Advertisement

ಇಂಗ್ಲೆಂಡ್‌-ಆಸ್ಟ್ರೇಲಿಯ ಬಿಗ್‌ ಮ್ಯಾಚ್‌; ಏಕದಿನ ಕಾಳಗ

09:07 AM Jun 27, 2019 | Team Udayavani |

ಲಂಡನ್‌: ವಿಶ್ವಕಪ್‌ ಕೂಟದ ಮತ್ತೂಂದು ದೊಡ್ಡ ಪಂದ್ಯಕ್ಕೆ ಮಂಗಳವಾರ ಐತಿ ಹಾಸಿಕ ಲಾರ್ಡ್ಸ್‌ ಅಂಗಳ ಸಾಕ್ಷಿಯಾಗ ಲಿದೆ. ಭಾರತ- ಪಾಕಿಸ್ಥಾನ ನಡುವಿನ ಹೈ ವೋಲ್ಟೇಜ್ ಮ್ಯಾಚ್‌ ಬಳಿಕ ಕ್ರಿಕೆಟಿನ ಬದ್ಧ ಎದುರಾಳಿಗಳಾದ ಇಂಗ್ಲೆಂಡ್‌-ಆಸ್ಟ್ರೇಲಿಯ ತಂಡಗಳಿಲ್ಲಿ ಪ್ರತಿಷ್ಠೆಯ ಕಾಳಗ ನಡೆಸಲಿವೆ.

Advertisement

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಆರರಲ್ಲಿ ಐದನ್ನು ಗೆದ್ದು ದ್ವಿತೀಯ ಸ್ಥಾನ ದಲ್ಲಿದ್ದರೆ, ಇಂಗ್ಲೆಂಡ್‌ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ 4ನೇ ಸ್ಥಾನದಲ್ಲಿದೆ.

ಆತಿಥೇಯ ಇಂಗ್ಲೆಂಡ್‌ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ. ಆದರೆ ಇವರ ಆಟವೇನಿದ್ದರೂ ಫ್ಲ್ಯಾಟ್‌ ಟ್ರ್ಯಾಕ್‌ಗಳಲ್ಲಿ ಮಾತ್ರ ಎಂಬುದು ಸಾಬೀತಾಗಿದೆ. ಲೀಡ್ಸ್‌ನಲ್ಲಿ ಶ್ರೀಲಂಕಾದಂಥ ಸಾಮಾನ್ಯ ತಂಡದೆದುರು 233 ರನ್‌ ಮಾಡಲಾಗದೆ ಎಡವಿದ ಒತ್ತಡದಲ್ಲಿದೆ ಮಾರ್ಗನ್‌ ಪಡೆ. ಇದಕ್ಕೂ ಮೊದಲು ಅದು ಪಾಕಿಸ್ಥಾನ ವಿರುದ್ಧ ಸೋತಿತ್ತು. ಮೊದಲ ಸಲ ವಿಶ್ವಕಪ್‌ ಗೆಲ್ಲುವ ಯೋಜನೆಯಲ್ಲಿರುವ ಇಂಗ್ಲೆಂಡಿಗೆ ಇದು ಮಹತ್ವದ ಪಂದ್ಯವಾಗಿದ್ದು, ಸೋತರೆ ನಾಲ್ಕರಾಚೆಯ ತಂಡಕ್ಕೆ ಮೇಲೇರಲು ದಾರಿ ಮಾಡಿಕೊಟ್ಟಂತಾಗುತ್ತದೆ.

ಇದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೇವಲ 2ನೇ ಪಂದ್ಯ. ರವಿವಾರವಷ್ಟೇ ಇಲ್ಲಿ ದಕ್ಷಿಣ ಆಫ್ರಿಕಾ ಎದುರು ಪಾಕಿಸ್ಥಾನ ಮುನ್ನೂರರ ಗಡಿ ದಾಟಿತ್ತು. ಹೀಗಾಗಿ ಇಲ್ಲಿ ರನ್‌ ಸುರಿಮಳೆಯನ್ನು ನಿರೀಕ್ಷಿಸಬಹುದಾಗಿದೆ.

ಚಾಂಪಿಯನ್ನರ ಆಟ
ಇನ್ನೊಂದೆಡೆ ಆಸ್ಟ್ರೇಲಿಯ ಚಾಂಪಿಯನ್ನರ ಆಟವನ್ನೇ ಆಡುತ್ತ ಬಂದಿದೆ. ಯಾವುದೇ ರೀತಿಯ ಟ್ರ್ಯಾಕ್‌ ಇದ್ದರೂ ಅದಕ್ಕೆ ಒಗ್ಗಿಕೊಂಡು ಆಡುವುದು ಫಿಂಚ್‌ ಪಡೆಯ ವೈಶಿಷ್ಟé. ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ದಾಖಲೆಗಳೂ ಆಸೀಸ್‌ ಪರವಾಗಿವೆ.

Advertisement

ಆಂಗ್ಲರ ಪಡೆ ಕೇವಲ ಬ್ಯಾಟಿಂಗನ್ನೇ ನೆಚ್ಚಿಕೊಂಡರೆ, ಆಸೀಸ್‌ ಬೌಲಿಂಗ್‌ ವಿಭಾಗದಲ್ಲೂ ಘಾತಕವಾಗಿದೆ. ಇಲ್ಲಿ ಜೋಫ‌Å ಆರ್ಚರ್‌ ಅವರನ್ನು ಟಾರ್ಗೆಟ್‌ ಮಾಡಿ ಬ್ಯಾಟ್‌ ಬೀಸುವುದು ಆಸೀಸ್‌ ಗೇಮ್‌ಪ್ಲ್ರಾನ್‌ ಆಗಿದ್ದರೆ ಅಚ್ಚರಿ ಏನಿಲ್ಲ.

ಸಂಭಾವ್ಯ ತಂಡಗಳು
ಇಂಗ್ಲೆಂಡ್‌: ಜೇಮ್ಸ್‌ ವಿನ್ಸ್‌, ಜಾನಿ ಬೇರ್‌ಸ್ಟೊ, ಜೋ ರೂಟ್‌, ಇಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌, ಮೊಯಿನ್‌ ಅಲಿ, ಕ್ರಿಸ್‌ ವೋಕ್ಸ್‌, ಜೋಫ‌ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಉಸ್ಮಾನ್‌ ಖ್ವಾಜಾ, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆ್ಯಡಂ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next