Advertisement
ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಕಲಿಕಾ ಮತ್ತು ಸಂಶೋಧನ ವಿಭಾಗದ ವತಿಯಿಂದ ಆಹಾರ ಸಂಸ್ಕರಣೆ ಮತ್ತು ತಾಂತ್ರಿಕ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 1951ರಲ್ಲಿ ಆಹಾರ ಉತ್ಪಾದನೆಯು 50 ಮಿಲಿಯ ಟನ್‌ಳಾಗಿತ್ತು. ಆದರೆ ಈಗ 285 ಮಿಲಿಯ ಟನ್‌ಗಳಾಗಿದೆ. ಭಾರತವು ಹಾಲು, ಸೆಣಬು ಮತ್ತು ಅಕ್ಕಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಸಕ್ಕರೆ, ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ವಿಜ್ಞಾನಿಗಳ ಅಭೂತಪೂರ್ವ ಸಂಶೋಧನೆಯಿಂದ ಆಹಾರ ಉತ್ಪಾದನೆ ಯಲ್ಲಿ ಏರಿಕೆಯಾಗಿದೆ. ಆದರೂ ಒಟ್ಟು ಜನಸಂಖ್ಯೆಯ ಶೇ.30ರಷ್ಟು ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ಹಲವಾರು ಕಡೆಗಳಲ್ಲಿ ಆಹಾರವು ನಿರುಪಯೋಗವಾಗುತ್ತಿದ್ದು, ಅಗತ್ಯವಿದ್ದರಿಗೆ ಆಹಾರವು ಸಿಗುತ್ತಿಲ್ಲ. ನಾವು ಅಂತಹವರಿಗೆ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡಿ ಜನರ ಹಸಿವನ್ನು ನೀಗಿಸುವಲ್ಲಿ ಪ್ರಯತ್ನಿಸಬೇಕು ಎಂದರು.
Related Articles
ಬಳಿಕ ನಡೆದ ಗೋಷ್ಠಿಯಲ್ಲಿ ಎಂ. ಅಣ್ಣಪ್ಪ ಪೈ ‘ಆಹಾರ ಉದ್ಯಮದ ಉದ್ಯಮಶೀಲತೆ, ಹಸಿವು ಮುಕ್ತ ಜಗತ್ತಿಗೆ ಆಹಾರ ಉದ್ಯಮದ ಕೊಡುಗೆಗಳು’ ಹಾಗೂ ತಿಪಟೂರಿನ ಮುಕುಂದ ನಾಯ್ಡು ‘ಬೆಣ್ಣೆ ತಯಾರಿಕಾ ಕೌಶಲ ವಿಜ್ಞಾನದ ಜೊತೆ ಕಲೆ’ ಎಂಬ ವಿಷಯಗಳಲ್ಲಿ ಮಾತನಾಡಿದರು. ಮುಕುಂದ ನಾಯ್ಡು ಅವರು ಬೆಣ್ಣೆ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಿದರು.
Advertisement