Advertisement

World Junior Shooting: ಭಾರತಕ್ಕೆ 24 ಪದಕ, ಅಗ್ರಸ್ಥಾನ

12:32 AM Oct 08, 2024 | Team Udayavani |

ಲಿಮಾ (ಪೆರು): ಜೂನಿಯರ್‌ ವಿಶ್ವ ಶೂಟಿಂಗ್‌ ಚಾಂಪಿ ಯನ್‌ಶಿಪ್‌ನಲ್ಲಿ ಭಾರತ ಅಗ್ರಸ್ಥಾನದ ಗೌರವ ಸಂಪಾದಿಸಿದೆ. ಭಾರತದ ಶೂಟರ್ 13 ಚಿನ್ನ ಸೇರಿದಂತೆ ಒಟ್ಟು 24 ಪದಕಗಳನ್ನು ಗೆದ್ದರು. ಇದರಲ್ಲಿ 3 ಬೆಳ್ಳಿ ಹಾಗೂ 8 ಕಂಚಿನ ಪದಕಗಳಿವೆ.

Advertisement

ಇಟಲಿ ದ್ವಿತೀಯ ಸ್ಥಾನಿಯಾಯಿತು. 5 ಚಿನ್ನ, 4 ಬೆಳ್ಳಿ ಹಾಗೂ 4 ಕಂಚು ಇಟಲಿ ಸಾಧನೆಯಾಗಿದೆ. 4 ಸ್ವರ್ಣ ಪದಕಗಳೊಂದಿಗೆ ಒಟ್ಟು 10 ಪದಕ ಜಯಿಸಿದ ನಾರ್ವೆ ತೃತೀಯ ಸ್ಥಾನ ಸಂಪಾದಿಸಿತು.

ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತದ ಪುರುಷರು 50 ಮೀ. ಪಿಸ್ತೂಲ್‌ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಫೈನಲ್‌ನಲ್ಲಿ ಅಜರ್‌ಬೈಜಾನ್‌ ವಿರುದ್ಧ ಒಂದು ಅಂಕದ ರೋಚಕ ಜಯ ನಮ್ಮವರದಾಯಿತು.
ದೀಪಕ್‌ ದಲಾಲ್‌ (545), ಕಮಲ್‌ಜೀತ್‌ (543) ಮತ್ತು ರಾಜ್‌ ಚಂದ್ರ (528) ಅವರನ್ನೊಳಗೊಂಡ ತಂಡ 1,616 ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಅಜರ್‌ಬೈಜಾನ್‌ ಶೂಟರ್ 1,615 ಅಂಕದೊಂದಿಗೆ ಬೆಳ್ಳಿ ಪದಕ ಜಯಿಸಿತು. ಅರ್ಮೆàನಿಯಾ ಕಂಚು ಗೆದ್ದಿತು.

Advertisement

Udayavani is now on Telegram. Click here to join our channel and stay updated with the latest news.

Next