ಇತ್ತೀಚೆಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿ ಸ್ಥಾನವನ್ನು ಅಫ್ಘಾನಿಸ್ಥಾನ ಸೋಲಿಸಿ ದಾಗ, ಆ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಭಾರತದ ಧ್ವಜವನ್ನು ಹಾರಿಸಿದ್ದರು. ಇದಕ್ಕಾಗಿ ಐಸಿಸಿ ರಶೀದ್‌ಗೆ 55 ಲಕ್ಷ ರೂ. ದಂಡ ವಿಧಿಸಿದೆ ಎಂಬ ವದಂತಿಗಳು ಹಬ್ಬಿವೆ. ಮತ್ತೂಂದು ಕಡೆ ರಶೀದ್ ಧ್ವಜ ಹಾರಿಸಿದ್ದರಿಂದ ಅವರಿಗೆ ರತನ್ ಟಾಟಾ 10 ಕೋಟಿ ರೂ. ನೀಡಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು.
Advertisement
ಇದರಿಂದ ಎಚ್ಚೆತ್ತಿರುವ ರತನ್ ಟಾಟಾ, “ನಾನು ಐಸಿಸಿಗಾಗಲಿ, ಕ್ರಿಕೆಟ್‌ಗೆ ಸಂಬಂಧಪಟ್ಟ ಇತರ ಯಾರಿಗೇ ಆಗಲಿ, ದಂಡ ಹಾಕುವ ಬಗ್ಗೆಯಾಗಲಿ, ಬಹುಮಾನ ನೀಡುವ ಬಗ್ಗೆಯಾಗಲಿ ಸಲಹೆ ನೀಡಿಲ್ಲ. ನಾನು ಕ್ರಿಕೆಟ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ’ ಎಂದು “ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.