Advertisement

ಇಂದು ವಿಶ್ವ ಆಹಾರ ದಿನ : ಪೋಲಾಗುವ ಆಹಾರವನ್ನು ದಾನ ಮಾಡೋಣ

12:33 AM Oct 16, 2020 | mahesh |

ಆಹಾರ ಸಮಸ್ಯೆ ಕುರಿತು ಅರಿವು ಮೂಡಿಸಲು ಮತ್ತು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಜನತೆಗೆ ತಿಳಿಹೇಳಲು ಅ. 16ರಂದು ವಿಶ್ವಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿದ್ದು, ಸಾಮಾಜಿಕ, ಆರ್ಥಿಕ ಅಂಶಗಳು ಆಹಾರ ಕೊರತೆಗೆ ಮುಖ್ಯ ಕಾರಣಗಳಾಗಿವೆ. ಇದು ಅಭಿವೃದ್ಧಿಯ ದೃಷ್ಟಿಯಿಂದಲೂ ಹಿನ್ನಡೆ ಉಂಟುಮಾಡುತ್ತಿದೆ.

Advertisement

ಹಿನ್ನೆಲೆ ಏನು?
1945 ಅ. 16ರಲ್ಲಿ ವಿಶ್ವಸಂಸ್ಥೆ ತನ್ನ ಪ್ರಮುಖ ಅಂಗ ಸಂಸ್ಥೆಯಾಗಿರುವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ)ಯ ಮುಖ್ಯ ಕಚೇರಿಯನ್ನು ರೋಮ್‌ನಲ್ಲಿ ಸ್ಥಾಪನೆ ಮಾಡಿದ್ದು, ಈ ದಿನದ ನೆನಪಿಗಾಗಿ “ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತಿದೆ.

ಎಫ್ಎಒ ಗೆ‌ 75 ರ ಸಂಭ್ರಮ
ಈ ವರ್ಷದ ವಿಶ್ವ ಆಹಾರದ ದಿನಕ್ಕೆ ವಿಶೇಷ ಕಳೆ. ಈ ವರ್ಷ ಆಹಾರ ಮತ್ತು ಕೃಷಿ ಸಂಸ್ಥೆ 75ರ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ “ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ, ಜತೆಗೂಡಿ’ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.

ಪ್ರಮುಖ ಉದ್ದೇಶ
ಕೃಷಿ ಅಭಿವೃದ್ಧಿ ಮೂಲಕ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಬಡತನ ನಿರ್ಮೂಲನೆ ಪ್ರಮುಖ ಉದ್ದೇಶವಾಗಿದೆ.

ಭಾರತದ ಪರಿಸ್ಥಿತಿ ಏನು? (ವರದಿ ಯೊಂದರ ಪ್ರಕಾರ)
1ದೇಶದಲ್ಲಿ 19.44 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ.
2 5 ವರ್ಷದೊಳಗಿನ ಶೇ.20.8ರಷ್ಟು ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ.
3 ಆಹಾರದ ಕೊರತೆಯಿಂದ ಶೇ.37.9ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತ.
4ಶೇ.51.4ರಷ್ಟು ಮಹಿಳೆಯರಲ್ಲಿ
ರಕ್ತಹೀನತೆ ಸಮಸ್ಯೆ ಕಾಡುತ್ತಿದೆ.

Advertisement

102ನೇ ಸ್ಥಾನದಲ್ಲಿ ಭಾರತ
2019ರ Global Hunger Index ವರದಿಯಲ್ಲಿ ಭಾರತ 117 ರಾಷ್ಟ್ರಗಳ ಪೈಕಿ 102ನೇ ಸ್ಥಾನಕ್ಕೆ ಕುಸಿದಿದೆ. ಯಾಕೆಂದರೆ 2018ರಲ್ಲಿ ಭಾರತ 95ನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ.

02 ಬಿಲಿಯನ್‌ಜನರಿಗೆ ಬೇಕಾಗುವಷ್ಟು ಸತ್ವಯುತ ಮತ್ತು ಪೌಷ್ಟಿಕಾಂಶ ಯುಕ್ತ ಆಹಾರ ಲಭಿಸುತ್ತಿಲ್ಲ.
10 ಬಿಲಿಯನ್‌ ಜನರಿಗೆ 2050ರ ವೇಳೆಗೆ ಆರೋಗ್ಯಕರ ಆಹಾರದ ಕೊರತೆ ಉಂಟಾಗಲಿದೆ.
14% ಪ್ರತೀ ವರ್ಷ ಒಟ್ಟು ಉತ್ಪಾದನೆಯ ಶೇ. 14ರಷ್ಟು ಆಹಾರಗಳು ಕಡೆಯ ಹಂತದಲ್ಲಿ ಪೋಲಾಗುತ್ತಿವೆ.
690 ಮಿಲಿಯನ್‌ ಅಪೌಷ್ಟಿಕಾಂಶದಿಂದ ಬಳಲುತ್ತಿರುವವರು.
144 ಮಿಲಿಯನ್‌ ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ.
5.3 ಮಿಲಿಯನ್‌ ಅಪೌಷ್ಟಿಕಾಂಶದಿಂದ ಸಾವಿಗೀಡಾಗುತ್ತಿರುವ ಸಾವನ್ನಪ್ಪುತ್ತಿರುವ 5 ವರ್ಷದೊಳಗಿನ ಮಕ್ಕಳ ಪ್ರಮಾಣ.

ಆಹಾರ ಸಮಸ್ಯೆ ಇರುವ ಟಾಪ್‌ 10 ದೇಶಗಳು
ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌
ಚಾದ್‌
ಯೆಮೆನ್‌
ಮಡಗಾಸ್ಕರ್‌
ಸಿರಿಯಾ
ಜಾಂಬಿಯಾ
ಸಿಯೆರಾ ಲಿಯೋನ್‌
ಹೈಟಿ
ಸೂಡಾನ್‌
ಅಫ್ಘಾನಿಸ್ಥಾನ
ಟಿಮೋರ್‌ ಲಿಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next