Advertisement

ಶಕಿಬ್‌ ಶತಕ: ವಿಂಡೀಸನ್ನು ಬಗ್ಗುಬಡಿದ ಬಾಂಗ್ಲಾ

10:49 AM Jun 20, 2019 | Sriram |

ಟೌಂಟನ್‌: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಬಾರಿಸಿದ ಸತತ 2ನೇ ಶತಕ ಸಾಹಸದಿಂದ ವಿಶ್ವಕಪ್‌ ಮುಖಾಮುಖೀಯ ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸನ್ನು ಬಗ್ಗುಬಡಿದಿದೆ.


Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ 8 ವಿಕೆಟಿಗೆ 321 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾಯಿತು. ಬಾಂಗ್ಲಾದೇಶ 41.3 ಓವರ್‌ಗಳಲ್ಲಿ ಕೇವಲ 3 ವಿಕೆಟಿಗೆ 322 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. 124 ರನ್‌ ಬಾರಿಸಿದ ಶಕಿಬ್‌ ಅಲ್‌ ಹಸನ್‌ (99 ಎಸೆತ, 16 ಬೌಂಡರಿ) ಮತ್ತು 94 ರನ್‌ ಮಾಡಿದ ಲಿಟನ್‌ ದಾಸ್‌ (69 ಎಸೆತ, 8 ಬೌಂಡರಿ, 4 ಸಿಕ್ಸರ್‌) ಅಜೇಯರಾಗಿ ಉಳಿದರು.

ಶಕಿಬ್‌ ಇದಕ್ಕೂ ಹಿಂದಿನ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ 121 ರನ್‌ ಹೊಡೆದಿದ್ದರು. ಆದರೆ ಈ ಪಂದ್ಯದಲ್ಲಿ ಬಾಂಗ್ಲಾ ಸೋಲು ಕಂಡಿತ್ತು. ಶಕಿಬ್‌ ಸತತ 2 ಏಕದಿನಗಳಲ್ಲಿ ಶತಕ ಬಾರಿಸಿದ ಬಾಂಗ್ಲಾದ 4ನೇ ಆಟಗಾರ ಆಗಿದ್ದಾರೆ.ಈ ಜಯದೊಂದಿಗೆ ಬಾಂಗ್ಲಾದೇಶವೀಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ವೆಸ್ಟ್‌ ಇಂಡೀಸ್‌ ಏಳಕ್ಕೆ ಕುಸಿದಿದೆ.

ವಿಂಡೀಸ್‌ ಸವಾಲಿನ ಮೊತ್ತ
ಕ್ರಿಸ್‌ ಗೇಲ್‌ 13 ಎಸೆತ ಎದುರಿಸಿ ಖಾತೆ ತೆರೆಯಲು ವಿಫ‌ಲರಾದರೂ ಉಳಿದ ಬ್ಯಾಟ್ಸ್‌ಮನ್‌ಗಳ ದಿಟ್ಟ ಆಟದಿಂದ ಚೇತರಿಸಿಕೊಂಡ ವೆಸ್ಟ್‌ ಇಂಡೀಸ್‌ ಮುನ್ನೂರರ ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು.ಆರಂಭಕಾರ ಲೆವಿಸ್‌, ಕೀಪರ್‌ ಶೈ ಹೋಪ್‌, ಹಾರ್ಡ್‌ ಹಿಟ್ಟರ್‌ ಶಿಮ್ರನ್‌ ಹೆಟ್‌ಮೈರ್‌ ಸೇರಿಕೊಂಡು ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಲೆವಿಸ್‌-ಹೋಪ್‌ ದ್ವಿತೀಯ ವಿಕೆಟಿಗೆ 116 ರನ್‌ ಪೇರಿಸಿ ತಂಡವನ್ನು ಮೇಲೆತ್ತಿದರು. ಲೆವಿಸ್‌ 67 ಎಸೆತಗಳಿಂದ 70 ರನ್‌ ಬಾರಿಸಿದರೆ (6 ಬೌಂಡರಿ, 2 ಸಿಕ್ಸರ್‌), ಹೋಪ್‌ ಕೇವಲ 4 ರನ್‌ ಕೊರತೆಯಿಂದ ಶತಕ ತಪ್ಪಿಸಿಕೊಂಡರು. ಅವರ 96 ರನ್‌ 121 ಎಸೆತಗಳಿಂದ ಬಂತು. ಹೊಡೆದದ್ದು ಕೇವಲ 4 ಬೌಂಡರಿ ಮತ್ತು ಒಂದು ಸಿಕ್ಸರ್‌.

Advertisement

ನಿಕೋಲಸ್‌ ಪೂರನ್‌ 25 ರನ್‌ ಮಾಡಿ ನಿರ್ಗಮಿಸಿದ ಬಳಿಕ ಹೆಟ್‌ಮೈರ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೇವಲ 26 ಎಸೆತ ಎದುರಿಸಿ ಭರ್ತಿ 50 ರನ್‌ ಸಿಡಿಸಿದರು (4 ಬೌಂಡರಿ, 3 ಸಿಕ್ಸರ್‌). ನಾಯಕ ಜಾಸನ್‌ ಹೋಲ್ಡರ್‌ ಗಳಿಕೆ 19 ರನ್‌.

ಸ್ಕೋರ್‌ ಪಟ್ಟಿ
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ರಹೀಂ ಬಿ ಸೈಫ‌ುದ್ದೀನ್‌ 0
ಎವಿನ್‌ ಲೆವಿಸ್‌ ಸಿ ಶಬ್ಬೀರ್‌ (ಬದಲಿ) ಬಿ ಶಕಿಬ್‌ 70
ಶೈ ಹೋಪ್‌ ಸಿ ದಾಸ್‌ ಬಿ ಮುಸ್ತಫಿಜುರ್‌ 96
ನಿಕೋಲಸ್‌ ಪೂರನ್‌ ಸಿ ಸರ್ಕಾರ್‌ ಬಿ ಶಕಿಬ್‌ 25
ಶಿಮ್ರನ್‌ ಹೆಟ್‌ಮೈರ್‌ ಸಿ ತಮಿಮ್‌ ಬಿ ಮುಸ್ತಫಿಜುರ್‌ 50
ಆ್ಯಂಡ್ರೆ ರಸೆಲ್‌ ಸಿ ರಹೀಂ ಬಿ ಮುಸ್ತಫಿಜುರ್‌ 0
ಜಾಸನ್‌ ಹೋಲ್ಡರ್‌ ಸಿ ಮಹಮದುಲ್ಲ ಬಿ ಸೈಫ‌ುದ್ದೀನ್‌ 33
ಡ್ಯಾರನ್‌ ಬ್ರಾವೊ ಬಿ ಸೈಫ‌ುದ್ದೀನ್‌ 19
ಒಶೇನ್‌ ಥಾಮಸ್‌ ಔಟಾಗದೆ 6
ಇತರ 22
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 321
ವಿಕೆಟ್‌ ಪತನ: 1-6, 2-122, 3-159, 4-242, 5-243, 6-282, 7-297, 8-321.
ಬೌಲಿಂಗ್‌:
ಮಶ್ರಫೆ ಮೊರ್ತಜ 8-1-37-0
ಮೊಹಮ್ಮದ್‌ ಸೈಫ‌ುದ್ದೀನ್‌ 10-1-72-3
ಮುಸ್ತಫಿಜುರ್‌ ರಹಮಾನ್‌ 9-0-59-3
ಮೆಹಿದಿ ಹಸನ್‌ 9-0-57-0
ಮೊಸದೆಕ್‌ ಹೊಸೈನ್‌ 6-0-36-0
ಶಕಿಬ್‌ ಅಲ್‌ ಹಸನ್‌ 8-0-54-2
ಬಾಂಗ್ಲಾದೇಶ
ತಮಿಮ್‌ ಇಕ್ಬಾಲ್‌ ರನೌಟ್‌ 48
ಸೌಮ್ಯ ಸರ್ಕಾರ್‌ ಸಿ ಗೇಲ್‌ ಬಿ ರಸೆಲ್‌ 29
ಶಕಿಬ್‌ ಅಲ್‌ ಹಸನ್‌ ಔಟಾಗದೆ 124
ಮುಶ್ಫಿಕರ್‌ ರಹೀಂ ಸಿ ಹೋಪ್‌ ಬಿ ಥಾಮಸ್‌ 1
ಲಿಟನ್‌ ದಾಸ್‌ ಔಟಾಗದೆ 94
ಇತರ 26
ಒಟ್ಟು (41.3 ಓವರ್‌ಗಳಲ್ಲಿ 3 ವಿಕೆಟಿಗೆ) 322
ವಿಕೆಟ್‌ ಪತನ: 1-52, 2-121, 3-133.
ಬೌಲಿಂಗ್‌:
ಶೆಲ್ಡನ್‌ ಕಾಟ್ರೆಲ್‌ 10-0-65-0
ಜಾಸನ್‌ ಹೋಲ್ಡರ್‌ 9-0-62-0
ಆ್ಯಂಡ್ರೆ ರಸೆಲ್‌ 6-0-42-1
ಶಾನನ್‌ ಗ್ಯಾಬ್ರಿಯಲ್‌ 8.3-0-78-0
ಒಶೇನ್‌ ಥಾಮಸ್‌ 6-0-52-1
ಕ್ರಿಸ್‌ ಗೇಲ್‌ 2-0-22-0

Advertisement

Udayavani is now on Telegram. Click here to join our channel and stay updated with the latest news.

Next