Advertisement

World Cup;ಲಂಕಾ ಎದುರು ನ್ಯೂಜಿಲ್ಯಾಂಡ್ ಗೆ 5 ವಿಕೆಟ್‌ಗಳ ಜಯ; ಪಾಕ್ ಹಾದಿ ಕಠಿನ

09:06 PM Nov 09, 2023 | Team Udayavani |

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಿರ್ಣಾಯಕ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಇಂದು ಶ್ರೀಲಂಕಾದ ಗೆಲುವಿಗಾಗಿ ಕಾಯುತ್ತಿದ್ದ ಪಾಕಿಸ್ಥಾನ ಸೆಮಿ ಫೈನಲ್ ಪ್ರವೇಶಿಸಬೇಕಾದರೆ ಅಸಾಧ್ಯವಾದುದನ್ನೇ ಮಾಡುವ ಕಠಿನ ಸವಾಲು ಎದುರಾಗಿದೆ.

Advertisement

ನ್ಯೂಜಿಲ್ಯಾಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಲಂಕಾ 46.4 ಓವರ್ ಗಳಲ್ಲಿ 171 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಕುಸಲ್ ಪೆರೆರಾ 51 ರನ್ ಗರಿಷ್ಠ ಗಳಿಕೆ. ಕೊನೆಯ ವಿಕೆಟ್ ಗೆ ಎಂ ತೀಕ್ಷಣ ಔಟಾಗದೆ (38) ಮತ್ತು ದಿಲ್ಶನ್ ಮಧುಶಂಕ 19 ರನ್ ಗಳಿಸಿ ಔಟಾದರು. ಇಬ್ಬರು 43 ರನ್ ಜತೆಯಾಡಿದರು.

ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 23.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು.

ಡೆವೊನ್ ಕಾನ್ವೆ 45, ರಚಿನ್ ರವೀಂದ್ರ 42, ಕೇನ್ ವಿಲಿಯಮ್ಸನ್ 14, ಮಾರ್ಕ್ ಚಾಪ್‌ಮನ್ 7, ಡ್ಯಾರಿಲ್ ಮಿಚೆಲ್ 43, ಗ್ಲೆನ್ ಫಿಲಿಪ್ಸ್ ಔಟಾಗದೆ 17 ರನ್ ಗಳಿಸಿದರು.

ನ್ಯೂಜಿಲ್ಯಾಂಡ್ 9ಪಂದ್ಯಗಳಲ್ಲಿ5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ +0.743 ರನ್ ರೇಟ್ ಹೊಂದಿದೆ. ಭರ್ಜರಿ ಗೆಲುವಿನಿಂದ ನ್ಯೂಜಿಲ್ಯಾಂಡ್ ಎಲ್ಲಾ ಸಂಭವನೀಯತೆಗಳಲ್ಲಿ ನವೆಂಬರ್ 15 ರಂದು ಮುಂಬೈನ ವಾಂಖೆಡೆಯಲ್ಲಿ ಭಾರತವನ್ನು ಸೆಮಿ ಫೈನಲ್ ನಲ್ಲಿ ಎದುರಿಸಲಿದೆ.

Advertisement

ಸೆಮಿ ಪ್ರವೇಶದ ಹಾದಿ ಎದುರು ನೋಡುತ್ತಿರುವ ಪಾಕಿಸ್ಥಾನಕ್ಕೆ NRR ಪರಿಸ್ಥಿತಿ ಹತಾಶವಾಗಿ ಕಾಣುತ್ತಿದ್ದು, ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಮೊದಲಾಗಲಿ, ಎರಡನೆಯದಾಗಿ ಬ್ಯಾಟಿಂಗ್ ಮಾಡಿದರೆ ಅವರು ಯೋಚಿಸಲಾಗದ ಅಂತರದಿಂದ ಇಂಗ್ಲೆಂಡ್ ಅನ್ನು ಸೋಲಿಸಬೇಕಾಗುತ್ತದೆ. ಪಾಕ್ +0.036 ರನ್ ರೇಟ್ ಹೊಂದಿದೆ.

ಶ್ರೀಲಂಕಾ ಅತ್ಯಂತ ನಿರಾಶಾದಾಯಕ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿತು. 9 ಪಂದ್ಯಗಳಲ್ಲಿ 2 ಮಾತ್ರ ಗೆದ್ದ ಸಮಾಧಾನ ಲಂಕಾ ತಂದದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next