Advertisement
ಒಡಿಶಾದ ಭುವನೇಶ್ವರದಲ್ಲಿ ಮಾ.26ರಂದು ಕತಾರ್ -ಭಾರತ ನಡುವೆ ಪಂದ್ಯ ನಡೆಯುವುದಿತ್ತು. ಅದಾದ ಬಳಿಕ ಜೂ.4ರಂದು ಭಾರತ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಬೇಕಿತ್ತು. ಜೂ.9ರಂದು ಕೋಲ್ಕತದಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ ಆಡುವುದಿತ್ತು. ಆಟಗಾರರ ಆರೋಗ್ಯದ ಹಿನ್ನೆಲೆಯಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಮುಂದಿನ ನಿರ್ಧಾರವನ್ನುಫಿಫಾ ಜತೆಗೆ ಮಾತುಕತೆ ನಡೆಸಿ ಪ್ರಕಟಿಸುವುದಾಗಿ ಏಷ್ಯನ್ ಫುಟ್‌ಬಾಲ್ ಕಾನ್ಫಿಡರೇಷನ್ ತಿಳಿಸಿದೆ.
ಕ್ಯಾಲಿಫೋರ್ನಿಯಾ: ಕೊರೊನಾ ಭೀತಿಗೆ ಅಮೆರಿಕದಲ್ಲಿ ಮೊದಲ ಬಾರಿಗೆ ಪ್ರಮುಖ ಪಂದ್ಯಾವಳಿಯೊಂದು ಬಲಿಯಾಗಿದೆ. ಇಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಇಂಡಿಯನ್ ವೆಲ್ಸ್ ಓಪನ್ ಟೆನಿಸ್ ಕೂಟವನ್ನು ರದ್ದುಗೊಳಿಸಲಾಗಿದೆ. ಕೂಟಕ್ಕೆ ಇನ್ನೇನು 3 ದಿನಗಳಿವೆ ಎನ್ನುವಾಗ ಇದನ್ನು ಆಡಿಸದಿರಲು ಸಂಘಟಕರು ನಿರ್ಧರಿಸಿದರು. ರವಿವಾರ ರಾತ್ರಿ ಈ ಪ್ರಕಟನೆ ಹೊರಬಿತ್ತು. ಮೊದಲು ಹೆಚ್ಚುವರಿ ಮುನ್ನೆಚ್ಚರಿಕೆಯೊಂದಿಗೆ ಈ ಪಂದ್ಯಾವಳಿಯನ್ನು ಆಡಿಸಲು ತೀರ್ಮಾನಿಸಲಾಗಿತ್ತು. ಕಡೇ ಗಳಿಕೆಯಲ್ಲಿ ಇದನ್ನು ರದ್ದುಪಡಿಸಿದ್ದಕ್ಕೆ ಖ್ಯಾತ ಟೆನಿಸಿಗ ರಫೆಲ್ ನಡಾಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತೀ ವರ್ಷ 4 ಲಕ್ಷದಷ್ಟು ವೀಕ್ಷಕರು ಈ ಪಂದ್ಯಾವಳಿಯನ್ನು ಆಸ್ವಾದಿಸುತ್ತಿದ್ದರು.