Advertisement

ಹಾಕಿ ಗೋಲ್‌ಕೀಪರ್‌ ಶ್ರೀಜೇಶ್‌ಗೆ ವರ್ಲ್ಡ್ ಗೇಮ್ಸ್‌ ಆ್ಯತ್ಲೀಟ್‌ ಪ್ರಶಸ್ತಿ

11:05 PM Jan 31, 2022 | Team Udayavani |

ಹೊಸದಿಲ್ಲಿ: ಭಾರತೀಯ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರಿಗೆ ಪ್ರತಿಷ್ಠಿತ “ವರ್ಲ್ಡ್ ಗೇಮ್ಸ್‌ ಆ್ಯತ್ಲೀಟ್‌’ ವರ್ಷದ ಪ್ರಶಸ್ತಿ ಒಲಿದು ಬಂದಿದೆ. 2021ರ ಸಾಧನೆಗಾಗಿ ಅವರು ಈ ಗೌರವಕ್ಕೆ ಭಾಜನರಾದರು.

Advertisement

ಪಿ.ಆರ್‌. ಶ್ರೀಜೇಶ್‌ ಈ ಗೌರವಕ್ಕೆ ಪಾತ್ರರಾದ ಭಾರತದ ಕೇವಲ ಎರಡನೇ ಕ್ರೀಡಾಪಟು. 2020ರಲ್ಲಿ ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.

ಪ್ರಶಸ್ತಿ ರೇಸ್‌ನಲ್ಲಿ ಶ್ರೀಜೇಶ್‌ ಅವರು ಸ್ಪೇನ್‌ನ ಹಾಕಿಪಟು ಆಲ್ಬರ್ಟೊ ಗಿನೆಸ್‌ ಲೋಪೆಜ್‌ ಮತ್ತು ಇಟಲಿಯ ವುಶು ಆಟಗಾರ ಮೈಕಲ್‌ ಅವರನ್ನು ಹಿಂದಿಕ್ಕಿದರು.

ಹಾಕಿಪ್ರೇಮಿಗಳಿಗೆ ಧನ್ಯವಾದ
“ಬಹಳ ಖುಷಿಯಾಗುತ್ತಿದೆ. ಮೊದ ಲಾಗಿ ನನ್ನ ಹೆಸರನ್ನು ಈ ಪ್ರತಿಷಿzತ ಪ್ರಶಸ್ತಿಗೆ ಸೂಚಿಸಿದ ಹಾಕಿ ಇಂಡಿಯಾಕ್ಕೆ ಕೃತಜ್ಞತೆಗಳು. ಜತೆಗೆ ವಿಶ್ವದಾದ್ಯಂತ ಇರುವ ಭಾರತದ ಹಾಕಿ ಪ್ರೇಮಿಗಳಿಗೆ, ನನಗೆ ಮತ ಚಲಾಯಿಸಿದವರಿಗೆಲ್ಲ ಧನ್ಯವಾದಗಳು’ ಎಂಬುದಾಗಿ ಶ್ರೀಜೇಶ್‌ ಹೇಳಿದರು.

ಇದನ್ನೂ ಓದಿ:ಭಾರತ ವಿರುದ್ಧದ ಟಿ20 ಸರಣಿಗೂ ಶಿಮ್ರನ್‌ ಹೆಟ್‌ಮೈರ್‌ ಇಲ್ಲ

Advertisement

ಶ್ರೀಜೇಶ್‌ ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಭಾರತದ ಏಕೈಕ ಕ್ರೀಡಾಪಟುವಾಗಿದ್ದರು. 2021ರ ಎಫ್ಐಎಚ್‌ ಗೋಲ್‌ಕೀಪರ್‌ ಪ್ರಶಸ್ತಿಯೂ ಇವರಿಗೆ ಒಲಿದು ಬಂದಿತ್ತು.

ತಂಡದ ನಾಯಕನೂ ಆಗಿದ್ದ ಪಿ.ಆರ್‌. ಶ್ರೀಜೇಶ್‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬರಗಾಲ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರಿಗೆ 1,27,647 ಮತಗಳು ಲಭಿಸಿದವು. ಲೋಪೆಜ್‌ಗೆ 67,428 ಮತ್ತು ಮೈಕಲ್‌ಗೆ 52,046 ಮತಗಳು ಬಂದವು.

Advertisement

Udayavani is now on Telegram. Click here to join our channel and stay updated with the latest news.

Next