Advertisement

World Cup Cricket-2023 ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಅಭ್ಯಾಸ

12:18 AM Sep 30, 2023 | Team Udayavani |

ಗುವಾಹಟಿ: ವಿಶ್ವಕಪ್‌ ಅಭ್ಯಾಸ ಪಂದ್ಯಗಳು ಶುಕ್ರವಾರ ಆರಂಭಗೊಂಡಿವೆ. ಭಾರತ ಶನಿವಾರ ಗುವಾಹಟಿಯಲ್ಲಿ ಮೊದಲ ಅಭ್ಯಾಸ ಪಂದ್ಯ ಆಡಲಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಆದರೆ ಈ ಪ್ರ್ಯಾಕ್ಟೀಸ್‌ ಗೇಮ್‌ಗಳಿಗೆ ಅಧಿಕೃತ ಮಾನ್ಯತೆ ಇಲ್ಲ.

Advertisement

ಇಂಗ್ಲೆಂಡ್‌ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಬೇರ್‌ಸ್ಟೊ, ಮಲಾನ್‌, ಸ್ಟೋಕ್ಸ್‌, ಬ್ರೂಕ್‌, ಲಿವಿಂಗ್‌ಸ್ಟೋನ್‌ ಅವರೆಲ್ಲ ಭಾರತದ ನೆಲದಲ್ಲಿ ಯಾವ ರೀತಿಯ ಪ್ರದರ್ಶನ ನೀಡಬಹುದು ಎಂಬ ಕುತೂಹಲವಿದೆ. ಹಾಗೆಯೇ ನಮ್ಮ ಸ್ಪಿನ್‌ ತ್ರಿವಳಿಗಳಾದ ಅಶ್ವಿ‌ನ್‌, ಜಡೇಜ ಮತ್ತು ಕುಲದೀಪ್‌ ಆಂಗ್ಲರಿಗೆ ಕಡಿವಾಣ ಹಾಕಬಹುದೇ ಎಂಬುದು ಇನ್ನೊಂದು ಕೌತುಕ.

ದ. ಆಫ್ರಿಕಾ-ಅಫ್ಘಾನ್‌ ಪಂದ್ಯ ರದ್ದು
ಶುಕ್ರವಾರ ತಿರುವನಂತಪುರದಲ್ಲಿ ನಡೆಯಬೇಕಿದ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ಥಾನ ನಡುವಿನ ಅಭ್ಯಾಸ ಪಂದ್ಯ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತು.

ಹೈದರಾಬಾದ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಪಾಕಿಸ್ಥಾನ 5 ವಿಕೆಟಿಗೆ 345 ರನ್‌ ಪೇರಿಸಿದೆ. ಮೊಹಮ್ಮದ್‌ ರಿಜ್ವಾನ್‌ ಶತಕದೊಂದಿಗೆ ಮಿಂಚಿದರು (103). ಗುವಾಹಟಿಯಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಶ್ರೀಲಂಕಾ: 49.1 ಓವರ್‌ಗಳಲ್ಲಿ 263. ಬಾಂಗ್ಲಾ: 42 ಓವರ್‌ಗಳಲ್ಲಿ 100ಕ್ಕೆ 264.

Advertisement

Udayavani is now on Telegram. Click here to join our channel and stay updated with the latest news.

Next