Advertisement

World Cup 2023: ಧರ್ಮಶಾಲಾದಲ್ಲಿ ಮಿಂಚಿದ ಮಿಚೆಲ್ ಮತ್ತು ಶಮಿ; ಭಾರತಕ್ಕೆ ರನ್ 274 ಗುರಿ

06:03 PM Oct 22, 2023 | Team Udayavani |

ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ 2023ರ ನ್ಯೂಜಿಲ್ಯಾಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಹಂತದ ಮೇಲುಗೈ ಸಾಧಿಸಿದೆ. ಕಿವೀಸ್ ತಂಡವನ್ನು 273 ರನ್ ಗಳಿಗೆ ಕಟ್ಟಿ ಹಾಕಿದೆ.

Advertisement

ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್ ಪರ ಡ್ಯಾರಲ್ ಮಿಚೆಲ್ ಮತ್ತು ಭಾರತದ ಪರ ಮೊಹಮ್ಮದ್ ಶಮಿ ಮಿಂಚಿದರು. ಕಿವೀಸ್ ತಂಡವು 50 ಓವರ್ ಗಳಲ್ಲಿ 273 ರನ್ ಗಳಿಗೆ ಆಲೌಟಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಭಾರತ ಮೊದಲೆರಡು ವಿಕೆಟ್ ಗಳನ್ನು ಬೇಗನೆ ಪಡೆಯಲು ಸಫಲವಾಗಿತು. ಕಾನ್ವೇ ಶೂನ್ಯಕ್ಕೆ ಔಟಾದರೆ, ವಿಲ್ ಯಂಗ್ 17 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್ ಗೆ ಜೊತೆಯಾದ ರಚಿನ್ ರವೀಂದ್ರ ಮತ್ತು ಡ್ಯಾರಲ್ ಮಿಚೆಲ್ 169 ರನ್ ಜೊತೆಯಾಟವಾಡಿದರು. ರವೀಂದ್ರ 75 ರನ್ ಗಳಿಸಿದರೆ, ಅದ್ಭುತ ಶತಕ ಬಾರಿಸಿದರು. 127 ಎಸೆತಗಳಲ್ಲಿ ಮಿಚೆಲ್ 130 ರನ್ ಪೂರೈಸಿದರು.

ಈ ವಿಶ್ವಕಪ್ ಕೂಟದಲ್ಲಿ ಮೊದಲ ಪಂದ್ಯವಾಡುವ ಅವಕಾಶ ಪಡೆದ ಶಮಿ ಐದು ವಿಕೆಟ್ ವಿಕೆಟ್ ಪಡೆದು ಮಿಂಚಿದರು. ಇದೇ ವೇಳೆ ಏಕದಿನ ವಿಶ್ವಕಪ್ ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು.

Advertisement

ಉಳಿದಂತೆ ಕುಲದೀಪ್ ಯಾದವ್ ಎರಡು ವಿಕೆಟ್, ಬುಮ್ರಾ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next