Advertisement

World Cup; ಅಜೇಯ ಭಾರತಕ್ಕೆ ಇಂದು ಲಂಕಾ ಸವಾಲು

12:23 AM Nov 02, 2023 | Team Udayavani |

ಮುಂಬಯಿ: ಹನ್ನೆರಡು ವರ್ಷಗಳ ಹಿಂದೆ ಶ್ರೀಲಂಕಾವನ್ನು ಸದೆಬಡಿದು 2011ರ ಎಪ್ರಿಲ್‌ನಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದ ಭಾರತ ತಂಡವು ಇದೀಗ ಇನ್ನೊಂದು ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಲು ಸಜ್ಜಾಗಿದೆ. ಪ್ರಚಂಡ ಫಾರ್ಮ್ ಮತ್ತು ಆಡಿದ ಎಲ್ಲ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶ ಖಚಿತ ಪಡಿಸಿರುವ ಭಾರತ ತಂಡವು ಗುರು ವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

Advertisement

2011ರ ವಿಶ್ವಕಪ್‌ ಫೈನಲ್‌ ಎರಡು ಬಲಿಷ್ಠ ತಂಡಗಳ ನಡುವಿನ ಹೋರಾಟವಾಗಿತ್ತು. ಆದರೆ ಈ ಬಾರಿ ಶ್ರೀಲಂಕಾ ಅಷ್ಟೊಂದು ಬಲಿಷ್ಠವಾಗಿಲ್ಲ. ಕೇವಲ ಎರಡು ಪಂದ್ಯಗಳಲ್ಲಿ ಗೆದ್ದಿ ರುವ ಶ್ರೀಲಂಕಾ ತಂಡ ಸಾಧಾರಣ ತಂಡವಾಗಿದ್ದು ಭಾರತಕ್ಕೆ ಯಾವ ರೀತಿ ತಿರುಗೇಟು ನೀಡಬಹುದು ಎಂಬು ದನ್ನು ನೋಡಬೇಕಾಗಿದೆ. ಆದರೆ ಭಾರತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಭುತ ನಿರ್ವಹಣೆ ನೀಡುತ್ತ ಬಂದಿದ್ದು ಗೆಲುವಿನ ಹುಮ್ಮಸ್ಸಿನಲ್ಲಿದೆ.

ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತವು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ ವಿರುದ್ಧ ಒಂದು ಹಂತ ದಲ್ಲಿ ಎರಡು ರನ್ನಿಗೆ 3 ವಿಕೆಟ್‌ ಕಳೆದು ಕೊಂಡು ಶೋಚನೀಯ ಸ್ಥಿತಿಗೆ ತಲು ಪಿದ್ದರೂ ಅದ್ಭುತ ರೀತಿಯಲ್ಲಿ ಆಡಿ ಗೆಲುವು ದಾಖಲಿಸಿದ್ದ ಭಾರತ ತನ್ನ ಬ್ಯಾಟಿಂಗ್‌ ಆಳವನ್ನು ತೋರಿಸಿ ಕೊಟ್ಟಿದೆ. ಇಂಗ್ಲೆಂಡ್‌ ವಿರುದ್ಧ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 229 ರನ್‌ ಗಳಿಸಿದ್ದರೂ ಅದ್ಭುತ ಬೌಲಿಂಗ್‌ ವ್ಯೂಹ ಸಂಘಟಿಸಿ ವಿಶ್ವ ಚಾಂಪಿಯನ್‌ ತಂಡವನ್ನು ಕಟ್ಟಿ ಹಾಕಿರುವುದು ಭಾರತದ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.

ಹಾರ್ದಿಕ್‌ ಪಾಂಡ್ಯ ಅವರ ಅನುಪ ಸ್ಥಿತಿ ಯಲ್ಲಿಯೂ ಭಾರತ ಉತ್ಕೃಷ್ಟ ನಿರ್ವಹಣೆ ನೀಡುತ್ತ ಬಂದಿದೆ. ಪಾಂಡ್ಯ ಬಹುತೇಕ ಲೀಗ್‌ನ ಯಾವುದೇ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ತಂಡದ ಬೌಲರ್‌ಗಳಾದ ಶಮಿ, ಬುಮ್ರಾ, ಜಡೇಜ ಮುಂತಾ ದವರು ಪರಿಣಾಮಕಾರಿ ದಾಳಿ ಸಂಘಟಿಸಿದ್ದರಿಂದ ಭಾರತ ಯಾವುದೇ ಚಿಂತೆಯಿಲ್ಲದೆ ಆಡುತ್ತಿದೆ.

ವಿಶ್ವಕಪ್‌ಗೆ ಬರುವ ಮೊದಲು ಸ್ಥಿರ ನಿರ್ವಹಣೆ ನೀಡುತ್ತ ಬಂದಿದ್ದ ಶುಭ್‌ಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಈ ಕೂಟದಲ್ಲಿ ಗಮನಾರ್ಹ ನಿರ್ವಹಣೆ ನೀಡಿಲ್ಲ. ಆರಂಭದ ಎರಡು ಪಂದ್ಯಗಳಲ್ಲಿ ಆಡದಿದ್ದ ಗಿಲ್‌ ಒಂದು ಅರ್ಧಶತಕ ಮಾತ್ರ ಹೊಡೆದಿದ್ದಾರೆ. ಅಯ್ಯರ್‌ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದಾರೆ.

Advertisement

ರೋಹಿತ್‌ ಅಮೋಘ ಆಟ
ಈ ವಿಶ್ವಕಪ್‌ನಲ್ಲಿ ನಾಯಕ ರೋಹಿತ್‌ ಶರ್ಮ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಶತಕ ಮತ್ತು ಎರಡು ಅರ್ಧಶತಕ ಹೊಡೆ ದಿರುವ ಅವರು 398 ರನ್ನು ಗಳೊಂದಿಗೆ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. ಅವರು ತವರಿನ ಅಭಿಮಾನಿಗಳೆದುರು ಮತೊ¾ಮ್ಮೆ ಪ್ರಚಂಡ ಪ್ರದರ್ಶನ ನೀಡುವ ಉತ್ಸಾಹ ದಲ್ಲಿದ್ದಾರೆ. ಅವರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಸೂರ್ಯಕುಮಾರ್‌ ಯಾದವ್‌, ಶಾದೂìಲ್‌ ಠಾಕೂರ್‌ ಆಡುವ ಸಾಧ್ಯತೆಯಿದೆ.

ಶ್ರೀಲಂಕಾ ನೀರಸ ನಿರ್ವಹಣೆ
ಈ ವಿಶ್ವಕಪ್‌ನಲ್ಲಿ ಶ್ರೀಲಂಕಾದ ನಿರ್ವಹಣೆ ನೀರಸವಾಗಿದೆ. ಗಾಯದ ಸಮಸ್ಯೆ ಮತ್ತು ಪ್ರಮುಖ ಆಟಗಾರರು ಲಭ್ಯವಿಲ್ಲದ ಕಾರಣ ತಂಡ ಶ್ರೇಷ್ಠ ನಿರ್ವಹಣೆ ನೀಡಲು ಒದ್ದಾಡುತ್ತಿದೆ. ತಂಡದ ಸದೀರ ಸಮರವಿಕ್ರಮ ಉತ್ತಮ ಫಾರ್ಮ್ ನಲ್ಲಿದ್ದು ಆಡಿದ ಆರು ಪಂದ್ಯಗಳಿಂದ 331 ರನ್‌ ಗಳಿಸಿದ್ದಾರೆ. ಒಂದು ಶತಕ ಹೊಡೆದಿದ್ದಾರೆ. ಪಥುಮ್‌ ನಿಸ್ಸಂಕ ಕೂಡ ಉತ್ತಮ ಫಾರ್ಮ್
ನಲ್ಲಿದ್ದು ಗಿಲ್‌ ಬಳಿಕ ವರ್ಷವೊಂದರಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಇನ್ನೋರ್ವ ಆಟಗಾರ ಎಂದೆನಿಸಿಕೊಂಡಿ ದ್ದಾರೆ. ತಂಡದ ಬೌಲಿಂಗ್‌ ಅಷ್ಟೊಂದು ತೀಕ್ಷ್ಣವಾಗಿಲ್ಲ.

ವಿಶ್ವಕಪ್‌ ಮುಖಾಮುಖಿ
 ಪಂದ್ಯಗಳು: 09
 ಭಾರತ ಜಯ: 04
 ಶ್ರೀಲಂಕಾ ಜಯ: 04
 ಫ‌ಲಿತಾಂಶ ಇಲ್ಲ : 01
2019ರ ವಿಶ್ವಕಪ್‌ ಫ‌ಲಿತಾಂಶ
ಭಾರತಕ್ಕೆ 7 ವಿಕೆಟ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next