Advertisement

ಕೊರೊನಾ ಭೀತಿ: ಏಷ್ಯಾ ಇಲವೆನ್ ವರ್ಸಸ್‌ ವಿಶ್ವ ಇಲವೆನ್‌ ಟಿ20 ರದ್ದು ಸಾಧ್ಯತೆ

09:49 AM Mar 12, 2020 | keerthan |

ಢಾಕಾ: ಕೊರೊನಾ ವೈರಸ್‌ ಕಾಟ ಸಾಲುಕೂಟಗಳ ರದ್ದತಿಗೆ ಕಾರಣವಾಗುತ್ತಿದೆ. ಇದೀಗ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಬೇಕಿರುವ ಏಷ್ಯಾ ಇಲೆವೆನ್‌ ಹಾಗೂ ವಿಶ್ವ ಇಲವೆನ್‌ ನಡುವಿನ ಎರಡು ಟಿ20 ಪಂದ್ಯಗಳು ರದ್ದಾಗುವುದು ಬಹುತೇಕ ಖಾತ್ರಿಯಾಗಿವೆ.

Advertisement

ಬಾಂಗ್ಲಾದೇಶ ಸಂಸ್ಥಾಪಕ ಮುಜಿಬುರ್‌ ರೆಹ್ಮಾನ್‌ ಅವರ 100ನೇ ಜನ್ಮದಿನಾಚರಣೆ ಅಂಗವಾಗಿ ಈ ಪಂದ್ಯಗಳನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಹಮ್ಮಿಕೊಂಡಿದೆ.

ಇಲ್ಲಿ ವಿಶ್ವದ ಖ್ಯಾತನಾಮ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.ಭಾರತ ದಿಂದ ಕೊಹ್ಲಿ, ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌ ಆಡುತ್ತಾರೆಂದು ಹೇಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರಣಿ ನಡೆಸುವುದು ಕಷ್ಟವೆನ್ನಲಾಗಿ ರುವುದರಿಂದ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಇನ್ನೂ ವಿಷಯ ಖಚಿತವಾಗಿಲ್ಲ ಎಂದು ಬಾಂಗ್ಲಾ ಮಂಡಳಿ ಹೇಳಿದೆ.

ಇಲ್ಲಿಯವರೆಗೆ ಬಾಂಗ್ಲಾದಲ್ಲಿ ಕೊರೊನಾ ಪರಿಣಾಮ ಹೇಳಿಕೊಳ್ಳುವಂತಹ ಮಟ್ಟದಲ್ಲಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿಯೇ ಇದೆ. ಈ ಪಂದ್ಯಗಳಲ್ಲಿ ಪಾಕಿಸ್ತಾನದ ಒಬ್ಬರೂ ಆಟಗಾರರು ಆಡುವುದಿಲ್ಲವೆನ್ನುವುದನ್ನು ಇಲ್ಲಿ ಗಮನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next