Advertisement

ಕೊಟ್ಟಿಗೆಯಲ್ಲಿ ಅಭ್ಯಾಸ ಮಾಡಿದವ ಈಗ ಶೂಟಿಂಗ್‌ ಚಿನ್ನ

01:05 AM Feb 26, 2019 | |

ಮೀರತ್‌ (ಉತ್ತರಪ್ರದೇಶ): ವಿಶ್ವದಾಖಲೆಯೊಂದಿಗೆ ವಿಶ್ವಕಪ್‌ ಶೂಟಿಂಗ್‌ ಚಿನ್ನ ಗೆದ್ದ ಉತ್ತರಪ್ರದೇಶದ ಹಳ್ಳಿಗಾಡಿನ ಶೂಟರ್‌ ಸೌರಭ್‌ ಚೌಧರಿ ಈಗ ಸುದ್ದಿಯಲ್ಲಿದ್ದಾರೆ. ಅವರು ಚಿನ್ನ ಗೆಲ್ಲಲು ಅಭ್ಯಾಸ ನಡೆಸಿದ್ದು ಎಲ್ಲಿ ಗೊತ್ತೇ? ಮನೆಯ ದನಗಳಿಗಾಗಿ ಮೇವು ಇಡುವ ಕೋಣೆಯಲ್ಲಿ!

Advertisement

ಸೌರಭ್‌ ಚೌಧರಿಗೆ ಇನ್ನೂ 16 ವರ್ಷ. ಭಾರತ ಕಂಡ ಪ್ರತಿಭಾವಂತ ಶೂಟರ್‌ಗಳಲ್ಲಿ ಒಬ್ಬರು. 2018ರಲ್ಲಿ ಏಶ್ಯನ್‌ ಗೇಮ್ಸ್‌ ಚಿನ್ನ ಗೆದ್ದರು. ಇದಕ್ಕೂ ಮುನ್ನ ಯುವ ವಿಶ್ವಚಾಂಪಿಯನ್‌ ಶಿಪ್‌, ಯುವ ಒಲಿಂಪಿಕ್ಸ್‌ನಲ್ಲೂ ಚಿನ್ನ ಜಯಿದ್ದರು.

ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಸಮಸ್ಯೆ
ಈ ಹಂತದಲ್ಲೆಲ್ಲ ಅವರು ಅಭ್ಯಾಸ ಮಾಡಿದ್ದು, ಭಾಗ³ತ್‌ ಜಿಲ್ಲೆಯ ಬಿನೌ°ಲಿಯಲ್ಲಿರುವ ಶೂಟಿಂಗ್‌ ಅಕಾಡೆಮಿಯಲ್ಲಿ. ಈ ಬಾರಿ ಅವರಿಗೆ ಈ ಅಕಾಡೆಮಿಯಲ್ಲಿ ಅಭ್ಯಾಸ ಮಾಡುವುದು ಕಷ್ಟವೆನಿಸಿತು. ಕಾರಣ, ಅಕಾಡೆಮಿ ಬಹಳ ಚಿಕ್ಕದು. ಅಲ್ಲಿ ಬೇರೆ ಬೇರೆ ಸಮಸ್ಯೆಗಳೂ ಇವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಬೆಳಗ್ಗಿನ ವಿಪರೀತ ಚಳಿಯಲ್ಲಿ 45 ನಿಮಿಷ ಮನೆಯಿಂದ ಪ್ರತಿದಿನ ಓಡಾಡಬೇಕಿತ್ತು. ಇದು ಚೌಧರಿಗೆ ಕಷ್ಟವೆನಿಸಿತು. ಅದಕ್ಕಾಗಿ ಚೌಧರಿ ಮತ್ತು ತರಬೇತುದಾರ ಅಮಿತ್‌ ಶೆವರಾನ್‌ ಒಗ್ಗೂಡಿ ಬೇರೆ ದಾರಿಯೊಂದನ್ನು ಕಂಡುಕೊಂಡರು.


ಅಭ್ಯಾಸ ಕೇಂದ್ರವಾದ ದನಗಳ ಮೇವು ಇಡುವ ಜಾಗ!

ಮನೆಯಲ್ಲೇ ಅಭ್ಯಾಸ ಆರಂಭ
ಉತ್ತರಪ್ರದೇಶದ ಮೀರತ್‌ನ ಕಲಿನಾ ಎನ್ನುವುದು ಚೌಧರಿ ಊರು. ಇದು ಪಕ್ಕಾ ಹಳ್ಳಿ. ಈ ಮನೆಯಲ್ಲೇ ಅಭ್ಯಾಸ ನಡೆಸುವುದು ಎಂದು ಶೆವರಾನ್‌ ಮತ್ತು ಚೌಧರಿ ನಿರ್ಧರಿಸಿದರು. ಆಗಲೇ ಚೌಧರಿ ಮಲಗುವ ಕೋಣೆಯಲ್ಲೇ ಒಂದು ಶೂಟಿಂಗ್‌ ಅಂಕಣದ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಅದು ಸರಿ ಇರಲಿಲ್ಲ. ಪ್ರತ್ಯೇಕವಾಗಿ ಇನ್ನೊಂದು ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದಾಗ ಹೊಳೆದದ್ದೇ ದನದ ಕೊಟ್ಟಿಗೆ!

ವಾಸ್ತವವಾಗಿ ಅದು ದನಗಳಿಗೆ ಹಾಕುವ ಮೇವನ್ನು ಇಡುವ ಜಾಗ. 15 ಮೀ. ಉದ್ದದ, ಅಗಲ ಬಹಳ ಕಡಿಮೆಯಿರುವ ಒಂದು ಜಾಗ. ಅದು ಮನೆಯ ಹಿಂದಿನ ದೊಡ್ಡ ಬೇವಿನಮರದ ಬಳಿಯಿತ್ತು. ಅಲ್ಲಿದ್ದ ಮೇವನ್ನು , ಇತರೆ ಕಸಕಡ್ಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ಅನಂತರ ಅಲ್ಲಿನ ಗೋಡೆಗೆ ಮರದ ಹಲಗೆಗಳನ್ನು ಜೋಡಿಸಿದರು. ಇಲ್ಲಿ 10 ಮೀ. ಏರ್‌ ಪಿಸ್ತೂಲ್‌ ಅಭ್ಯಾಸ ಶುರುವಾಯಿತು! ಮುಂದಿನದು ಇತಿಹಾಸ.

Advertisement
Advertisement

Udayavani is now on Telegram. Click here to join our channel and stay updated with the latest news.

Next