Advertisement
ವಿಷಕಾರಿ ಮಬ್ಬು ದಪ್ಪ ಪದರವು ರಾಜಧಾನಿಯನ್ನು ಮತ್ತೂಮ್ಮೆ ಆವರಿಸಿದೆ. ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) ತೀವ್ರ ಮಟ್ಟದಲ್ಲಿ ಇರುವ ಕಾರಣ ಉಭಯ ತಂಡಗಳು ಹೋರಾಂಗಣದಲ್ಲಿ ತಮ್ಮ ತರಬೇತಿಯನ್ನು ಕಡಿತಗೊಳಿಸಿವೆ.
Related Articles
ಬಾಂಗ್ಲಾದೇಶವು ಈಗಾಗಲೇ ಸೆಮಿ ಫೈನಲ್ ರೇಸ್‌ನಿಂದ ಹೊರಬಿದ್ದಿದ್ದರೆ ಲೆಕ್ಕಾಚಾರ ಮತ್ತು ಅದೃಷ್ಟದಿಂದ ಶ್ರೀಲಂಕಾ ತಂಡ ಮುನ್ನಡೆಯುವ ಸಾಧ್ಯತೆಯಿದೆ. ಸದ್ಯ 9ನೇ ಸ್ಥಾನ ದಲ್ಲಿರುವ ಬಾಂಗ್ಲಾದೇಶವು ಗೌರವ ಕ್ಕಾಗಿ ಆಡಬೇಕಾಗಿದೆ.
Advertisement
ದಾಖಲೆ ಶ್ರೀಲಂಕಾ ಪರವಿಶ್ವಕಪ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾವೇ ಗರಿಷ್ಠ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಉಭಯ ತಂಡಗಳು 52 ಏಕದಿನ ಪಂದ್ಯಗಳನ್ನಾಡಿದ್ದು ಶ್ರೀಲಂಕಾ 42ರಲ್ಲಿ ಜಯ ಸಾಧಿಸಿದ್ದರೆ ಬಾಂಗ್ಲಾದೇಶು 9ರಲ್ಲಿ ಗೆಲುವು ಒಲಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಮುಖಾಮುಖೀಯಾಗಿದ್ದು ಮೂರು ಬಾರಿ ಶ್ರೀಲಂಕಾ ಜಯ ಸಾಧಿಸಿದೆ. ಆದರೆ ಬಾಂಗ್ಲಾ ಟೈಗರ್ ವಿಶ್ವಕಪ್ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದ ಉತ್ಸಾಹದಲ್ಲಿದೆ. ಅದೇ ಉತ್ಸಾಹದಲ್ಲಿ ಸೋಮವಾರವೂ ಹೋರಾಡುವ ಸಾಧ್ಯತೆಯಿದೆ.
ಭಾರತ ವಿರುದ್ಧ ಹೀನಾಯ ಬ್ಯಾಟಿಂಗ್ ಪ್ರದರ್ಶನದ ಬಳಿಕ ಶ್ರೀಲಂಕಾ ತಂಡ ಬಾಂಗ್ಲಾವನ್ನು ಎದುರಿಸಲು ಸಜ್ಜಾಗುತ್ತಿದೆ. ಭಾರತ ನೀಡಿದ ಕಠಿನ ಗುರಿಯೆದುರು ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿ ಕೇವಲ 55 ರನ್ನಿಗೆ ಆಲೌಟಾದ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧ ಯಾವ ರೀತಿ ಆಡುತ್ತದೆ ಎಂಬುದನ್ನು ನೋಡಬೇಕಾಗಿದೆ. ಬಾಂಗ್ಲಾದ ಸ್ಪಿನ್ ಮತ್ತು ವೇಗದ ದಾಳಿ ಉತ್ತಮವಾಗಿದ್ದು ಶ್ರೀಲಂಕಾ ಆಟಗಾರರು ಹೇಗೆ ಎದುರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಉತ್ತಮ ಫಾರ್ಮ್ನಲ್ಲಿರುವ ಸದೀರ ಸಮರವಿಕ್ರಮ, ಪಥುಮ್ ನಿಸ್ಸಂಕ ಮತ್ತು ನಾಯಕ ಕುಸಲ್ ಮೆಂಡಿಸ್ ಅವರ ನಿರ್ವಹಣೆಯ ಮೇಲೆ ಶ್ರೀಲಂಕಾದ ಭವಿಷ್ಯ ನಿಂತಿದೆ. ವೈದ್ಯಕೀಯ ಸಮಿತಿ ಜತೆ ಸಂಪರ್ಕ
ಬಾಂಗ್ಲಾದೇಶ ತಂಡದ ವಿರುದ್ಧ ನಡೆಯಲಿರುವ ವಿಶ್ವಕಪ್ ಪಂದ್ಯದ ಬಗೆಗಿನ ಅನಿಶಿjತತೆ ಮುಂದುವರಿದ ಕಾರಣ ಶ್ರೀಲಂಕಾ ಕ್ರಿಕೆಟ್ ತಂಡದ ವ್ಯವಸ್ಥಾಪಕ ಮಹಿಂದಾ ಹಲಂಗೋಡ ಅವರು ವೈದ್ಯಕೀಯ ಸಮಿತಿಯ ಜತೆ ನಿಕಟ ಸಂಪರ್ಕದಲ್ಲಿದ್ದು ಪಂದ್ಯ ಬಗ್ಗೆ ಐಸಿಸಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ ಎಂದುಹೇಳಿದ್ದಾರೆ. ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ವಿಶ್ವಕಪ್ ಪಂದ್ಯದ ಸ್ಥಳವನ್ನು ಬದಲಾಯಿಸುವಂತೆ ಶ್ರೀಲಂಕಾ ಐಸಿಸಿಗೆ ಮನವಿ ಮಾಡಿಲ್ಲ ಎಂದು ಹಲಂಗೋಡ ಸ್ಪಷ್ಟಪಡಿಸಿದ್ದಾರೆ.