ಬೆಂಗಳೂರು: ಇಂದು ವಿಶ್ವ ಕ್ಯಾನ್ಸರ್ ದಿನ. ಇತ್ತೀಚೆಗೆ ಭಯಾನಕ ರೋಗಗಳ ಪೈಕಿ ಕ್ಯಾನ್ಸರ್ ಸಹ ಒಂದು. ಕರ್ನಾಟಕದಲ್ಲಿ ಸುಮಾರು 90 ಸಾವಿರ ಹಾಗೂದೇಶದಲ್ಲಿ ಬರೋಬ್ಬರಿ 12 ಲಕ್ಷ ಮಂದಿ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ.
2021ಕ್ಕೆ ಹೋಲಿಸಿದರೆ 2022ರಲ್ಲಿ ಶೇ.20ರಷ್ಟು ಕ್ಯಾನ್ಸರ್ ರೋಗ ಹೆಚ್ಚಳವಾಗಿದೆ. 2020ರಲ್ಲಿ 70ಸಾವಿರ, 2021ರಲ್ಲಿ 1 ಲಕ್ಷ ಹಾಗೂ 2022ರಲ್ಲಿ 1.25ಲಕ್ಷ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ.48ರಷ್ಟು ಪುರುಷರುಹಾಗೂ ಶೇ.52ರಷ್ಟು ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಸದ್ಯ ಸ್ತನ ಕ್ಯಾನ್ಸರ್ ಶೇ.16.6, ಬಾಯಿಕ್ಯಾನ್ಸರ್ ಶೇ.10.8, ನಾಲಿಗೆ ಶೇ.5.5, ಶ್ವಾಸಕೋಶ ಶೇ.5.1, ರಕ್ತದ ಕ್ಯಾನ್ಸರ್ ಶೇ.4.5, ಗರ್ಭಕಂಠ ಶೇ.5.3, ಅಂಡಾಶಯ ಕ್ಯಾನ್ಸರ್ ಶೇ.3.4, ಪ್ರಾಸ್ಟೆಟ್ ಗ್ರಂಥಿ ಶೆ.2.9, ಅನ್ನನಾಳ ಕ್ಯಾನ್ಸರ್ ಶೇ.3.1ರಷ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿದ್ದು, ಕ್ಯಾನ್ಸರ್‌ನ ಪ್ರಮಾಣವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ದೇಶದಲ್ಲಿ ಒಟ್ಟು 18 ಬಗೆಯ ಕ್ಯಾನ್ಸರ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಶೇ.70ರಷ್ಟು ಪ್ರಕರಣಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭ ಕ್ಯಾನ್ಸರ್, ಊಟದ ನಲಿ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗುತ್ತಿವೆ. ಇದನ್ನು ಹೊರತುಪಡಿಸಿದರೆ ಗರ್ಭಕಂಠ, ತಲೆ ಮತ್ತು ಕುತ್ತಿಗೆ ಹಾಗೂ ಕೊಲೊರೆಕ್ಟಲ್ ಕ್ಯಾನ್ಸರ್‌ಗಳೂ ಕಾಡುತ್ತಿವೆ.
ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದರೆ ಗರ್ಭಕೋಶದ ಕ್ಯಾನ್ಸರ್ ಲಕ್ಷಣಗಳಿರಬಹುದು. ಹಠಾತ್ತನೆ ದೇಹದ ತೂಕ ಕಡಿಮೆಯಾಗುವುದು, ಸ್ತನದಲ್ಲಿ ನೋವು, ಗಡ್ಡೆಗಳುಕಂಡು ಬಂದರೆ ಸ್ತನ ಕ್ಯಾನ್ಸರ್ ಇರಬಹುದು. ಅಲರ್ಜಿ ಚಿಕಿತ್ಸೆಯಿಂದಲೂ ಕಡಿಮೆಯಾಗದಚರ್ಮದ ತುರಿಕೆ, ಗುಳ್ಳೆಗಳು, ಮೈಯಲ್ಲಿ ಊತ,ಮೂಳೆಗಳಲ್ಲಿ ನೋವು, ಧ್ವನಿಯಲ್ಲಿ ಬದಲಾವಣೆ, ತಲೆನೋವು ಇವು ಸಹ ಕ್ಯಾನ್ಸರ್‌ನ ಲಕ್ಷಣಗಳು.
ದೀರ್ಘಕಾಲದವರೆಗೆ ರೋಗಿ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್ ಪೀಡಿತ ವ್ಯಕ್ತಿಯ ದೇಹದಲ್ಲಿರುವ ಜೀವಕೋಶಗಳು ದೇಹದ ಮತ್ತೂಂದು ಅಂಗಗಳಲ್ಲಿ ಅಂಟಿಕೊಂಡು ಆ ಜಾಗದಲ್ಲಿ ಪುನಃ ಬೆಳೆಯಲು ಪ್ರಾರಂಭಿಸುತ್ತವೆ. ಇದನ್ನು ಎರಡನೇ ಹಂತದಲ್ಲಿರುವಕ್ಯಾನ್ಸರ್ ಎನ್ನುತ್ತಾರೆ. ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಕಷ್ಟಸಾಧ್ಯ. ಧೂಮಪಾನ, ಮದ್ಯಪಾನ, ತಂಬಾಕು ಉತ್ಪನ್ನ ತಿನ್ನುವ ದುಶ್ಚಟಗಳು, ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟ್ರಾಲ್, ಸ್ಥೂಲಕಾಯ, ಮಧುಮೇಹದಂತಹ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಹುದು ಎಂದು ತಜ್ಞರು ಹೇಳುತ್ತಾರೆ.
ಪ್ರತಿ ವರ್ಷ ಫೆ. 4ರಂದು ವಿಶ್ವಾದ್ಯಂತ “ವಿಶ್ವ ಕ್ಯಾನ್ಸರ್ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಬದ ಲಾದ ಜೀವನ ಶೈಲಿಯೇ ಕ್ಯಾನ್ಸರ್ ಕಾಯಿಲೆ ಪ್ರಮಾಣ ಭಾರಿ ಏರಿಕೆಯಾಗಲು ಪ್ರಮುಖ ಕಾರಣ ಎಂದು ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ತಿಳಿಸುತ್ತಾರೆ.
ಕ್ಯಾನ್ಸರ್ ಕಾಣಿಸಿಕೊಂಡ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ರೋಬೋಟಿಕ್ ಹಾಗೂ ಲೇಸರ್ ಸರ್ಜರಿಗಳಮೂಲಕ ಆಪರೇಷನ್ ಮಾಡಿಸಿಕೊಂಡು ಕ್ಯಾನ್ಸರ್‌ಗೆ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.ಇದರ ಹೊರತಾಗಿ ಸೂಕ್ತ ಕ್ಯಾನ್ಸರ್ ತಜ್ಞರಲ್ಲಿ ಪರೀಕ್ಷಿಸಿಕೆಲ ತಿಂಗಳುಗಳ ಕಾಲ ಔಷಧಿ ತೆಗೆದುಕೊಂಡು ಕ್ಯಾನ್ಸರ್ ಅನ್ನು ತಡೆಗಟ್ಟಬಹುದಾಗಿದೆ ಎಂದು ಹೇಳುತ್ತಾರೆ.
ತಂಬಾಕಿನಲ್ಲಿ ಕಂಡುಬರುವ ನಿಕೋಟಿನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ತಂಬಾಕಿನವಸ್ತುಗಳನ್ನು ನಿಷೇಧಿಸಿದರೆ ಕ್ಯಾನ್ಸರ್ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
-ಡಾ.ವಿಶಾಲ್ ರಾವ್, ಕ್ಯಾನ್ಸರ್ ತಜ್ಞ