Advertisement

ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ: ಸಕ್ರೇಬೈಲು ಆನೆ ಬಿಡಾರದಲ್ಲಿ ವಿಶೇಷ ಪೂಜೆ

01:40 PM Aug 12, 2021 | Team Udayavani |

ಶಿವಮೊಗ್ಗ: ಇಂದು ವಿಶ್ವ ಆನೆಗಳ ದಿನಾಚರಣೆ. ಈ ಹಿನ್ನೆಲೆಯಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ವಿಶೇಷ ಪೂಜೆ ನಡೆಸಲಾಗಿದೆ.

Advertisement

ಗಾಜನೂರು ಬಳಿಯ ಸಕ್ರೇಬೈಲಿನಲ್ಲಿರುವ ಆನೆ ಬಿಡಾರದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಹಾರ ನೀಡಿದರು. ಸಿಸಿಎಫ್ ರವಿಶಂಕರ್, ಡಿಎಫ್ಓ ಐ.ಎಂ.ನಾಗರಾಜ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಮಾಡಲಾಯಿತು.

ಪ್ರತಿವರ್ಷ ಆನೆಗಳ ದಿನಾಚರಣೆ ಸಂದರ್ಭದಲ್ಲಿ ಆನೆಗಳ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಕೋವಿಡ್ ಕಾರಣಕ್ಕಾಗಿ ಈ ಬಾರಿ ಆನೆಗಳ ಕ್ರೀಡಾಕೂಟ ರದ್ದುಗೊಳಿಸಲಾಗಿದೆ. ಹೀಗಾಗಿ ಸರಳವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ, ಆನೆಗಳ ದಿನಾಚರಣೆ ಆಚರಿಸಲಾಯಿತು.

ಏನಿದರ ಹಿನ್ನೆಲೆ: ಏಷ್ಯಿನ್ ಮತ್ತು ಆಫ್ರಿಕನ್​ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು. 2012ರ ಆಗಸ್ಟ್ 12ರಂದು ಮೊದಲ ಬಾರಿಗೆ ವಿಶ್ವ ಆನೆಗಳ ದಿನವನ್ನು ಆಚರಿಸಲಾಯಿತು. ಕೆನಡಿಯನ್ ಸಿನಿಮಾ ಮೇಕರ್ ಪ್ಯಾಟ್ರಿಕಾ ಸಿಮ್ ಮತ್ತು ಥೈಲ್ಯಾಂಡ್ ಮೂಲದ ಆನೆಗಳ ಮರು ಪರಿಚಯ ಪ್ರತಿಷ್ಠಾನ ಜತೆಗೂಡಿ ಆನೆಗಳ ದಿನ ಆಚರಣೆಗೆ ಆರಂಭಿಸಿದ್ದರು.

Advertisement

ಇದನ್ನೂ ಓದಿ:ಎರಡು ದಿನಗಳ ಕರಾವಳಿ ಜಿಲ್ಲೆ ಪ್ರವಾಸ : ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ

ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲೇ ಶುರುವಾಯಿತು. ಆಕೆ ಸ್ಥಾಪಿಸಿದ ವಿಶ್ವ ಆನೆಗಳ ಸಮಾಜ ಈ ವಿಶ್ವ ಆನೆಗಳ ದಿನವನ್ನು ನಿರ್ವಹಣೆ ಮಾಡಿತ್ತು. ಈ ಸಂಸ್ಥೆ ಹಲವು ವರ್ಷಗಳಿಂದಲೂ ಆನೆಗಳ ಸುರಕ್ಷತೆ, ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. ಆನೆಯ ಕುರಿತಾಗಿಯೇ  ಮೊದಲ ವಿಶ್ವ ಆನೆ ದಿನಾಚರಣೆಯ ದಿನದಂದು ಹಾಲಿವುಡ್ ನಟ ವಿಲಿಯಂ ಶಟ್ನೇರ್  ‘ರಿಟರ್ನ್ಸ್ ಟೂ ಫಾರೆಸ್ಟ್’ ಎಂಬ ಸಾಕ್ಷಚಿತ್ರ ನಿರ್ಮಿಸಿದ್ದರು.

ಭಾರತದಲ್ಲಿ ಅತೀ ಹೆಚ್ಚು ಏಷ್ಯನ್ ಆನೆಗಳಿವೆ. 2017ರ ಗಣತಿಯ ಪ್ರಕಾರ ದೇಶದಲ್ಲಿ 27,312 ಆನೆಗಳಿವೆ. ಇದು ವಿಶ್ವದ ಆನೆಗಳ ಸಂಖ್ಯೆ 55%. ಭಾರತದಲ್ಲಿ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವೆಂದರೆ ಕರ್ನಾಟಕ. ಇಲ್ಲಿ 6049 ಆನೆಗಳಿದ್ದು, ಎರಡನೇ ಸ್ಥಾನದಲ್ಲರುವ ಅಸ್ಸಾಂನಲ್ಲಿ 5719 ಆನೆಗಳಿವೆ. (2017ರ ಗಣತಿ ಪ್ರಕಾರ)

Advertisement

Udayavani is now on Telegram. Click here to join our channel and stay updated with the latest news.

Next