Advertisement

ವಿಶ್ವ ಹೃದಯ ದಿನ: ಪುಟ್ಟ ಹೃದಯದ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

02:34 AM Sep 29, 2020 | Hari Prasad |

ಪ್ರತಿಯೊಬ್ಬರನ್ನು ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹೃದಯದ ಕಾಯಿಲೆಯೂ ಒಂದು.

Advertisement

ಇದಕ್ಕೆ ವಯಸ್ಸಿನ ಭೇದವಿಲ್ಲದೆ ಜನ ಬಲಿಯಾಗುತ್ತಿದ್ದು, ಜಾಗೃತಿಯೊಂದೇ ಪ್ರಮುಖ ಮಾರ್ಗವಾಗಿದೆ.

ಸಕಲ ಜೀವಿಗಳ ಜೀವಂತಿಕೆಗೆ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಸೆಪ್ಟಂಬರ್‌ 29ರಂದು ವಿಶ್ವ ಹೃದಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿಯೇ ನಂ.1 ಮಾರಣಾಂತಿಕ ರೋಗಗಳಾಗಿರುವ ಹೃದ್ರೋಗದ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು “ವಿಶ್ವ ಹೃದಯ ದಿನಾಚರಣೆ’ಯ ಪರಿಕಲ್ಪನೆಯನ್ನು ರೂಪಿಸಿದೆ.

ಕೋವಿಡ್‌ ಮತ್ತು ಹೃದಯ: ಹೃದಯ ಅಥವಾ ಮೆದುಳಿನಂತಹ ದೇಹದ ವಿವಿಧ ಅಂಗಗಳ ರಕ್ತನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಸದ್ಯ ಇಡೀ ವಿಶ್ವವೇ ಕೋವಿಡ್‌ 19 ವಿರುದ್ಧ ಹೋರಾಡುತ್ತಿದ್ದು, ಹೃದ್ರೋಗಿಗಳು ಸೇರಿದಂತೆ ಉಸಿರಾಟ ಸಮಸ್ಯೆ ಎದುರಿಸುತ್ತಿರುವವರು ಸ್ವಲ್ಪ ಹೆಚ್ಚಿನ ಜಾಗೃತಿ ವಹಿಸುವ ಆವಶ್ಯಕತೆ ಇದೆ. ಅದಕ್ಕಾಗಿ ಈ ಬಾರಿ ಕೋವಿಡ್‌ ವಿರುದ್ಧ ಹೋರಾಡಲು ಹೃದಯದ ಮಹತ್ವವನ್ನು ಸಾರುವ ಥೀಂ ಇಡಲಾಗಿದೆ. ಕೊರೊನರಿ ಹಾರ್ಟ್‌ ಡಿಸೀಸ್‌ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬೊಧ-ವಾಸ್ಕಾಲಾರ್‌ ಡಿಸೀಸ್‌ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದುವು.

Advertisement

28 ಲಕ್ಷ ಸಾವು: ದೇಶದಲ್ಲಿ ಪ್ರತೀ ನಾಲ್ಕು ಮಂದಿಯಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. 2016ರಲ್ಲಿ 28 ಲಕ್ಷ ಜನರು ಹೃದ್ರೋಗದಿಂದ ಸಾವನ್ನಪ್ಪಿದ್ದಾರೆ ಎನ್ನುತ್ತವೆ ವರದಿಗಳು.

ಶೇ.50ರಷ್ಟು ಮಂದಿಗೆ ಮಾತ್ರ ಚಿಕಿತ್ಸೆ: ದೇಶದಲ್ಲಿ ಶೇ.45ಕ್ಕೂ ಹೆಚ್ಚು ಜನರಲ್ಲಿ ಹೃದಯ ಸಮಸ್ಯೆ ಕಂಡುಬರುತ್ತಿದ್ದು, ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ 1.79ಕೋಟಿ ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. 2017ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ ಶೇ.50ರಷ್ಟು ಹೃದ್ರೋಗಿಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತಿದೆ.

ಮಾಲಿನ್ಯವೂ ಕಾರಣ!: ವಾಯು ಮಾಲಿನ್ಯದಲ್ಲಿ ಸೇರುವ ಮಿಥೇನ್‌ ಅನಿಲವೂ ಹೃದಯದ ಸಮಸ್ಯೆಗೆ ಕಾರಣವಾಗ ಬಹುದಾಗಿದೆ. ಇದು ಶ್ವಾಸಕೋಶದಲ್ಲಿ ರಕ್ತದ ಹರಿವಿಗೆ ಅಡ್ಡಿಯನ್ನುಂಟು ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.

ನಿಯಂತ್ರಣ ಹೇಗೆ !
– ದೇಹದ ತೂಕ ಹೆಚ್ಚಾಗಿ ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು.

– ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕು.

– ಒತ್ತಡಗಳಿಗೆ ವಿರಾಮ ದೊರೆಯಬೇಕು.

– ರಕ್ತದಲ್ಲಿ ಕೊಬ್ಬು ಸೇರಿಕೊಳ್ಳದಂತೆ ಎಚ್ಚರವಹಿಸಬೇಕು.

– ದೇಹ ಚಟುವಟಿಕೆಗಳಿಂದ ಕೂಡಿರಬೇಕು.

– ಒಳ್ಳೆಯ ಆಹಾರ ಕ್ರಮಗಳನ್ನು ಅನುಸರಿಸಬೇಕು.

ಕಾಯಿಲೆಗೆ ಕಾರಣಗಳು?
– ಮದ್ಯಪಾನ, ಧೂಮಪಾನ ದಿಂದ ಬರುತ್ತದೆ.

– ಸಂಸ್ಕರಿಸಿದ ಆಹಾರ ಮತ್ತು ಜಂಕ್‌ಫ‌ುಡ್‌ ಸೇವನೆಯಿಂದ.

– ಅಧಿಕ ಒತ್ತಡ, ವ್ಯಾಯಾಮ ರಹಿತ ಜೀವನ ಇತ್ಯಾದಿ ಹೃದಯದ ಮೇಲೆ ಪರಿಣಾಮ ಬೀರುತ್ತವೆೆ.

Advertisement

Udayavani is now on Telegram. Click here to join our channel and stay updated with the latest news.

Next