ಸಂಗೀತ ನಾಟಕ ಅಕಾಡೆಮಿ ಸಭೆ ಜರಗಿತು. ಮುಂಬಯಿ, ಗೋವಾ, ಕೇರಳ, ಕರ್ನಾಟಕ ವಿವಿಧ ರಾಜ್ಯಗಳಿಂದ ಪ್ರಸಿದ್ಧ ನಾಟಕ ನಿರ್ದೇಶಕರು, ಕಲಾವಿದರು, ಸಾಹಿತಿಗಳು, ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡರು.
Advertisement
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ರಾಜ್ಯಗಳಲ್ಲಿ ಕೊಂಕಣಿ ಮಾತೃ ಭಾಷೆಯನ್ನಾಡುವ ಶಾಲಾ ಕಾಲೇಜು ಯುವಕರಿಗಾಗಿ ಹಾಗೂ ಎಳೆಯರಲ್ಲಿ ನಾಟಕದ ಅಭಿರುಚಿ ಮೂಡುವಂತೆ ಕೊಂಕಣಿ ನಾಟಕ ಕಾರ್ಯಾಗಾರ, ನಾಟಕ ಸ್ಪರ್ಧೆಗಳನ್ನು ಜರಗಿಸುವುದು, ಅಂತಾರಾಷ್ಟ್ರೀಯ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಅದಲ್ಲದೇ ವಿವಿಧ ನಾಟಕ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಜರಗಿಸಲು ನಿರ್ಣಯಿಸಲಾಯಿತು.
ಪ್ರಾದೇಶಿಕ ಸಂಯೋಜಕರಾಗಿ ಗೋವಾದ ಪ್ರಸಿದ್ಧ ಕಲಾವಿದರಾದ ಶ್ರೀಧರ ಕಾಮತ್ ಬಾಂಬೋಳಕರ, ಕೇರಳವನ್ನು ಪ್ರತಿನಿಧಿಸುವ ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷ ಪಯ್ಯನೂರ ರಮೇಶ ಪೈ, ಉತ್ತರ ಕನ್ನಡ ಕುಮಟಾದ ಚಿದಾನಂದ ಭಂಡಾರಿ, ನಾಟಕ ನಿರ್ದೇಶಕ ಎಡ್ವರ್ಡ್ ಸಿಕ್ವೇರಾ ಮೊದಲಾದವರನ್ನು ನೇಮಿಸಲಾಯಿತು. ಚರ್ಚಾಗೋಷ್ಠಿಯಲ್ಲಿ ಶಾಲೆಯಲ್ಲಿ ಕೊಂಕಣಿ ಕಲಿಕೆ ಸಂಚಾಲಕ ಡಾ| ಕಸ್ತೂರಿ ಮೋಹನ ಪೈ, ಗೋವಾದ ಡಾ| ಪಾಂಡುರಂಗ ಫಳದೇಸಾಯಿ, ವಿಜಯಕಾಂತ ನಾಮಿಶ್ಕರ್, ಕೇರಳದ ಕೃಷ್ಣಾನಂದ ಎಮ್. ಪೈ, ಎಲ್. ಕೃಷ್ಣ ಭಟ್, ಅಶೋಕ ಎಸ್., ಉಳ್ಳಾಲ ರಾಘವೇಂದ್ರ ಕಿಣಿ, ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಸಂಚಾಲಕಿ ಗೀತಾ ಸಿ. ಕಿಣಿ, ಮೀನಾಕ್ಷಿ ಎನ್. ಪೈ, ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಶಕುಂತಲಾ ಆರ್. ಕಿಣಿ ಧನ್ಯವಾದ ಸಮರ್ಪಿಸಿದರು.