Advertisement

ವಿಶ್ವದಾಖಲೆಯ ಪಂದ್ಯ: ಇಂಗ್ಲೆಂಡ್‌ ಜಯಭೇರಿ

06:15 AM Jun 21, 2018 | Team Udayavani |

ನಾಟಿಂಗಂ: ಏಕದಿನ ಇತಿಹಾಸದ ಸರ್ವಾಧಿಕ ಮೊತ್ತ ಪೇರಿಸಿ ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್‌, ಪ್ರವಾಸಿ ಆಸ್ಟ್ರೇಲಿಯದೆದುರಿನ ನಾಟಿಂಗಂ ಪಂದ್ಯವನ್ನು 242 ರನ್ನುಗಳ ಭಾರೀ ಅಂತರದಿಂದ ಜಯಿಸಿದೆ. ಇದು ವಿಶ್ವಕಪ್‌ ಚಾಂಪಿಯನ್‌ ಆಸೀಸ್‌ಗೆ ಎದುರಾದ ಅತೀ ದೊಡ್ಡ ಸೋಲಾಗಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ತಂಡ ಕಾಂಗರೂ ದಾಳಿಯನ್ನು ಪುಡಿಗುಟ್ಟಿ 6 ವಿಕೆಟಿಗೆ 481 ರನ್‌ ರಾಶಿ ಹಾಕಿತ್ತು. ಇದು 4,011 ಪಂದ್ಯಗಳ ಏಕದಿನ ಚರಿತ್ರೆಯಲ್ಲಿ ತಂಡವೊಂದು ಪೇರಿಸಿದ ಅತೀ ದೊಡ್ಡ ಮೊತ್ತವಾಗಿತ್ತು. ಇಂಗ್ಲೆಂಡಿನ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಜಾನಿ ಬೇರ್‌ಸ್ಟೊ (139), ಅಲೆಕ್ಸ್‌ ಹೇಲ್ಸ್‌ (147) ಅವರ ಅಮೋಘ ಶತಕ; ಜಾಸನ್‌ ರಾಯ್‌ (82) ಹಾಗೂ ಇಯಾನ್‌ ಮಾರ್ಗನ್‌ (67) ಅವರ ಭರ್ಜರಿ ಬ್ಯಾಟಿಂಗ್‌. ರಾಯ್‌-ಬೇರ್‌ಸ್ಟೊ ಮೊದಲ ವಿಕೆಟಿಗೆ 19.3 ಓವರ್‌ಗಳಿಂದ 159 ರನ್‌, ಬೇರ್‌ಸ್ಟೊ-ಹೇಲ್ಸ್‌ ದ್ವಿತೀಯ ವಿಕೆಟಿಗೆ 151 ರನ್‌ ರಾಶಿ ಹಾಕಿದರು. ಆಂಗ್ಲರ ಬ್ಯಾಟಿಂಗ್‌ ಸರದಿಯಲ್ಲಿ 41 ಬೌಂಡರಿ ಹಾಗೂ 21 ಸಿಕ್ಸರ್‌ ಸಿಡಿದವು. ಆಸ್ಟ್ರೇಲಿಯದ ಬ್ಯಾಟಿಂಗ್‌ ವೇಳೆ ಕೇವಲ ಒಂದು ಅರ್ಧ ಶತಕವಷ್ಟೇ ಕಂಡುಬಂತು. ಆರಂಭಕಾರ ಟ್ರಾÂವಿಸ್‌ ಹೆಡ್‌ 51 ರನ್‌ ಹೊಡೆದರು. 

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-6 ವಿಕೆಟಿಗೆ 481 (ಹೇಲ್ಸ್‌ 147, ಬೇರ್‌ಸ್ಟೊ 139, ರಾಯ್‌ 82, ಮಾರ್ಗನ್‌ 67, ರಿಚರ್ಡನ್‌ 92ಕ್ಕೆ 3). ಆಸ್ಟ್ರೇಲಿಯ-37 ಓವರ್‌ಗಳಲ್ಲಿ 239 (ಹೆಡ್‌ 51, ಸ್ಟೊಯಿನಿಸ್‌ 44, ಅಗರ್‌ 25, ರಶೀದ್‌ 47ಕ್ಕೆ 4, ಅಲಿ 28ಕ್ಕೆ 3, ವಿಲ್ಲಿ 56ಕ್ಕೆ 2).
ಪಂದ್ಯಶ್ರೇಷ್ಠ: ಜಾಸನ್‌ ರಾಯ್‌.

Advertisement

Udayavani is now on Telegram. Click here to join our channel and stay updated with the latest news.

Next