Advertisement

Fifa Qualifiers: ಅಫ್ಘಾನ್‌ ವಿರುದ್ಧ ಸೋಲು

11:15 PM Mar 26, 2024 | Team Udayavani |

ಗುವಾಹಟಿ: ಗುವಾಹಟಿಯಲ್ಲಿ ಮಂಗಳವಾರ ನಡೆದ 2026ರ ಫಿಫಾ ವಿಶ್ವಕಪ್‌ ಕ್ವಾಲಿಫೈಯರ್‌ ಎರಡನೇ ಸುತ್ತಿನ ಫುಟ್‌ಬಾಲ್‌ ಪಂದ್ಯದಲ್ಲಿ, ಅಫ್ಘಾನಿಸ್ಥಾನ ವಿರುದ್ಧ ಆತಿಥೇಯ ಭಾರತ 1-2 ಅಂತರದ ಸೋಲನುಭವಿಸಿದೆ.

Advertisement

ಆದರೆ ಈ ಪಂದ್ಯದ ಬಳಿಕವೂ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲೇ ಉಳಿದಿರುವುದರಿಂದ, ಭಾರತದ ಮೂರನೇ ಹಂತದ ಅರ್ಹತಾ ಸುತ್ತಿನ ಕನಸು ಜೀವಂತವಾಗಿದೆ.

ಪಂದ್ಯದ ಮೊದಲಾರ್ಧದಲ್ಲಿ ಭಾರತ ಖಾತೆ ತೆರೆಯಿತು. ಈ ಪಂದ್ಯದ ಮೂಲಕ ದಾಖಲೆಯ 150ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ನಾಯಕ ಸುನಿಲ್‌ ಚೆಟ್ರಿ 37ನೇ ನಿಮಿಷದಲ್ಲಿ ಗೋಲ್‌ ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಆದರೆ ದ್ವಿತೀಯಾರ್ಧದ 70ನೇ ಮತ್ತು 88ನೇ ನಿಮಿಷಗಳಲ್ಲಿ ಗೋಲ್‌ ದಾಖಲಿಸಿದ ಆಫ್ಘಾನ್‌, ಪಂದ್ಯವನ್ನು ತನ್ನದಾಗಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next