Advertisement

50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಪ್ರತಿಕೃತಿ! ಮೂಡುಬಿದಿರೆಯ ಸ್ವರ್ಣಶಿಲ್ಪಿಯ ಕೌಶಲ

04:32 PM Nov 18, 2023 | Team Udayavani |

ಮೂಡುಬಿದಿರೆ: ಈಗ ಎಲ್ಲೆಡೆ ವಿಶ್ವ ಕಪ್ 13ರದೇ ಹವಾ. ಮೂಡುಬಿದಿರೆ ದೊಡ್ಮನೆ ರಸ್ತೆ ವಠಾರದಲ್ಲಿ ಸ್ವರ್ಣ ಶಿಲ್ಪಿಯಾಗಿರುವ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯರ ಕ್ರಿಕೆಟ್ ಪ್ರೇಮದಿಂದಾಗಿ ಬರೇ 50 ಮಿಲಿಗ್ರಾಂ ಚಿನ್ನದಲ್ಲಿ ವಿಶ್ವಕಪ್ ಮೂಡಿಬಂದಿದೆ.

Advertisement

ಕೇವಲ 50 ಮಿಲಿಗ್ರಾಂ, 24 ಕ್ಯಾರೆಟ್, 916 ಹಾಲ್ಲೋ ಮಾರ್ಕ್ ನ 1.1ಇಂಚು ಎತ್ತರದ ಈ ವಿಶ್ವಕಪ್ ಪ್ರತಿಕೃತಿ ಸತೀಶ ಆಚಾರ್ಯರ ಲೇಟೆಸ್ಟ್ ಸ್ವರ್ಣ ಶಿಲ್ಪ.

ಕಳೆದ 24 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿರುವ ಈಗ 34ರ ಹರೆಯದ ಸತೀಶ ಆಚಾರ್ಯರು ಇದುವರೆಗೆ ನಾಲ್ಕು ವಿಶ್ವಕಪ್ ಗಳ ಮಿನಿ ಪ್ರತಿಕೃತಿ ತಯಾರಿಸಿದ್ದಾರೆ.

2007ರಲ್ಲಿ ಟಿ-20 ವಿಶ್ವಕಪ್ ಸಂದರ್ಭ 1 ಗ್ರಾಂ 200 ಮಿಲಿಗ್ರಾಂ ಚಿನ್ನ ಬಳಸಿ ವಿಶ್ವಕಪ್ ನಿರ್ಮಿಸಿ ಸುದ್ದಿಯಾಗಿದ್ದ ಅವರು 2011ರಲ್ಲಿ 3 ಗ್ರಾಂ ಬೆಳ್ಳಿಯಲ್ಲಿ 2 ಇಂಚು ಎತ್ತರದ ವಿಶ್ವಕಪ್ ತಯಾರಿಸಿ ಮತ್ತೆ ಅಸಕ್ತರ ಗಮನ ಸೆಳೆದಿದ್ದರು.

2013ರಲ್ಲಿ ಚಾಂಪಿಯನ್ ಶಿಪ್ ಟ್ರೋಫಿಯನ್ನು 500 ಮಿಲಿಗ್ರಾಂ ಚಿನ್ನದಲ್ಲಿ 1 ಇಂಚು ಎತ್ತರದ ಟ್ರೋಫಿ ತಯಾರಿಸಿ ತನ್ನ ಕೌಶಲ ಮೆರೆದಿದ್ದ ಸತೀಶ್ ಆಚಾರ್ಯರು ಇದೀಗ ಹತ್ತು ವರ್ಷಗಳ ಬಳಿಕ ಮಗದೊಮ್ಮೆ ತನ್ನ ಕ್ರಿಕೆಟ್ ಪ್ರೇಮವನ್ನು ಸುವರ್ಣ ಮಾಧ್ಯಮದಲ್ಲಿ ಅಭಿವ್ಯಕ್ತಿಸಿದ್ದಾರೆ.

Advertisement

ತಾನು ಈ ಹಿಂದೆ ಮೂರು ಮಿನಿ ಕಪ್ ಗಳನ್ನು ರಚಿಸಿದ್ದಾಗಲೆಲ್ಲ ಭಾರತ ಪದಕ ಗೆದ್ದಿದೆ. ಈ ಬಾರಿ ತನ್ನ ತಾಯಿ ರತ್ನ ಅವರ ಸ್ಮರಣೆಯೊಂದಿಗೆ ಬಂಗಾರದ ಮಿನಿ ವಿಶ್ವಕಪ್ ನಿರ್ಮಿದ್ದೇನೆ ಎಂದು ಗದ್ಗದಿತರಾಗಿ ನುಡಿದ ಸತೀಶ್ ಈ ಹಿಂದಿನ ಮೂರು ಸಂದರ್ಭಗಳಲ್ಲಿ ತಾನು ಕೂಟ ನಡೆಯುವ ಮುನ್ನವೇ ಮಿನಿ ಕಪ್ ತಯಾರಿಸಿ ಕಪ್ ಗೆಲ್ಲಲು ಮುನ್ನುಡಿ ಬರೆದಿದ್ದೆ. ಈ ಬಾರಿಯೂ ಭಾರತ್ ವಿಶ್ವಕಪ್ ಗೆಲ್ಲುವ ನಿರೀಕ್ಷೆ ತನ್ನದು ಎಂದರು.

ಶಿವಮೊಗ್ಗದವರೊಬ್ಬರು 70 ಮಿಲಿಗ್ರಾಂ ನಲ್ಲಿ ಕಪ್ ಮಾಡಿದ ಸುದ್ದಿ ಗೊತ್ತು. ನಾನು 60 ಮಿಲಿಗ್ರಾಂ ನಲ್ಲಿ ಮಾಡಿದರೆ ಹೇಗೆ ಅಂತ ಆರಂಭಿಸಿದೆ. ಕೊನೆಗೆ 50 ಮಿಲಿಗ್ರಾಂ ಚಿನ್ನದಲ್ಲಿಯೇ ಮಾಡಿ ಮುಗಿಸಿದೆ. ಇನ್ನು 20 ಮಿಲಿಗ್ರಾಂ ನಲ್ಲಿ ವಿಶ್ವಕಪ್ ಮಾಡಬೇಕೆಂದಿದ್ದೇನೆ ಎನ್ನುತ್ತಾರೆ ಸತೀಶ್ ಆಚಾರ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next