Advertisement

World Cup-2023: ವೀಕ್ಷಕರ ದಾಖಲೆ-  ಸ್ಟೇಡಿಯಂಗೆ ಬಂದವರ ಸಂಖ್ಯೆ12,50,307

11:24 PM Nov 21, 2023 | Team Udayavani |

ಹೊಸದಿಲ್ಲಿ: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ದಾಖಲೆ ಸಂಖ್ಯೆಯ ವೀಕ್ಷಣೆಯಿಂದ ನೂತನ ಎತ್ತರ ತಲುಪಿದೆ. ಅ. 5ರಿಂದ ನ. 19ರ ತನಕ ಸಾಗಿದ 48 ಪಂದ್ಯಗಳ ಈ ಕೂಟವನ್ನು 1.25 ಮಿಲಿಯನ್‌ನಷ್ಟು ವೀಕ್ಷಕರು (12,50,307) ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದಾರೆ. ಇದು ವಿಶ್ವಕಪ್‌ ಇತಿಹಾಸದ ನೂತನ ದಾಖಲೆ. ಪ್ರತೀ ಪಂದ್ಯಕ್ಕೆ ಸರಾಸರಿ 26 ಸಾವಿರದಷ್ಟು ವೀಕ್ಷಕರು ಹಾಜರಿದ್ದರು.

Advertisement

ಈ ಸಂದರ್ಭದಲ್ಲಿ 2015ರ ಆಸ್ಟ್ರೇ ಲಿಯ-ನ್ಯೂಜಿಲ್ಯಾಂಡ್‌ ಆತಿ ಥ್ಯದ 11ನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ದಾಖಲೆ ಪತನಗೊಂಡಿತು. ಅಂದು 10,16,420 ಪ್ರೇಕ್ಷಕರು ಸ್ಟೇಡಿ ಯಂಗೆ ಆಗಮಿಸಿದ್ದರು. ಅನಂತರ ಇಂಗ್ಲೆಂಡ್‌ನ‌ಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ವೀಕ್ಷಕರ ಕುಸಿತ ಕಂಡುಬಂತು. ಇದನ್ನು ವೀಕ್ಷಿಸಿದವರು 7,52,000 ಮಂದಿ.

ಈ ಬಾರಿಯ ಉದ್ಘಾಟನ ಪಂದ್ಯ ಹಾಗೂ ಭಾರತ ಪಾಲ್ಗೊಳ್ಳದ ಮೊದಲ ಅವಧಿಯ ಪಂದ್ಯಗಳ ವೇಳೆ ಸ್ಟೇಡಿಯಂಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ವೀಕ್ಷಕರ ಬರಗಾಲ ಎದ್ದು ಕಂಡಿತ್ತು. ಆದರೆ ಕೊನೆಯಲ್ಲಿ ವೀಕ್ಷಕರ ದಾಖಲೆ ನಿರ್ಮಾಣಗೊಂಡದ್ದು ಈ ವಿಶ್ವಕಪ್‌ ವಿಶೇಷ.

ಫೈನಲ್‌: ದಾಖಲೆ ಅಲ್ಲ!
ಆದರೆ ವಿಶ್ವಕಪ್‌ ಇತಿಹಾಸದ ಫೈನಲ್‌ ಪಂದ್ಯದ ದಾಖಲೆಯನ್ನು ಮುರಿ ಯಲು ಅಹ್ಮದಾಬಾದ್‌ ವಿಫ‌ಲ ವಾಗಿದೆ ಎಂದು ಅಧಿಕೃತ ಮಾಹಿತಿ ಯೊಂದು ತಿಳಿಸಿದೆ. 1,32,000 ಪ್ರೇಕ್ಷಕರ ಸಾಮರ್ಥ್ಯವಿದ್ದರೂ ಅಧಿಕೃತ ಲೆಕ್ಕದ ಪ್ರಕಾರ ಇಲ್ಲಿ ನೆರೆದದ್ದು 92,453 ಮಂದಿ ಮಾತ್ರ. ಹೀಗಾಗಿ 2015ರ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ “ಮೆಲ್ಬರ್ನ್ ಫೈನಲ್‌’ ಪಂದ್ಯ ವೀಕ್ಷಕರ ದಾಖಲೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದು ಎಂಸಿಜಿಗೆ ಆಗಮಿಸಿದ ವೀಕ್ಷಕರ ಸಂಖ್ಯೆ 93,013.

ಇಲ್ಲಿ ಇನ್ನೊಂದು ವಿಶೇಷವಿದೆ. ವಿಶ್ವಕಪ್‌ ಫೈನಲ್‌ಗಿಂತ ಅಹ್ಮದಾಬಾದ್‌ನಲ್ಲಿ ನಡೆದ 2023ರ ಐಪಿಎಲ್‌ ಫೈನಲ್‌ ಪಂದ್ಯದ ವೇಳೆ ನೆರೆದ ವೀಕ್ಷಕರ ಸಂಖ್ಯೆಯೇ ಜಾಸ್ತಿ. ಅಂದು 1,01,566 ಪ್ರೇಕ್ಷಕರು ಹಾಜರಿದ್ದರು!

Advertisement

 

Advertisement

Udayavani is now on Telegram. Click here to join our channel and stay updated with the latest news.

Next