Advertisement

World Cup; ದಕ್ಷಿಣ ಆಫ್ರಿಕಾದ ಎದುರು ಗೆಲುವಿನ ನಿರೀಕ್ಷೆಯೊಂದಿಗೆ ಅಫ್ಘಾನ್‌ ಹೋರಾಟ

12:32 AM Nov 10, 2023 | Team Udayavani |

ಅಹ್ಮದಾಬಾದ್‌: ಈಗಾಗಲೇ ಸೆಮಿಫೈನಲ್‌ ಹಂತಕ್ಕೇರಿರುವ ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರ ನಡೆ ಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಪಂದ್ಯದಲ್ಲಿ ಅಫ್ಘಾನಿಸ್ಥಾನವನ್ನು ಎದು ರಿಸಲಿದೆ. ಸೆಮಿಫೈನಲ್‌ ಮೊದಲು ತಮ್ಮ ಚೇಸಿಂಗ್‌ ಸಮಸ್ಯೆಯನ್ನು ಸರಿ ಪಡಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಬಳಸಿಕೊಳ್ಳುವ ಸಾಧ್ಯತೆ ಯಿದೆ. ಇದೇ ವೇಳೆ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಅಫ್ಘಾನಿಸ್ಥಾನವು ಗೆಲುವಿನಿಂದ ವಿಶ್ವಕಪ್‌ ಹೋರಾಟ ಅಂತ್ಯಗೊಳಿಸಲು ಹಾತೊರೆಯುತ್ತಿದೆ.

Advertisement

ಅಜೇಯ ಭಾರತ, ಐದು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಜತೆ ಈಗಾಗಲೇ ಸೆಮಿಫೈನಲ್‌ ಹಂತಕ್ಕೇ ರಿರುವ ದಕ್ಷಿಣ ಆಫ್ರಿಕಾ ತಂಡವು ಈ ಪಂದ್ಯವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ, ಆದರೆ ಚೇಸಿಂಗ್‌ ವೇಳೆ ಬ್ಯಾಟಿಂಗ್‌ ವೈಫ‌ಲ್ಯ ಕಾಣುತ್ತಿರುವ ದಕ್ಷಿಣ ಆಫ್ರಿಕಾವು ಈ ಗಂಭೀರ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುವ ನಿರೀಕ್ಷೆಯಿದೆ.

ಅಫ್ಘಾನಿಸ್ಥಾನ ಅಸಾಮಾನ್ಯ
ಅಫ್ಘಾನಿಸ್ಥಾನ ಈ ವಿಶ್ವಕಪ್‌ನಲ್ಲಿ ಅಸಾಮಾನ್ಯ ಸಾಧನೆಗೈದಿದೆ. ಆಡಿದ 8 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಭೇರಿ ಬಾರಿಸಿದ ಅದು ಸೆಮಿಫೈನಲ್‌ ಕದ ತಟ್ಟಿದೆ. ವಿಶ್ವದ ಯಾವುದೇ ತಂಡವನ್ನು ಸೋಲಿಸಲು ಸಮರ್ಥರಿದ್ದೇವೆ ಎಂಬು ದನ್ನು ಅಘಾ^ನಿ ಸ್ಥಾನ ತೋರಿಸಿ ಕೊಟ್ಟಿದೆ. ಶುಕ್ರವಾರವೂ ದಕ್ಷಿಣ ಆಫ್ರಿಕಾವನ್ನು ಉರುಳಿಸುವ ಉತ್ಸಾಹದಲ್ಲಿರುವ ಅಘಾ^ನಿಸ್ಥಾನ ಸೆಮಿಫೈನಲಿ ಗೇರಲು ಹಾತೊರೆಆಯುತ್ತಿದೆ.

ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನವನ್ನು ಉರುಳಿಸಿದ ಹಶ್ಮತುಲ್ಲ ಶಾಹಿದಿ ನೇತೃತ್ವದ ಅಫ್ಘಾನಿ ಸ್ಥಾನ ತಂಡವು 5 ಬಾರಿಯ ಚಾಂಪಿ ಯನ್‌ ಆಸ್ಟ್ರೇಲಿಯ ವಿರುದ್ದ ಅವಿಸ್ಮರ ಣೀಯ ಗೆಲುವಿನ ಸನಿಹದಲ್ಲಿತ್ತು. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ನಂಬಲಸಾಧ್ಯ ವಿಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಅಘಾ^ನಿಸ್ಥಾನ ಸೋಲು ಕಾಣು ವಂತಾಯಿತು. ಇದರಿಂದ ಅಫ್ಘಾನ್‌ತೀವ್ರ ಆಘಾತಕ್ಕೆ ಒಳಗಾಯಿತು.

ದಕ್ಷಿಣ ಆಫ್ರಿಕಾ ಬಲಿಷ್ಠ
ಮೊದಲು ಬ್ಯಾಟಿಂಗ್‌ ಮಾಡುವ ವೇಳೆ ದಕ್ಷಿಣ ಆಫ್ರಿಕಾ ಶ್ರೇಷ್ಠ ನಿರ್ವಹಣೆ ಯನ್ನು ದಾಖಲಿಸಿದೆ. ಹಾಗಾಗಿ ಶಾಹಿದಿ ಟಾಸ್‌ ಗೆಲ್ಲಲು ಬಯಸಬಹುದು ಮತ್ತು ಗೆದ್ದರೆ ಉತ್ತಮ ಮೊತ್ತ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ ಚೇಸಿಂಗ್‌ ನೀಡಿ ಒತ್ತಡ ದಲ್ಲಿ ಸಿಲುಕಿಸಲು ಯೋಚಿಸುತ್ತಿದೆ. ಸ್ಪಿನ್‌ ದಾಳಿಯ ಮೂಲಕ ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕುವ ಯೋಜನೆ ಹಾಕಿಕೊಂಡಿದೆ. ಅಘಾ^ನಿಸ್ಥಾನದ ಬ್ಯಾಟಿಂಗ್‌ ಕೂಡ ಉತ್ತಮ ಸ್ಥಿತಿಯಲ್ಲಿದೆ. ಇಬ್ರಾಹಿಂ ಜದ್ರಾನ್‌, ರಹಮತ್‌ ಶಾ ಮತ್ತು ನಾಯಕ ಶಾಹಿದಿ ಪರಿಸ್ಥಿತಿಗೆ ತಕ್ಕಂತೆ ಉತ್ತಮ ನಿರ್ವಹಣೆ ನೀಡಲು ಸಮರ್ಥರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next