Advertisement

World Cup; ಭಾರತ – ಪಾಕ್‌ ಪಂದ್ಯಕ್ಕೆ ಮಳೆಯ ಭೀತಿ

11:55 PM Oct 12, 2023 | Team Udayavani |

ಅಹ್ಮದಾಬಾದ್‌: ಮುಂದಿನ ರವಿವಾರ (ಅ.15) ದಿಂದ ದೇಶಾದ್ಯಂತ ನವರಾತ್ರಿ ಆರಂಭ ವಾಗಲಿದೆ. ಅದ ಕ್ಕಿಂತ ಒಂದು ಮೊದಲು (ಅ. 14) ಭಾರತ- ಪಾಕಿಸ್ಥಾನ ನಡುವೆ ಅಹ್ಮದಾಬಾದ್‌ನಲ್ಲಿ ವಿಶ್ವಕಪ್‌ನ ಮಹತ್ವದ ಪಂದ್ಯ ನಡೆಯಲಿದೆ.

Advertisement

ಈ ಪಂದ್ಯಕ್ಕಾಗಿ ಕಂಡುಕೇಳರಿಯದ ಭದ್ರತೆಯನ್ನು ಕಲ್ಪಿಸಲಾಗಿದೆ. ಹೊಟೇಲ್‌, ಬಸ್‌, ರೈಲು, ವಿಮಾನಗಳಲ್ಲಿ ಜಾಗ ಇಲ್ಲ ಎಂಬ ಫ‌ಲಕ ತೂಗಾಡುತ್ತಿವೆ. ಇದರ ನಡುವೆ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದಿದೆ. ಈ ಪಂದ್ಯಕ್ಕೆ ಮಳೆ ತಡೆಯೊಡ್ಡುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಸುಳಿವಿನ ಪ್ರಕಾರ ಲಘು ಮಳೆಯಾಗಬಹುದು. ಅ.14 ಮತ್ತು 15ರಂದು ಅಲ್ಲಲ್ಲಿ ಲಘು ಮಳೆಯಾದರೂ, ಅನಂತರ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next