ ಆಚರಿಸಲಾಯಿತು. ಹು-ಧಾ ಮಹಾನಗರ ಪಾಲಿಕೆ ಮೇಯರ್‌ ವೀರೇಶ ಅಂಚಟಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಂದಾಪುರ ಕನ್ನಡ ಬಳಗವು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಂದಾಪುರ ಗೆಳೆಯರು ಮಾತನಾಡುವ ಭಾಷೆ ನಮಗೆ ಅತ್ಯಂತ ಹರ್ಷ ತರುತ್ತದೆ ಎಂದರು.

Advertisement

ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಊರಿನ ಹಬ್ಬಗಳಲ್ಲಿ ಭಾಗವಹಿಸುವಿಕೆಯನ್ನು ಕಲಿಸಲು ಮರೆಯಬಾರದು. ಮನೆಯಲ್ಲಿ ಕುಂದಾಪ್ರ ಭಾಷೆಯನ್ನು ಮಾತನಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ
ಮಾಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯೋಣ ಎಂದು ಸಲಹೆ ನೀಡಿದರು.

ಉದ್ಯಮಿ ಮಹೇಶ ಶೆಟ್ಟಿ ಮಾತನಾಡಿ, ಕುಂದಾಪ್ರ ಭಾಷೆ ಅಳಿವಿನ ಅಂಚಿನಲ್ಲಿದ್ದು, ಮನೆಯಲ್ಲಿ ಎಲ್ಲರೂ ಕುಂದಾಪ್ರ ಭಾಷೆಯನ್ನೇ ಮಾತನಾಡಬೇಕು. ಇಲ್ಲವಾದರೆ ಈ ಭಾಷೆ ಉಳಿಸುವುದು ಕಷ್ಟವಾಗುತ್ತದೆ. ನಮ್ಮ ಆಚಾರ ವಿಚಾರಗಳನ್ನು ಎಲ್ಲಿಗೆ ಹೋದರೂ ಬಿಡಬಾರದು. ರಜೆಯಲ್ಲಿ ಮಕ್ಕಳಿಗೆ ಟ್ಯೂಷನ್‌ ಬದಲು ಊರಿಗೆ ಕರೆದುಕೊಂಡು ಹೋಗಿ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಓಂಗಣೇಶ ಅವರು ಕುಂದಾಪ್ರ
ಭಾಷೆ ಸೊಗಡು ಕುರಿತು ಮಾತನಾಡಿದರು.

ಅವರ ನಗೆ ನಾಟಕಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಸೀತಾರಾಮ ಶೆಟ್ಟಿ, ಸಂತೋಷ ಶೆಟ್ಟಿ, ವಿಜಯಾನಂದ ಶೆಟ್ಟಿ, ಸುರೇಶ ಶೆಟ್ಟಿ, ಹೋಟೆಲ್‌ ಉದ್ಯಮಿಗಳಾದ ಚಂದ್ರಶೇಖರ ಪುರಾಣಿಕ್‌, ಜಯರಾಮ್‌ ಪೂಜಾರಿ, ಹರೀಶ ಸುಧಾಕರ ಶೆಟ್ಟಿ, ಭಾರ್ಗವ ಬಳಗದ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next