Advertisement

ವಿಶ್ವಕಪ್ ಮಾತು: ಸೌರವ್‌ ಗಂಗೂಲಿ

06:00 AM Jun 12, 2018 | Team Udayavani |

ಕೋಲ್ಕತಾದಲ್ಲಿ  ವಿಶ್ವಕಪ್‌ ಹವಾ…
 “ಹೌದು, ನಮ್ಮದು ಫ‌ುಟ್‌ಬಾಲ್‌ ನಗರಿಯೂ ಹೌದು. ಫಿಫಾ ವಿಶ್ವಕಪ್‌ ಹವಾ ಜೋರಾಗಿಯೇ ಬೀಸುತ್ತಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ಮಹತ್ವದ ಕ್ರಿಕೆಟ್‌ ಪಂದ್ಯಗಳಿಲ್ಲದಿರುವುದರಿಂದ ಎಲ್ಲರ ಗಮನ ಮಾಸ್ಕೋದತ್ತ ಕೇಂದ್ರೀಕೃತಗೊಂಡಿದೆ’

Advertisement

ವಿಶ್ವಕಪ್‌ಗೆ ದಾದಾ ಎಷ್ಟು ಸಿದ್ಧ?
“ಸಾವಿರಾರು ಮಂದಿ ಕೋಲ್ಕತಾದ ಫ‌ುಟ್‌ಬಾಲ್‌ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸದ್ಯ ಎಲ್ಲಿಯೂ ವಿದೇಶ ಪ್ರವಾಸವಿಲ್ಲ. ಹೀಗಾಗಿ ಮನೆಯಲ್ಲೇ ಕುಳಿತು ವಿಶ್ವಕಪ್‌ ಆಸ್ವಾದಿಸಬೇಕು ಎಂದಿದ್ದೇನೆ’

ಫೇವರಿಟ್‌ ತಂಡ, ಆಟಗಾರ…
“ಬ್ರಝಿಲ್‌ ನನ್ನ ನೆಚ್ಚಿನ ತಂಡ. ಬ್ರಝಿಲ್‌, ಆರ್ಜೆಂಟೀನಾ, ಜರ್ಮನಿ ತಂಡಗಳು ರಶ್ಯದಲ್ಲಿ ಮಿಂಚು ಹರಿಸಬಹುದು. ಆದರೆ ನಾನು ಮೆಸ್ಸಿ ಫ್ಯಾನ್‌. ಮೆಸ್ಸಿಯಿಂದ ಮ್ಯಾಜಿಕ್‌ ನಿರೀಕ್ಷಿಸುತ್ತಿದ್ದೇನೆ. ಮೆಸ್ಸಿಯ ಆರ್ಜೆಂಟೀನಾ ತಂಡ ಈವರೆಗೆ ವಿಶ್ವಕಪ್‌ ಗೆದ್ದಿಲ್ಲ. ಮೆಸ್ಸಿ ಪಾಲಿಗೆ ಇದು ಬಿಗ್‌ ವರ್ಲ್ಡ್ಕಪ್‌. ಮುಂದಿನ ವಿಶ್ವಕಪ್‌ನಲ್ಲಿ ಅವರು ಆಡುವ ಸಾಧ್ಯತೆ ಇಲ್ಲ’

ಭಾರತದಲ್ಲಿ  ಫ‌ುಟ್‌ಬಾಲ್‌ ಪ್ರಗತಿ…
“ಭಾರತಕ್ಕೆ ವಿಶ್ವಕಪ್‌ ಇನ್ನೂ ಬಹು ದೂರದ ಪಯಣ. ಇಲ್ಲಿ ನಿಧಾನವಾಗಿ ಫ‌ುಟ್‌ಬಾಲ್‌ ಕ್ರೇಜ್‌ ಹಬ್ಬುತ್ತಿದೆ. ಫ‌ುಟ್‌ಬಾಲ್‌ ರೋಮಾಂಚನ ಕೆಲವೇ ನಗರಗಳಿಗೆ ಸೀಮಿತಗೊಂಡಿದೆ. ಇದು ಎಲ್ಲ ರಾಜ್ಯಗಳಿಗೂ ವ್ಯಾಪಿಸಬೇಕು…’
 
ಇಂಡಿಯನ್‌ ಸೂಪರ್‌ ಲೀಗ್‌…
“ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಒಂದು ಒಳ್ಳೆಯ ಪರಿಕಲ್ಪನೆ. ನಾನು ಎಟಿಕೆ ಕ್ಲಬ್‌ನ ಸಹ ಮಾಲಕ. ಕ್ಲಬ್‌ ಮಟ್ಟದ ಫ‌ುಟ್‌ಬಾಲ್‌ ಕೂಟಗಳು ಹೆಚ್ಚು ಯಶಸ್ವಿಯಾಗಬೇಕು. ಕ್ರಮೇಣ ಐಪಿಎಲ್‌ ಮಾದರಿಯ ಫ‌ುಟ್‌ಬಾಲ್‌ ಟೂರ್ನಿಯನ್ನೂ ಆರಂಭಿಸಿದರೆ ಒಳ್ಳೆಯದು’

Advertisement

Udayavani is now on Telegram. Click here to join our channel and stay updated with the latest news.

Next