Advertisement

ವಿಶ್ವಕಪ್‌ – 2019 : ವಿಶ್ವ ಕ್ರಿಕೆಟ್‌ ಸಮರಕ್ಕೆ ವಿರಾಟ್‌ ಕೊಹ್ಲಿ ಪಡೆ

03:46 AM Apr 16, 2019 | Team Udayavani |

ಮುಂಬಯಿ: ಗೆದ್ದು ಬಾ ಇಂಡಿಯಾ… ಅಭಿಮಾನಿಗಳ ಇಂಥದ್ದೇ ಘೋಷಣೆಗಳ ಜತೆಯಲ್ಲಿ ವಿಶ್ವಕಪ್‌ ಕ್ರಿಕೆಟ್‌ ಕ್ರೀಡಾಕೂಟಕ್ಕೆ ತೆರಳಲು ಸಿದ್ಧವಾಗಿದೆ ಭಾರತ.

Advertisement

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಮೇ 30 ರಂದು ಆರಂಭವಾಗಲಿರುವ ಈ ವಿಶ್ವ ಸಮರಕ್ಕೆ ತೆರಳಲಿರುವ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದಾರೆ. ರೋಹಿತ್‌ ಶರ್ಮ ಉಪನಾಯಕ ಪಟ್ಟ ಅಲಂಕರಿಸಿದ್ದರೆ, ಧೋನಿ ಹಿರಿಯಣ್ಣನಂತೆ ತಂಡದ ಜತೆ ತೆರಳಲಿದ್ದಾರೆ. ಅಚ್ಚರಿಯ ಆಯ್ಕೆ ಎಂದರೆ ದಿನೇಶ್‌ ಕಾರ್ತೀಕ್‌ ಮತ್ತು ವಿಜಯ ಶಂಕರ್‌.

ಉಳಿದಂತೆ ರಾಜ್ಯದಿಂದ ಕೆ.ಎಲ್‌. ರಾಹುಲ್‌ ತಂಡದ ಜತೆ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಕಪಿಲ್‌ ದೇವ್‌ ನೇತೃತ್ವದಲ್ಲಿ ಒಮ್ಮೆ, ಎಂ.ಎಸ್‌. ಧೋನಿ ನೇತೃತ್ವದಲ್ಲಿ ಮಗದೊಮ್ಮೆ ಟ್ರೋಫಿ ಗೆದ್ದಿರುವ ಭಾರತ, ಈ ಬಾರಿಯೂ ಕೊಹ್ಲಿ ನೇತೃತ್ವದಲ್ಲಿ ಗೆಲ್ಲಲಿ ಎಂಬುದೇ ಅಭಿಮಾನಿಗಳ ಆಶಯ.

ಮಂಗಳೂರಿನ ರಾಹುಲ್‌ ರಾಜ್ಯದ ಏಕೈಕ ಆಟಗಾರ
ಮಂಗಳೂರು: ವಿಶ್ವಕಪ್‌ ಕೂಟಕ್ಕೆ ಆಯ್ಕೆಯಾಗಿರುವ ಭಾರತ ಕ್ರಿಕೆಟ್‌ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಏಕೈಕ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಮಂಗಳೂರಿನವರು ಎನ್ನುವುದು ಕರಾವಳಿಗರಿಗೆ ಹೆಮ್ಮೆಯ ವಿಷಯ.
ಮಂಗಳೂರಿನಲ್ಲಿ ಶಿಕ್ಷಣ ಮತ್ತು ಕ್ರಿಕೆಟ್‌ ತರಬೇತಿ ಪಡೆದಿರುವ ರಾಹುಲ್‌ ಇತ್ತೀಚೆಗೆ ಭಾರತ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲವಾದರೂ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಇದುವರೆಗೆ ಭಾರತ ತಂಡದ ಪರ 34 ಟೆಸ್ಟ್‌ ಮತ್ತು 14 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next