Advertisement

World Cup; ಅಫ್ಘಾನ್‌ ಕ್ರಿಕೆಟಿಗರಿಗೆ ಇರ್ಫಾನ್‌ ಪಠಾಣ್‌ ಔತಣ

11:43 PM Nov 07, 2023 | Team Udayavani |

ಮುಂಬಯಿ: ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರ ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದೊಂದಿಗಿನ ನಂಟು ಮುಂದುವರಿದಿದೆ. ಅವರು ಮುಂಬ ಯಿಯ ತಮ್ಮ ನಿವಾಸದಲ್ಲಿ ಅಫ್ಘಾನ್‌ ತಂಡಕ್ಕೆ ವಿಶೇಷ ಔತಣ ಕೂಟವನ್ನು ಏರ್ಪಡಿಸಿ ಸುದ್ದಿಯಾಗಿದ್ದಾರೆ.

Advertisement

ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಈ ಕೂಟದಲ್ಲಿ ಅಫ್ಘಾನ್‌ ಟೀಮ್‌ನ ಬಹುತೇಕ ಎಲ್ಲ ಆಟಗಾರರೂ ಪಾಲ್ಗೊಂಡಿದ್ದರು.
ಸಹೋದರ ಯೂಸುಫ್ ಪಠಾಣ್‌, ಖ್ಯಾತ ಗಾಯಕ ಅದ್ನಾನ್‌ ಸಮಿ, ಹಿರಿಯ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅವರೆಲ್ಲ ವಿಶೇಷ ಆಹ್ವಾನಿತರಾಗಿದ್ದರು. ಇದರ ಕೆಲವು ಚಿತ್ರಗಳನ್ನು ಇರ್ಫಾನ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಫ್ಘಾನ್‌ ತಂಡ ಪಾಕಿಸ್ಥಾನವನ್ನು ಸೋಲಿಸಿದ ಬಳಿಕ ರಶೀದ್‌ ಖಾನ್‌ ಅವರೊಂದಿಗೆ ಇರ್ಫಾನ್‌ ಪಠಾಣ್‌ ಡ್ಯಾನ್ಸ್‌ ಮಾಡಿದ ದೃಶ್ಯಾವಳಿ ವೈರಲ್‌ ಆಗಿತ್ತು. ಬಳಿಕ ನೆದರ್ಲೆಂಡ್ಸ್‌ ವಿರುದ್ಧ ಅಫ್ಘಾನ್‌ ಗೆದ್ದಾಗಲೂ ಇರ್ಫಾನ್‌ ಡ್ಯಾನ್ಸ್‌ ಮಾಡಿ ಸಂಭ್ರಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next