Advertisement

ಆಡದ ಭಾರತಕ್ಕೆ ವಿಶ್ವಕಪ್‌ ಕಿಮ್ಮತ್ತು!

06:00 AM Jun 12, 2018 | Team Udayavani |

ಈ ಬಾರಿಯ ವಿಶ್ವಕಪ್‌ ಪಂದ್ಯಗಳ “ಕಿಕ್‌ ಆಫ್ ಟೈಮ್‌’ ನಿಗದಿಪಡಿಸುವಾಗ “ಇಂಡಿಯನ್‌ ಸ್ಟಾಂಡರ್ಡ್‌ ಟೈಮ್‌’ (ಐಎಸ್‌ಟಿ) ಗಣನೆಗೆ ಬಂದಿದೆ. ಭಾರತದವರು ನಿದ್ದೆಗೆಟ್ಟು ಕಾಲ್ಚೆಂಡಾಟ ನೋಡುವುದನ್ನು ತಪ್ಪಿಸಿ ಪಂದ್ಯದ ಸಮಯವನ್ನು ನಿಗದಿಪಡಿಸಲಾಗಿದೆ. ಭಾರತೀಯರ ಫ‌ುಟ್‌ಬಾಲ್‌ ಕ್ರೇಜ್‌ ಹಾಗೂ ಇಲ್ಲಿನ ಮಾರುಕಟ್ಟೆಯನ್ನು ಫಿಫಾ ಚೆನ್ನಾಗಿ ಎನ್‌ಕ್ಯಾಶ್‌ ಮಾಡಿಕೊಂಡಿದೆ. ನಮ್ಮ ಫ‌ುಟ್‌ಬಾಲ್‌ ಪ್ರೀತಿ ಈ ಮೂಲಕವೂ ವೃದ್ಧಿಸಲಿ!

Advertisement

ವಿಶ್ವದ 234ಕ್ಕೂ ಹೆಚ್ಚಿನ ದೇಶಗಳು ಆಡುವ ಫ‌ುಟಬಾಲ್‌ನಲ್ಲಿ ಭಾರತಕ್ಕೆ 97ನೇ ಶ್ರೇಯಾಂಕ. ಈ ಬಾರಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ 32 ದೇಶಗಳಲ್ಲಿ ಭಾರತದ ಹೆಸರಿಲ್ಲ. ಭಾರತ ಅರ್ಹತೆಯ ಹತ್ತಿರ ಹತ್ತಿರವೂ ಬಂದಿಲ್ಲ. ಆದರೇನಂತೆ, ಈ ಬಾರಿಯ ವಿಶ್ವಕಪ್‌ ಪಂದ್ಯಗಳ “ಕಿಕ್‌ ಆಫ್ ಟೈಮ್‌’ ನಿಗದಿಪಡಿಸುವಾಗ “ಇಂಡಿಯನ್‌ ಸ್ಟಾಂಡರ್ಡ್‌ ಟೈಮ್‌’ (ಐಎಸ್‌ಟಿ) ಗಣನೆಗೆ ಬಂದಿದೆ. ಭಾರತದವರು ನಿದ್ದೆಗೆಟ್ಟು ಕಾಲ್ಚೆಂಡಾಟ ನೋಡುವುದನ್ನು ತಪ್ಪಿಸಿ ಪಂದ್ಯದ ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರಸಾರ ಮಾಧ್ಯಮಗಳ ಕೇಂದ್ರ
ಭಾರತದ ಜನಸಂಖ್ಯೆ ಪ್ರಸಾರ ಮಾಧ್ಯಮ ಗಳಿಗೆ ವಿಶೇಷ ಆಕರ್ಷಣೆ. 2010ರಲ್ಲಿ ದಕ್ಷಿಣ ಆಪ್ರಿಕಾದಲ್ಲಿ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ನಡೆದಾಗ ಅಲ್ಲಿನ ನೇರಪ್ರಸಾರದ ಸಮಯ ಭಾರತದ ವೀಕ್ಷಕರಿಗೆ ಅನುಕೂಲಕರವಾಗಿದ್ದರಿಂದ ಟಿಆರ್‌ಪಿ ಏರಿತ್ತು. ಅದೇ 2014ರಲ್ಲಿ ಬ್ರಝಿಲ್‌ನಲ್ಲಿ ವಿಶ್ವಕಪ್‌ ನಡೆದಾಗ 3.2 ಬಿಲಿಯನ್‌ ವೀಕ್ಷಕರನ್ನು ತಲುಪಿಯೂ ಏಶ್ಯದ ವೀಕ್ಷಕರ ಸಂಖ್ಯೆಯ ಶೇಕಡಾವಾರು ತಗ್ಗಿತ್ತು.

ಸ್ವಾರಸ್ಯವೆಂದರೆ, ಆಗಲೂ ಭಾರತದ ವೀಕ್ಷಕರ ಸಂಖ್ಯೆ ವೃದ್ಧಿಸಿತ್ತು. 2010ರಲ್ಲಿ 44.9 ಮಿಲಿಯನ್‌ ಇದ್ದರೆ 4 ವರ್ಷ ಕಳೆದಾಗ ಇದು 85.7 ಮಿಲಿಯನ್‌ಗೆ ಏರಿತ್ತು. ಈ ಹಂತದಲ್ಲಿ ಆತಿಥೇಯ ರಶ್ಯ ವಿಭಿನ್ನವಾಗಿ ಚಿಂತಿಸಿದೆ. ಅನುಕೂಲವಲ್ಲದ ಸಮಯದಲ್ಲಿಯೇ ವೀಕ್ಷಕರ ಸಂಖ್ಯೆ ಸರಿಸುಮಾರು ಇಮ್ಮಡಿಸಿರುವಾಗ, ಸೂಕ್ತವಾದ ಮುಹೂರ್ತವಿರಿಸಿದರೆ 100 ಮಿಲಿಯನ್‌ ವೀಕ್ಷಕರನ್ನು ದಾಟಬಹುದಲ್ಲವೇ ಎಂಬ ಲೆಕ್ಕಾಚಾರ ಹಾಕಿಕೊಂಡಿತು ಈ ಲೆಕ್ಕಾಚಾರದಲ್ಲಿ ಜೂನ್‌ 16ರಂದು ಫ್ರಾನ್ಸ್‌-ಆಸ್ಟ್ರೇಲಿಯ ಪಂದ್ಯ ಮಧ್ಯಾಹ್ನ 3.30ಕ್ಕೆ ಶುರು. ಬಹುತೇಕ ಪಂದ್ಯಗಳು ಅಬ್ಬಬ್ಟಾ ಎಂದರೂ ರಾತ್ರಿ 11.30ಕ್ಕೆ ಆರಂಭವಾಗುತ್ತವೆೆ. ಜೂನ್‌ 14ರ ಆರಂಭಿಕ ಪಂದ್ಯ 8.30ಕ್ಕೆ, ಹಾಗೇ ಜುಲೈ 15ರಂದು ಅಂತಿಮ ಪಂದ್ಯ ಕೂಡ ಇದೇ ಸಮಯಕ್ಕೆ ಆರಂಭವಾಗುತ್ತದೆ. ಭಾರತದ ಪಾಲಿಗೆ ತೀರಾ ತಡವಾಗಿ ಆರಂಭವಾಗುವ ಏಕೈಕ ಪಂದ್ಯ ಜೂನ್‌ 17ರಂದು ಮಧ್ಯರಾತ್ರಿ 12.30ಕ್ಕೆ ಕ್ರೊವೇಶಿಯಾ-ನೈಜೀರಿಯಾ ನಡುವೆ ಆಯೋಜನೆಯಾಗಿದೆ. ಮೂರೂವರೆ, ಐದೂವರೆ, ಎಂಟೂವರೆ, ಒಂಬತ್ತೂವರೆ…. ಫಿಫಾ ಪಂದ್ಯಗಳ ಈ ಸಮಯ ಭಾರತೀಯರನ್ನು ನಿದ್ದೆಗೆಡುವುದರಿಂದ ಬಚಾಯಿಸುತ್ತದೆ.

ಫಿಫಾ ಮೇಲೆ ಸೋನಿ ಪ್ರಭಾವ
ಈ ವರ್ಷದ ಪ್ರಸಾರದ ಹಕ್ಕನ್ನು ಹೊಂದಿರುವ ಸೋನಿ ಪಿಕ್ಚರ್ ನೆಟ್‌ವರ್ಕ್‌, ವೀಡಿಯೋ ಆನ್‌ ಡಿಮಾಂಡ್‌ ಸೌಲಭ್ಯದ ಸೋನಿ ಲೈವ್‌ನಲ್ಲೂ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ. ಅದು ಹೆಚ್ಚು ವೀಕ್ಷಕರನ್ನು ಕಾಣಲು ಭಾರತದ ಪ್ರçಮ್‌ ಟೈಮ್‌ಗೆ ಆಟದ ವೇಳಾಪಟ್ಟಿ ನಿಗದಿಗೊಳಿಸಲು ತನ್ನ ಪ್ರಭಾವ ಬೀರಿದೆ. ಇದನ್ನು ಫಿಫಾ ಸ್ವೀಕರಿಸಿದೆ!  ನೋಡುತ್ತಲೇ ಆಟದ ಪರಿಣತಿಯನ್ನು ಪಡೆಯುವುದಕ್ಕೆ ಸಾಧ್ಯವಾಗಲಿಕ್ಕಿಲ್ಲ, ಆದರೆ ಈ ಸ್ಫೂರ್ತಿ ಫ‌ುಟಬಾಲ್‌ನಲ್ಲೂ ಭಾರತವನ್ನು ಗಾವುದ ದೂರ ಮುಂದೆ ತರಬಲ್ಲದು. ಭಾರತೀಯರ ಫ‌ುಟ್‌ಬಾಲ್‌ ಪ್ರೀತಿ ಹೆಚ್ಚಲು ಇಂಥ ಒಂದೊಂದು ನಿರ್ಧಾರಗಳೂ ಸ್ವಾಗತಾರ್ಹ!

Advertisement

ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next