ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿಕೊಂಡ ಬಂದ ಭಾರತ ತಂಡವು ಫೈನಲ್ ಪಂದ್ಯದಲ್ಲಿ ಎಡವಿತು. ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಬ್ಯಾಟಿಂಗ್ ವಿಭಾಗ ಹಿನ್ನಡೆ ಅನುಭವಿಸಿದ್ದು, ತಂಡಕ್ಕೆ ಹೊಡೆತ ನೀಡಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 240 ರನ್ ಮಾತ್ರ ಪೇರಿಸಿತು. ಆದರೆ ಗುರಿ ಬೆನ್ನತ್ತಿದ್ದ ಆಸೀಸ್ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಭಾರತ ತಂಡವು 84 ರನ್ ಗಳಿಗೆ ಮೊದಲ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಳಿಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ತಂಡವನ್ನು ಆಧರಿಸಿದರು. ವಿರಾಟ್ 63 ಎಸೆತಗಳಿಂದ 54 ರನ್ ಬಾರಿಸಿದರೆ, ರಾಹುಲ್ 107 ಎಸೆತಗಳಿಂದ 66 ರನ್ ಗಳಿಸಿದರು.
ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಆಟಗಾರರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಪ್ರಶ್ನೆ ಎದುರಾಗಿತ್ತು. “ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ನಾವು 20 ಓವರ್‌ಗಳಲ್ಲಿ 170 ರನ್ ಗಳಿಸಿದ್ದೆವು ಮತ್ತು ಅದನ್ನು ಇಂಗ್ಲೆಂಡ್ ಸುಲಭವಾಗಿ ಬೆನ್ನಟ್ಟಿತ್ತು. ಇಂದು ನಾವು 240 ರನ್ ಗಳಿಸಿದಾಗ ಆಸ್ಟ್ರೇಲಿಯಾ ಯಾವುದೇ ತೊಂದರೆ ಎದುರಿಸಲಿಲ್ಲ. ರೋಹಿತ್ ಈ ವಿಕೆಟ್ ಮೇಲೆ ಬಂದು 30 ಎಸೆತಗಳಲ್ಲಿ 45-47 ರನ್ ಗಳಿಸಿದರು. ಆದರೆ ಮತ್ತೊಂದೆಡೆ, 110 ಎಸೆತಗಳಲ್ಲಿ 60-65 ರನ್ ಗಳಿಸುವ ಕೆಲವು ಬ್ಯಾಟ್ಸ್‌ಮನ್ ಗಳಿದ್ದಾರೆ. ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ. ಹಾಗಾಗಿ, ದೊಡ್ಡ ಪಂದ್ಯಗಳಲ್ಲಿ ನಾವು ಸ್ವಲ್ಪ ಭಯಭೀತರಾಗಿ ಆಡುತ್ತೇವೆ. ನಮ್ಮ ವಿಧಾನವು ಸರಿಯಿಲ್ಲ ಎಂದು ನೀವು ಭಾವಿಸುತ್ತೀರಾ? ಸಮಸ್ಯೆಗಳೇನು? ಕಳೆದ ಮೂರ್ನಾಲ್ಕು ವಿಶ್ವಕಪ್, ಏಷ್ಯಾ ಕಪ್‌ಗಳಿಂದ ಈ ಸಮಸ್ಯೆಗಳು ಗೋಚರಿಸುತ್ತಿವೆ” ಎಂದು ಪ್ರಶ್ನೆ ಕೇಳಲಾಗಿತ್ತು.
ಇದಕ್ಕೆ ಉತ್ತರಿಸಿದ ದ್ರಾವಿಡ್, ಈ ಪಂದ್ಯಾವಳಿಯಲ್ಲಿ ನಾವು ಭಯದಿಂದ ಆಡಿದ್ದೇವೆ ಎಂದು ನಾನು ನಂಬುವುದಿಲ್ಲ. ಈ ಅಂತಿಮ ಪಂದ್ಯದಲ್ಲಿ ನಾವು 10 ಓವರ್‌ಗಳಲ್ಲಿ 80 ರನ್ ಗಳಿಸಿದ್ದೆವು. ಆದರೆ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಿದ್ದೆವು. ನೀವು ವಿಕೆಟ್ ಕಳೆದುಕೊಂಡಾಗ, ನಿಮ್ಮ ತಂತ್ರಗಳನ್ನು ಬದಲಾಯಿಸ ಬೇಕಾಗುತ್ತದೆ. ಅದನ್ನು ಈ ಟೂರ್ನಿಯಲ್ಲಿ ತೋರಿಸಿದ್ದೇವೆ. ಇಂಗ್ಲೆಂಡ್ ವಿರುದ್ಧ ಸೋತಾಗ ವಿಭಿನ್ನವಾಗಿ ಆಡಿದ್ದೆವು. ಈ ಫೈನಲ್‌ನಲ್ಲಿ ನಾವು ಭಯದಿಂದ ಏನನ್ನೂ ಆಡಲಿಲ್ಲ. ಅವರು ಮಧ್ಯಮ ಓವರ್ ಗಳಲ್ಲಿ ಸಾಕಷ್ಟು ಉತ್ತಮ ಬೌಲಿಂಗ್ ಮಾಡಿದರು ಎಂದರು.
ಇದನ್ನೂ ಓದಿ:ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಲು ಮತಾಂತರವಾಗಿದ್ದ ಹಿಂದೂ ಯುವತಿಯ ಬಾಳಿನಲ್ಲಿ ಬಿರುಗಾಳಿ
“ನಾವು ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ, ನಮಗೆ ಮತ್ತೆ ನೆಲೆ ಕಂಡುಕೊಳ್ಳುವ ಅವಧಿಯ ಅಗತ್ಯವಿದೆ. ಬಳಿಕ ನಾವು ಆಕ್ರಮಣಕಾರಿ ಅಥವಾ ಧನಾತ್ಮಕವಾಗಿ ಆಡುತ್ತೇವೆ, ಮುಂದೆ ಹೋಗಿ ಹೊಡೆಯುತ್ತೇವೆ ಎಂದು ನಾವು ಭಾವಿಸಿದಾಗ, ನಾವು ವಿಕೆಟ್ ಗಳನ್ನು ಕಳೆದುಕೊಂಡೆವು. ಆದ್ದರಿಂದ, ಮತ್ತೆ ಆಡಬೇಕು, ನೀವು ಪಾಲುದಾರಿಕೆ ಹೊಂದಿದಾಗಲೆಲ್ಲಾ, ನೀವು ಇನ್ನಿಂಗ್ಸ್ ಕಟ್ಟಿಕೊಂಡು ಹೋಗಬೇಕು. ನೀವು ಅವರ ತಂಡದ ಬ್ಯಾಟಿಂಗ್ ಅನ್ನು ನೋಡಿದ್ದೀರಿ, ಮಾರ್ನಸ್ ಮತ್ತು ಹೆಡ್ ಆಡುತ್ತಿದ್ದ ಸಮಯದಲ್ಲಿ ಅವರು ಇನ್ನಿಂಗ್ಸ್ ಕಟ್ಟಿದರು, ಆದರೆ ಅವರು ಔಟ್ ಆಗಲಿಲ್ಲ, ಆದ್ದರಿಂದ ಅವರು ಆಡುತ್ತಲೇ ಇದ್ದರು, ನೀವು ಮಧ್ಯದಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಇನ್ನಿಂಗ್ ರಿ ಬಿಲ್ಡ್ ಮಾಡಬೇಕು, ಅದು ನಾವು ರಕ್ಷಣಾತ್ಮಕವಾಗಿ ಆಡಲು ಪ್ರಾರಂಭಿಸಿದಂತೆ ಅಲ್ಲ.” ಎಂದು ದ್ರಾವಿಡ್ ಹೇಳಿದರು.