ಜಾಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದೆ ಎಂಬು ದನ್ನು ಅಷ್ಟು ಸುಲಭದಲ್ಲಿ ನಂಬ ಲಾಗದು, ಒಪ್ಪಲಿಕ್ಕೂ ಆಗದು. ಆದರೆ ಇದು ವಾಸ್ತವ. ಇಂಥ ಸ್ಥಿತಿಯಲ್ಲಿ ಅದು ಮಂಗಳವಾರ ಪುಣೆಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
Advertisement
ಡಚ್ಚರ ಪಡೆ ಕೂಡ ಇಂಗ್ಲೆಂಡನ್ನು ಅಪ್ಪಚ್ಚಿ ಮಾಡಿದರೆ ಅಚ್ಚರಿ ಇಲ್ಲ.ನೆದರ್ಲೆಂಡ್ಸ್ ಬಳಿಕ ಇಂಗ್ಲೆಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಇವೆ ರಡನ್ನೂ ಗೆದ್ದು ಈಗಾಗಲೇ ಉಲ್ಬಣಿಸಿರುವ ಗಾಯಕ್ಕೆ ಒಂದಿಷ್ಟು ಮುಲಾಮು ಹಚ್ಚಿಕೊಳ್ಳುವ ಪ್ರಯತ್ನ ವನ್ನು ಮಾಡಬೇಕಿದೆ. 10ರಿಂದ ಕನಿಷ್ಠ 7ನೇ ಸ್ಥಾನಕ್ಕಾದರೂ ಏರಿದರೆ ಇಂಗ್ಲೆಂಡ್ ಪ್ರತಿಷ್ಠೆ ಸ್ವಲ್ಪವಾದರೂ ಉಳಿದೀತು. ಏಕೆಂದರೆ, ಆಗ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಯಲ್ಲಿ ಆಡುವ ಅವಕಾಶವೊಂದು ಲಭಿಸಲಿದೆ. ಇಂಗ್ಲೆಂಡ್ ಪ್ರಯತ್ನವಿನ್ನು ಈ ನಿಟ್ಟಿನಲ್ಲಿ ಸಾಗಬೇಕಿದೆ.
ಉದ್ಘಾಟನ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್ ಕೈಯಲ್ಲಿ ಎದ್ದೇಳಲಾಗದ ಏಟು ತಿಂದ ಇಂಗ್ಲೆಂಡ್, ತನ್ನ 7ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಕ್ಕೆ 33 ರನ್ನುಗಳಿಂದ ಸೋತ ಬಳಿಕ ಸೆಮಿಫೈನಲ್ ಪ್ರವೇಶದ ಕ್ಷೀಣ ಆಸೆಯನ್ನೂ ಕಳೆದುಕೊಂಡಿತು. ಇಂಗ್ಲೆಂಡ್‌ನ ಈಗಿನ ಅವಸ್ಥೆ ಯನ್ನು ಕಂಡಾಗ ಅದು ನೆದರ್ಲೆಂಡ್ಸ್ ವಿರುದ್ಧವೂ ನೆಚ್ಚಿನ ತಂಡವಾಗಿ ಉಳಿದಿಲ್ಲ. ನೆದರ್ಲೆಂಡ್ಸ್ ಏಳರಲ್ಲಿ 2 ಪಂದ್ಯಗಳನ್ನು ಗೆದ್ದಿದೆ. ಮಳೆ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾವನ್ನು ಬುಡ ಮೇಲು ಮಾಡಿದ ಹೆಗ್ಗಳಿಕೆ ಸ್ಕಾಟ್ ಎಡ್ವರ್ಡ್ಸ್ ಪಡೆಯದ್ದು. ಬಳಿಕ ಬಾಂಗ್ಲಾದೇಶವನ್ನೂ ಮಣಿಸಿತು. ಇಂಗ್ಲೆಂಡ್ ಈವರೆಗೆ ಸೋಲಿಸಲು ಯಶಸ್ವಿಯಾದದ್ದು ಬಾಂಗ್ಲಾವನ್ನು ಮಾತ್ರ.
Related Articles
Advertisement
ಇಂಗ್ಲೆಂಡ್ ವಿರುದ್ಧ ಗೆದ್ದಿಲ್ಲ
“ಆರೇಂಜ್ ಆರ್ಮಿ’ ನೆದರ್ಲೆಂಡ್ಸ್‌ಗೂ ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಗೆ ಅರ್ಹತೆ ಸಂಪಾದಿಸುವ ಸುವರ್ಣಾವಕಾಶವೊಂದು ಇಲ್ಲಿ ಎದು ರಾಗಿದೆ. ಇಂಗ್ಲೆಂಡ್ ವಿರುದ್ಧ ಗೆದ್ದರೆ ಈ ಅವಕಾಶ ಹತ್ತಿರವಾಗುವುದರ ಜತೆಗೆ ಇತಿಹಾಸವನ್ನೂ ನಿರ್ಮಿಸಿ ದಂತಾಗುತ್ತದೆ. ಅದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಈವರೆಗೆ ಗೆದ್ದಿಲ್ಲ. ಆಡಿದ ಮೂರರಲ್ಲೂ ಸೋತಿದೆ. ಕೊನೆಯ ಸಲ ಎದುರಾದದ್ದು 2011ರ ವಿಶ್ವಕಪ್‌ನಲ್ಲಿ. ಅಂದಹಾಗೆ, ನೆದರ್ಲೆಂಡ್ಸ್ ತಂಡದ ಕೊನೆಯ ಎದುರಾಳಿ ಆತಿಥೇಯ ಭಾರತ!
ನೆದರ್ಲೆಂಡ್ಸ್ ಆಲ್‌ರೌಂಡರ್‌ಗಳ ಪಡೆ. ಆದರೆ ಕೂಟದುದ್ದಕ್ಕೂ ಓಪನಿಂಗ್ ವೈಫಲ್ಯ ಎದುರಿಸುತ್ತ ಬಂದಿದೆ. ಆಗೆಲ್ಲ ಮಧ್ಯಮ ಕ್ರಮಾಂಕದ ಆಟಗಾರರು ತಂಡದ ರಕ್ಷಣೆಗೆ ನಿಂತಿದ್ದಾರೆ. ಬೌಲಿಂಗ್ ವಿಭಾಗ ಇನ್ನಷ್ಟು ಘಾತಕಗೊಳ್ಳಬೇಕಿದೆ. ಡಚ್ಚರ ಪಡೆ ಈ ಕೂಟದಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಒತ್ತಡವೂ ಇಲ್ಲ. ಹೀಗಾಗಿ ದಿಟ್ಟ ಪ್ರದರ್ಶನ ನೀಡಿ ಇಂಗ್ಲೆಂಡನ್ನು ಮಣಿಸಿದರೆ ಅದೊಂದು ಮಹಾನ್ ವಿಜಯವಾಗಿ ದಾಖಲಾಗಲಿದೆ.