Advertisement

ಮಾಲಿನ್ಯವು ಜೀವದ ವಿರುದ್ಧದ ಹಿಂಸೆ

04:55 AM Jun 06, 2018 | Karthik A |

ಹೊಸದಿಲ್ಲಿ: ‘ಪ್ಲಾಸ್ಟಿಕ್‌ ಬಳಕೆ ಮತ್ತು ವಾಯು ಮಾಲಿನ್ಯ ಎನ್ನುವುದು ಜೀವದ ವಿರುದ್ಧದ ಹಿಂಸೆಯಿದ್ದಂತೆ’ ಎಂದು ಅಧ್ಯಾತ್ಮ ಗುರು, ಇಷಾ ಪ್ರತಿಷ್ಠಾನದ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಮಗೆ ಏನು ಕೊಟ್ಟರೂ ಅದನ್ನು ನಾವು ಒಂದು ಸಮಸ್ಯೆಯಾಗಿ ಮಾರ್ಪಾಡು ಮಾಡುತ್ತೇವೆ ಎನ್ನುವುದಕ್ಕೆ ಪ್ಲಾಸ್ಟಿಕ್‌ಗಳೇ ಸಾಕ್ಷಿ. ಸಾವಿರಾರು ಬಾರಿ ಪುನರ್ಬಳಕೆ ಮಾಡುವಂಥ ವಸ್ತುವು ವರವಿದ್ದಂತೆ. ಆದರೆ ನಾವು ಅದನ್ನು ಶಾಪವಾಗಿ ಬದಲಿಸಿದ್ದೇವೆ. ಪ್ಲಾಸ್ಟಿಕ್‌ ನಿಷೇಧವನ್ನು ಕಾನೂನು ಮೂಲಕ ಜಾರಿ ಮಾಡಲು ಸಾಧ್ಯವಿಲ್ಲ. ಜನರಲ್ಲೇ ಜಾಗೃತಿ ಮೂಡಬೇಕು’ ಎಂದು ಹೇಳಿದ್ದಾರೆ.

Advertisement

ಹಲವು ರಾಜ್ಯಗಳಲ್ಲಿ ನಿಷೇಧ: ಈ ನಡುವೆ, ತಮಿಳುನಾಡು, ನಾಗಾಲ್ಯಾಂಡ್‌, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಸರಕಾರಗಳು ಶೀಘ್ರದಲ್ಲಿಯೇ ಪ್ಲಾಸ್ಟಿಕ್‌ ಮುಕ್ತ ರಾಜ್ಯಗಳಾಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ, ಉತ್ತರಾಖಂಡ ಪಾಲಿಥೀನ್‌ ಅನ್ನು ನಿಷೇಧಿಸುವುದಾಗಿ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next