Advertisement
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನವು ಆರಂಭದಲ್ಲಿ ಎರಡು ವಿಕೆಟ್ ಬೇಗನೇ ಕಳೆದುಕೊಂಡು ಆಘಾತ ಅನುಭವಿಸಿತು. ಬಾಜರ್ ಆಜಂ ಮತ್ತು ಶಾದಾಬ್ ಖಾನ್ ಅವರ ಉಪಯುಕ್ತ ಆಟದಿಂದಾಗಿ ಪಾಕಿಸ್ಥಾನ ತಂಡ 7 ವಿಕೆಟಿಗೆ 159 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ, ಆಂಡ್ರೀಸ್ ಗೌಸ್ 35, ಆರನ್ ಜೋನ್ಸ್ ಔಟಾಗದೆ 36 ಮತ್ತು ನಿತೀಶ್ ಕುಮಾರ್ ಔಟಾಗದೆ 14 ರನ್ ಗಳ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು.ವಿಕೆಟ್ ಉಳಿಸಿಕೊಂಡ ಅಮೆರಿಕ ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಯಶಸ್ವಿಯಾದರು.
Related Articles
Advertisement
ಮೊಹಮ್ಮದ್ ರಿಜ್ವಾನ್ ಮತ್ತು ಉಸ್ಮಾನ್ ಖಾನ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಆಬಳಿಕ ಬಾಬರ್ ಮತ್ತು ಶಾದಾಬ್ ನಾಲ್ಕನೇ ವಿಕೆಟಿಗೆ 72 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಶಾದಾಬ್ 40 ಮತ್ತು ಬಾಬರ್ 44 ರನ್ ಹೊಡೆದರು. ಮೂಡಿಗೆರೆ ಮೂಲದ ನೋಸ್ತುಶ್ ಕೆಂಜಿಗೆ 30 ರನ್ನಿಗೆ ಮೂರು ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ.
ಅಮೆರಿಕ ಈಗ 2 ಪಂದ್ಯಗಳಿಂದ 2 ಗೆಲುವುಗಳನ್ನು ಹೊಂದಿದೆ. ಟೂರ್ನಮೆಂಟ್‌ಗೆ ಬಂದ ಪಾಕಿಸ್ಥಾನಕ್ಕೆ ಇದು ಅತ್ಯಂತ ನಿರಾಶಾದಾಯಕ ಅನಿರೀಕ್ಷಿತ ನಷ್ಟವಾಗಿದೆ. ಅಮೆರಿಕ ವಿರುದ್ಧ ಟಿ 20 ಪಂದ್ಯದಲ್ಲಿ ಸೋತ ಪಾಕಿಸ್ಥಾನವು ಬಾಂಗ್ಲಾದೇಶದ ನಂತರ ಟೆಸ್ಟ್ ಆಡುವ ಎರಡನೇ ತಂಡ ಎನಿಸಿಕೊಂಡಿತು. ವಿಶ್ವಕಪ್ ಗೂ ಮುನ್ನ ಅಮೆರಿಕ ಬಾಂಗ್ಲಾ ವಿರುದ್ಧ ಟಿ 20 ಸರಣಿ ಗೆದ್ದಿತ್ತು.