Advertisement
ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದಿತ್ತು. ನೆರೆಯ ಜಿಂಬಾಬ್ವೆ ಮತ್ತು ಕೀನ್ಯಾದಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು.
ದಾಖಲೆ ಸಂಖ್ಯೆಯ 14 ತಂಡಗಳು ಪಾಲ್ಗೊಂಡದ್ದು ಈ ಪಂದ್ಯಾ ವಳಿಯ ವಿಶೇಷ. ಎಂದಿನಂತೆ ಟೆಸ್ಟ್ ಮಾನ್ಯತೆ ಪಡೆದ 10 ತಂಡಗಳಿಗೆ ನೇರ ಪ್ರವೇಶ ನೀಡ ಲಾಯಿತು. ಉಳಿದ 4 ತಂಡಗಳನ್ನು ಐಸಿಸಿ ಟ್ರೋಫಿ ಪಂದ್ಯಾವಳಿ ಮೂಲಕ ಆರಿಸ ಲಾಯಿತು. ನೆದರ್ಲೆಂಡ್ಸ್ ಇಲ್ಲಿ ಚಾಂಪಿ ಯನ್ ಆಗಿತ್ತು. ಜತೆಗೆ ಕೆನಡಾದ ಪುನರಾಗಮನ ವಾಯಿತು. ಈ ಎರಡೂ ತಂಡಗಳಿಗೆ ಇದು 2ನೇ ಪಂದ್ಯಾವಳಿ ಆಗಿತ್ತು. ನಮೀಬಿಯಾಕ್ಕೆ ಮೊದಲ ಸಲ ವಿಶ್ವಕಪ್ ಬಾಗಿಲು ತೆರೆಯಿತು. ಸೆಮಿಫೈನಲ್‌ಗೆ ಬಂದ ಕೀನ್ಯಾ!
“ಎ’ ವಿಭಾಗದಿಂದ ಆಸ್ಟ್ರೇಲಿಯ, ಭಾರತದ ಜತೆಗೆ ಜಿಂಬಾಬ್ವೆ ಸೂಪರ್-6 ಪ್ರವೇಶಿಸಿದ್ದು ಕೂಟದ ಅಚ್ಚರಿ ಎನಿಸಿತು. ಇಂಗ್ಲೆಂಡ್ ಮತ್ತು ಪಾಕಿಸ್ಥಾನ ಲೀಗ್‌ನಲ್ಲೇ ಹೊರಬಿದ್ದವು. ಇದಕ್ಕೂ ಮಿಗಿಲಾದ ಅಚ್ಚರಿ ಕಂಡುಬಂದದ್ದು “ಬಿ’ ವಿಭಾಗದಲ್ಲಿ. ಆತಿಥೇಯ ದಕ್ಷಿಣ ಆಫ್ರಿಕಾ, ಮೊದಲೆರಡು ಬಾರಿಯ ವೆಸ್ಟ್ ಇಂಡೀಸ್ ಬೇಗನೇ ಗಂಟು ಮೂಟೆ ಕಟ್ಟಿದವು. ಶ್ರೀಲಂಕಾ, ನ್ಯೂಜಿ ಲ್ಯಾಂಡ್ ಜತೆಗೆ ಆತಿಥೇಯ ದೇಶಗಳ ಲ್ಲೊಂದಾದ ಕೀನ್ಯಾ ಸೂಪರ್ ಸಿಕ್ಸ್‌ಗೆ ಮುನ್ನುಗ್ಗಿ ಬಂದಿತ್ತು. ಅಷ್ಟೇ ಅಲ್ಲ, ಮುಂದೆ ಸೆಮಿಫೈನಲ್ ಟಿಕೆಟ್ ಸಂಪಾದಿಸುವಲ್ಲೂ ಯಶಸ್ವಿಯಾಯಿತು!
Related Articles
Advertisement
ಆಸ್ಟ್ರೇಲಿಯ ಬೃಹತ್ ಮೊತ್ತಫೈನಲ್ ತಾಣ ಜೊಹಾನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ. ಇದು ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ, ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ದೊಡ್ಡ ಮೊತ್ತ ಸಾಧ್ಯ ಮತ್ತು ಇದು ಸುರಕ್ಷಿತ ಎಂದೇ ವಿಶ್ಲೇಷಿಸಲಾಗಿತ್ತು. ಗಂಗೂಲಿಗೆ ಟಾಸ್ ಕೂಡ ಒಲಿಯಿತು. ಆದರೆ ಇಲ್ಲಿ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ ದೊಡ್ಡದೊಂದು ಎಡವಟ್ಟು ಮಾಡಿದರು. ಆಸೀಸ್ ಇದನ್ನೇ ಬಯಸಿತ್ತು. ನಾಯಕ ರಿಕಿ ಪಾಂಟಿಂಗ್, ಆ್ಯಡಂ ಗಿಲ್‌ಕ್ರಿಸ್ಟ್, ಡೆಮೀನ್ ಮಾರ್ಟಿನ್ ಸೇರಿಕೊಂಡು ಭಾರತದ ದಾಳಿಯನ್ನು ಧೂಳೀಪಟಗೈದರು. ಎರಡೇ ವಿಕೆಟಿಗೆ 359 ರನ್ ಸಂಗ್ರಹಗೊಂಡಿತು. ಇದರಲ್ಲಿ ಪಾಂಟಿಂಗ್ ಪಾಲು ಅಜೇಯ 140. ಗಂಗೂಲಿ ಬಳಗದ ಕಪ್ ಕನಸು ಈ ಹಂತದಲ್ಲೇ ಛಿದ್ರಗೊಂಡಿತು. ಚೇಸಿಂಗ್ ವೇಳೆ ತೆಂಡುಲ್ಕರ್ (4) ವಿಕೆಟ್ ಬೇಗ ಬಿತ್ತು. ನಾಯಕ ಗಂಗೂಲಿ ಕೂಡ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲ ರಾದರು (24). ಮೊಹಮ್ಮದ್ ಕೈಫ್ ಸೊನ್ನೆ ಸುತ್ತಿದರು. ಆದರೆ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್ ಮಾತ್ರ ಸಿಡಿದು ನಿಂತಿದ್ದರು. ಇವರು ಕ್ರೀಸ್‌ನಲ್ಲಿರುವಷ್ಟು ಹೊತ್ತು ಆಸೀಸ್‌ಗೆ ಅಪಾಯವಿತ್ತು. ಕೊನೆಗೂ 24ನೇ ಓವರ್‌ನಲ್ಲಿ 82 ರನ್ ಮಾಡಿದ ಸೆಹವಾಗ್ 4ನೇ ವಿಕೆಟ್ ರೂಪದಲ್ಲಿ ರನೌಟ್ ಆಗು ವುದ ರೊಂದಿಗೆ ಭಾರತದ ಅಂತಿಮ ಭರವಸೆಯೂ ಕಮರಿತು. 39.2 ಓವರ್‌ಗಳಲ್ಲಿ ಭಾರತ 234ಕ್ಕೆ ಆಲೌಟ್ ಆಯಿತು. “ಕೋಲ್ಕತಾ ಪ್ರಿನ್ಸ್’ ಸೌರವ್ ಗಂಗೂಲಿಗೆ ಜೊಹಾನ್ಸ್‌ಬರ್ಗ್ ಕಿಂಗ್ ಆಗಿ ಮೆರೆಯಲು ಸಾಧ್ಯವಾಗಲಿಲ್ಲ. ಸರ್ ಗ್ಯಾರಿ ಸೋಬರ್ ಕೈಯಿಂದ ಸಚಿನ್ ತೆಂಡುಲ್ಕರ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುದೊಂದೇ ಭಾರತದ ಪಾಲಿನ ಖುಷಿಯಾಗಿ ಉಳಿಯಿತು. ಆಸ್ಟ್ರೇಲಿಯ 3 ವಿಶ್ವಕಪ್ ಗೆದ್ದ ಮೊದಲ ತಂಡವೆನಿಸುವುದರ ಜತೆಗೆ ಟ್ರೋಫಿ ಉಳಿಸಿಕೊಂಡ ದ್ವಿತೀಯ ತಂಡವಾಗಿ ಮೂಡಿಬಂತು.