Advertisement
ಅದು 1992ರ ವಿಶ್ವಕಪ್ ಪಂದ್ಯಾವಳಿಯ 2ನೇ ಸೆಮಿಫೈನಲ್. ಸಿಡ್ನಿಯಲ್ಲಿ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಹೋರಾಟಕ್ಕಿಳಿದಿದ್ದವು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 45 ಓವರ್‌ಗಳಲ್ಲಿ 6 ವಿಕೆಟಿಗೆ 256 ರನ್ ಮಾಡಿತ್ತು. ಅಮೋಘ ಚೇಸಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಗೆಲುವಿನ ಅಂಚಿಗೆ ಬಂದಿತ್ತು. 4 ವಿಕೆಟ್ ನೆರವಿನಿಂದ ಕೊನೆಯ 13 ಎಸೆತಗಳಲ್ಲಿ 22 ತೆಗೆಯುವ ಸುಲಭ ಟಾರ್ಗೆಟ್ ಎದುರಿತ್ತು.
ಈ ಹೊತ್ತಿಗೆ ಸರಿಯಾಗಿ ಮಳೆ ಸುರಿಯಿತು. ಪಂದ್ಯ ಸ್ಥಗಿತಗೊಂಡಿತು. ಆಗ ಯಾರಿಗೂ ಮಳೆ ನಿಯಮದ ತಿಳಿವಳಿಕೆ ಇರಲಿಲ್ಲ. ದಕ್ಷಿಣ ಆಫ್ರಿಕಾ ಇಲ್ಲಿಂದಲೇ ಆಟ ಮುಂದುವರಿಸಿ ಗೆದ್ದು ಬರುತ್ತದೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಸಂಭವಿಸಿದ್ದೇ ಬೇರೆ. ಸಿಡ್ನಿ ಅಂಗಳದ ದೈತ್ಯ ಸ್ಕೋರ್‌ಬೋರ್ಡ್ “ಒಂದು ಎಸೆತದಿಂದ 22 ರನ್’ ಎಂಬ ಮರು ನಿಗದಿತ ಗುರಿಯನ್ನು ಬಿತ್ತರಿಸಿದಾಗ ಎಲ್ಲರಿಗೂ ಶಾಕ್! ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಓವರ್ ಗತಿಯನ್ನು ಕಾಯ್ದುಕೊಳ್ಳದಿದ್ದುದು, ಮಳೆ ಯಿಂದ ಸಂಭವಿಸಿದ ನಷ್ಟವನ್ನೆಲ್ಲ ಪರಿಗಣಿಸಿ ನೂತನ ನಿಯಮದಂತೆ ಗುರಿಯನ್ನು
ಮರು ನಿಗದಿಗೊಳಿಸಲಾಗಿತ್ತು.
Related Articles
Advertisement