Advertisement

ವಿಶ್ವ ಪರಿಸರ ದಿನ : ವಿದ್ಯಾರ್ಥಿಗಳಿಗೆ ಸ್ಪರ್ಧೆ

07:09 AM May 21, 2020 | mahesh |

ಮಂಗಳೂರು: ವಿಶ್ವ ಪರಿಸರ ದಿನ (ಜೂ. 5) ಅಂಗವಾಗಿ  ರಾಜ್ಯ ವಿಜ್ಞಾನ ಪರಿಷತ್ತು ವಿದ್ಯಾರ್ಥಿ ಗಳಿಗೆ ಚಿತ್ರಕಲೆ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ. ಜೀವ ವೈವಿಧ್ಯ ರಕ್ಷಣೆಯಿಂದ ಮಾನವ ಪ್ರಗತಿ/ ಕೋವಿಡ್ ಪಿಡುಗು- ನಿಸರ್ಗ, ಜೀವವೈವಿಧ್ಯಕ್ಕೆ ವರದಾನ / ಪರಿಸರ ಸಮತೋಲನದಲ್ಲಿ ಜೀವ ವೈವಿಧ್ಯದ ಪಾತ್ರ- ಈ ಮೂರು ವಿಷಯಗಳಲ್ಲಿ ಒಂದರಲ್ಲಿ ಚಿತ್ರ ಬರೆಯಬಹುದು.

Advertisement

ಡಾ| ಎಚ್‌. ನರಸಿಂಹಯ್ಯ ಜನ್ಮ ಶತಮಾನೋತ್ಸವ ಪ್ರಯುಕ್ತ ಲೇಖನ ಸ್ಪರ್ಧೆ ಇದ್ದು, “ಡಾ| ಎಚ್‌.ಎನ್‌. ವೈಚಾರಿಕತೆ ಮತ್ತು ವಿಚಾರಧಾರೆಗಳ ಪ್ರಸ್ತುತತೆ’, “ವಿಜ್ಞಾನ ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವದ ಪಾತ್ರ’, “ವಿಜ್ಞಾನ ತಂತ್ರಜ್ಞಾನದ ಪ್ರಗತಿಯಲ್ಲೂ ವೈಜ್ಞಾನಿಕ ಮನೋಭಾವ ಹಿಂದುಳಿ ಯಲು ಕಾರಣ’, “ವೈಜ್ಞಾನಿಕ ಮನೋಭಾವದ ಕೊರತೆಯಿಂದ ಆಗುತ್ತಿರುವ ಅನಾಹುತಗಳು’, “ಡಾ| ಎಚ್‌.ಎನ್‌. ಸರಳತೆ ಮತ್ತು ಸಾಮಾಜಿಕ ಚಿಂತನೆ’- ಇವುಗಳಲ್ಲಿ ಎರಡು ವಿಷಯಗಳ ಕುರಿತು ಲೇಖನ ಬರೆದು krvp.info @ gmail.com ಅಥವಾ ವಾಟ್ಸ್‌ಆ್ಯಪ್‌ 94835 49159ಕ್ಕೆ ಮೇ 31ರೊಳಗೆ ಕಳುಹಿಸ ಬಹುದು. ವಿವರಗಳಿಗೆ: 080 –  26718939 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next