Advertisement

ಅಧಿಕ ರಕ್ತದೊತ್ತಡ

03:29 PM Jun 11, 2017 | |

ವಿಶ್ವ ಅಧಿಕ ರಕ್ತದೊತ್ತಡ ದಿನ 
ಪ್ರತೀ ವರ್ಷ ಮೇ 17ನ್ನು ವಿಶ್ವ ಅಧಿಕ ರಕ್ತದೊತ್ತಡ ದಿನ ಎಂಬುದಾಗಿ ಆಚರಿಸಲಾಗುತ್ತದೆ. ಇಂಟರ್‌ ನ್ಯಾಶನಲ್‌ ಸೊಸೈಟಿ ಆಫ್ ಹೈಪರ್‌ಟೆನ್ಶನ್‌  (ಐಎಸ್‌ಎಚ್‌)ನ ಸಹಸಂಸ್ಥೆ ಯಾಗಿರುವ ವರ್ಲ್ಡ್ ಹೈಪರ್‌ಟೆನ್ಶನ್‌ ಲೀಗ್‌ (ಡಬ್ಲ್ಯುಎಚ್‌ಎಲ್‌) ಈ ಆಚರಣೆಯನ್ನು ಆರಂಭಿಸಿದೆ.  ಜಾಗತಿಕವಾಗಿ ಎಲ್ಲ ಜನಸಮುದಾಯಗಳಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಅರಿವನ್ನು ವಿಸ್ತರಿಸುವ ಉದ್ದೇಶದಿಂದ “ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಿ 
(ನೋ ಯುವರ್‌ ನಂಬರ್)’ ಎಂಬುದು ವಿಶ್ವ ಅಧಿಕ ರಕ್ತದೊತ್ತಡ ದಿನದ ಘೋಷವಾಕ್ಯವಾಗಿದೆ.  

Advertisement

ಇದೇಕೆ ಅಗತ್ಯ?
1. ಸಮಾಜದಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿ ಹೆಚ್ಚುತ್ತಿದೆ. 
2. ಬಹುತೇಕ ರೋಗಿಗಳಲ್ಲಿ ಇದರ ಲಕ್ಷಣಗಳು ಇರುವುದಿಲ್ಲ.
3. ಜನರು ವಯೋವೃದ್ಧರಾಗುತ್ತಿರುವುದು ಮತ್ತು ಅಧಿಕ ತೂಕ/ ಬೊಜ್ಜು ಒಂದು ಸಾಂಕ್ರಾಮಿಕದಂತೆ ವ್ಯಾಪಿಸುತ್ತಿರುವುದರಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವುದು ಕೂಡ ವೃದ್ಧಿಸುತ್ತಿದೆ. 
4. ಬಿಪಿ ನಿಯಂತ್ರಣದಿಂದ ಈ ಕೆಳಗಿನವುಗಳ ಸಂಭಾವ್ಯತೆ ಕಡಿಮೆಯಾಗುತ್ತದೆ –  ಹೃದಯಾಘಾತ ಸಾಧ್ಯತೆ ಸುಮಾರು ಶೇ.50ರಷ್ಟು ಇಳಿಕೆ ಲಕ್ವಾ ಸಾಧ್ಯತೆ ಸುಮಾರು ಶೇ.40ರಷ್ಟು ಇಳಿಕೆ ಹೃದಯಸ್ತಂಭನ ಸಾಧ್ಯತೆ ಸುಮಾರು ಶೇ.20-25ರಷ್ಟು ಇಳಿಕೆ

ಯಾವಾಗ ರೋಗಿಗೆ ಅಧಿಕ 
ರಕ್ತದೊತ್ತಡ ಇದೆ ಎನ್ನಬಹುದು?

ಜೆಎನ್‌ಸಿ ಪ್ರಕಾರ 18ಕ್ಕಿಂತ ಮೇಲ್ವಯಸ್ಸಿನ ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ವರ್ಗೀಕರಣ
ವಿಭಾಗ ಸಿಸ್ಟಾಲಿಕ್‌ (ಎಂಎಂಎಚ್‌ಜಿ) ಡಯಾಸ್ಟಾಲಿಕ್‌ (ಎಂಎಂಎಚ್‌ಜಿ)
ಸಹಜ 10-119 60-79
ಅಧಿಕ ರಕ್ತದೊತ್ತಡಪೂರ್ವ 120-139 80-89
ಹಂತ 1 ಅಧಿಕ ರಕ್ತದೊತ್ತಡ 140-159 90-99
ಹಂತ 2 ಅಧಿಕ ರಕ್ತದೊತ್ತಡ |160 |100
ಐಸೊಲೇಟೆಡ್‌ ಸಿಸ್ಟಾಲಿಕ್‌ ಅಧಿಕ ರಕ್ತದೊತ್ತಡ |/=140
Advertisement

Udayavani is now on Telegram. Click here to join our channel and stay updated with the latest news.

Next