Advertisement
ಅಂದು ಬಂಗಾಲದ ಅತೀ ದೊಡ್ಡ ಹಬ್ಬವಾದ ಕಾಳಿ ಪೂಜೆ. ಹೀಗಾಗಿ ಪಾಕಿಸ್ಥಾನ-ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಏಕಕಾಲಕ್ಕೆ ಭದ್ರತೆ ಒದಗಿಸುವುದು ಸಮಸ್ಯೆಯಾಗಿ ಕಾಡಬಹುದೆಂಬ ಭೀತಿ ಅಲ್ಲಿನ ಭದ್ರತಾ ಹಾಗೂ ಪೊಲೀಸ್ ಇಲಾಖೆಯದ್ದು. ಹೀಗಾಗಿ ಈ ಪಂದ್ಯದ ದಿನಾಂಕವನ್ನು ಬದಲಿಸುವಂತೆ ಅದು ಬಿಸಿಸಿಐ ಹಾಗೂ ಐಸಿಸಿಗೆ ಸೂಚಿಸಿದೆ. ಆದರೆ ಕೋಲ್ಕತಾ ಕ್ರಿಕೆಟ್ ಮಂಡಳಿ (ಸಿಎಬಿ) ಅಧ್ಯಕ್ಷ ಸ್ನೇಹಶಿಷ್ ಗಂಗೂಲಿ ಪ್ರತಿಕ್ರಿಯಿಸಿದ್ದು, ಈ ಕುರಿತು ನಾವು ಯಾವುದೇ ಅಧಿಕೃತ ಮನವಿ ಮಾಡಿಲ್ಲ ಎಂದಿದ್ದಾರೆ.
ಇದರೊಂದಿಗೆ ಪಾಕಿಸ್ಥಾನ ಪಾಲ್ಗೊಳ್ಳುತ್ತಿರುವ 3ನೇ ಪಂದ್ಯದ ದಿನಾಂಕವನ್ನು ಬದಲಾಯಿಸಲು ಮನವಿ ಮಾಡಿ ಕೊಂಡಂತಾಗಿದೆ. ಅಹ್ಮದಾಬಾದ್‌ನಲ್ಲಿ ಅ. 15ರಂದು ನಡೆಯಬೇಕಿರುವ ಭಾರತ-ಪಾಕಿಸ್ಥಾನ ಪಂದ್ಯವನ್ನು ನವರಾತ್ರಿ ಆರಂಭದ ಕಾರಣ ಒಂದು ದಿನ ಮೊದಲು ನಡೆಸಬೇಕೆಂಬುದು ಮೊದಲ ಕೋರಿಕೆ ಆಗಿತ್ತು. ಬಳಿಕ ಅ. 12ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಪಾಕಿ ಸ್ಥಾನ-ಶ್ರೀಲಂಕಾ ಪಂದ್ಯದ ದಿನಾಂಕವನ್ನೂ ಬದಲಿಸಿ ಅ. 10ರಂದು ನಡೆಸುವಂತೆ ಮನವಿ ಮಾಡಲಾಗಿತ್ತು. ಪಾಕ್ ಪಡೆ ಶ್ರೀಲಂಕಾ ಹಾಗೂ ಭಾರತವನ್ನು ಒಂದೇ ದಿನದ ಅಂತ ರದಲ್ಲಿ ಎದುರಿಸಬೇಕಾದ ಒತ್ತಡ ಎದುರಾಗುವುದೇ ಇದಕ್ಕೆ ಕಾರಣ. ಇದೀಗ ಪಾಕ್-ಇಂಗ್ಲೆಂಡ್ ಪಂದ್ಯದ ಸರದಿ.ಈ ಎಲ್ಲ ಬದಲಾವಣೆಗಳಿಗೆ ಐಸಿಸಿ ಸಮ್ಮತಿ ಸೂಚಿಸುವುದು ಬಹುತೇಕ ಖಚಿತ. ಅನಂತರವೇ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಆಗಲಿದೆ.