Advertisement
ಫೆ. 24 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಮುನಿಯಾಲ್ ಉದಯ್‌ಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜರಗಿದ ವಿಶ್ವಬಂಟರ ಸಮ್ಮಿಲನ-2018 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದಾದ್ಯಂತದ ಬಂಟರು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಉನ್ನತ ಸ್ಥಾನದಲ್ಲಿರುವ ದಾನಿಗಳು ಬಂಟ ಸಮಾಜಕ್ಕೆ ಕೀರ್ತಿ ತಂದಿರುವ ಜೊತೆಗೆ ಸಮಾಜದಲ್ಲಿ ತೀರಾ ಕೆಳಸ್ತರದಲ್ಲಿರುವ ಬಂಟರ ಬಾಳಿಗೆ ಆಶಾಕಿರಣವಾಗಿ ನೆರವು ನೀಡಲು ಮುಂದೆ ಬರುತ್ತಿರುವುದು ಬಂಟರಲ್ಲಿಯ ಸಹೃದಯತೆ ಮತ್ತು ಮಾನವೀಯ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಬಂಟ ಸಂಘ-ಸಂಸ್ಥೆಗಳು ಹಾಗೂ ಅಸಹಾಯ ಕುಟುಂಬಗಳ ಬಗ್ಗೆ ಒಕ್ಕೂಟವು ತೀವ್ರಗಮನ ಹರಿಸಲಿದೆ. ಮನೆಯಿಲ್ಲದವರಿಗೆ ಮನೆ ಒದಗಿಸುವ ದತ್ತಿನಿಧಿಯೊಂದನ್ನು ಆರಂಭಿಸಲಾಗುವುದು ಎಂದು ನುಡಿದು ಸರ್ವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ಪ್ರಶಾಂತಿ ದಿವಾಕರ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಗಿ, ಐಕಳ ಹರೀಶ್ ಶೆಟ್ಟಿ ಅವರೊಂದಿಗಿನ ತನ್ನ ಸೇವಾ ಕಾರ್ಯದ ದಿನಗಳನ್ನು ನೆನಪಿಸಿಕೊಂಡು, ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಅತಿ ಕಿರು ಸಮಯದಲ್ಲೇ ವಿಶ್ವ ಮಟ್ಟದ ಸಮ್ಮೇಳನ ನಡೆಸಿ ಅದ್ಭುತ ಯಶಸ್ಸು ಕಂಡಿರುವುದಕ್ಕೆ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರನ್ನು ಅಭಿನಂದಿಸಿದರು.
ಸಭಾ ಕಾರ್ಯಕ್ರಮವನ್ನು ಬಂಟರವಾಣಿ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಮತ್ತು ಸನ್ನಿಧಿ ಹರೀಶ್ ಶೆಟ್ಟಿ ನಿರೂಪಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ವಂದಿಸಿದರು.
ವೇದಿಕೆಯಲ್ಲಿದ್ದ ಗಣ್ಯರುವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಖ್ಯ ಅತಿಥಿ ಶಶಿಕಿರಣ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಮುಖ್ಯ ಅತಿಥಿಗಳಾದ ಎ. ಸದಾನಂದ ಶೆಟ್ಟಿ, ಸಚ್ಚಿದಾನಂದ ಶೆಟ್ಟಿ, ಬಂಟ್ಸ್ ನ್ಯಾಯಮಂಡಳಿ ಮುಂಬಯಿ ಇದರ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ, ಗೌರವ ಅತಿಥಿಗಳಾದ ಪ್ರವೀರ್ ಆನಂದ ಶೆಟ್ಟಿ, ಕುಸುಮೋದರ ಡಿ. ಶೆಟ್ಟಿ, ತುಂಗಾಗ್ರೂಪ್ ಆಫ್ ಹೊಟೇಲ್ಸ್‌ನ ಸಿಎಂಡಿ ಸುಧಾಕರ ಎಸ್. ಹೆಗ್ಡೆ, ಬಂಟ್ಸ್ ಸಂಘ ಎಸ್. ಎಂ. ಶೆಟ್ಟಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ವಿ. ಕೆ. ಗ್ರೂಪ್ ಆಫ್ ಕಂಪೆನೀಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ, ಈಸ್ಟ್‌ವೆಲ್ ಆ್ಯಸ್‌ಬೆಸ್ಟಸ್ ಪ್ರೈ. ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಭಾಕರ ಶೆಟ್ಟಿ ಉಲ್ಲಾಸ್ ನಗರ, ಫಾರ್‌ಚೂನ್ ಗ್ರೂಪ್‌ಆಫ್ ಹೊಟೇಲ್ಸ್ ದುಬಾಯಿ ಇದರ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ವಕ್ವಾಡಿ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರವಿ ಎಸ್. ಶೆಟ್ಟಿ, ಬಂಟ್ಸ್ ಸಂಘ ಕತಾರ್ ಇದರ ಸ್ಥಾಪಕ ಅಧ್ಯಕ್ಷ ರವಿ ಶೆಟ್ಟಿ, ರೀಜೆನ್ಸಿ ಗ್ರೂಪ್ ಆಫ್ ಹೊಟೇಲ್ಸ್‌ನ ಜಯರಾಮ ಎನ್. ಶೆಟ್ಟಿ , ಬಂಟರ ಸಂಘ ವಿಶ್ವಸ್ಥ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ತುಳು ಸಂಘ ಬರೋಡ ಇದರ ಅಧಕ್ಷ ಶಶಿಧರ್ ಶೆಟ್ಟಿ ಬರೋಡ, ಪೆನಿನ್ಸುಲಾ ಗ್ರೂಪ್‌ಆಫ್ ಹೊಟೇಲ್ಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕರುಣಾಕರ ಶೆಟ್ಟಿ, ಬಾಬಾಸ್ ಗ್ರೂಪ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ, ಸಂಗೀತ ಹಾಸ್ಪಿಟಲ್ ಮುಲುಂಡ್ ಇದರ ಡಾ| ಸತ್ಯಪ್ರಕಾಶ ಶೆಟ್ಟಿ, ಯೂನಿವರ್ಸಲ್ ಸ್ಕೂಲ್‌ಆಫ್ ಬೆಂಗಳೂರು ಎಡ್ಮಿಸ್ಟ್ರೇಶನ್ ಇದರ ಕಾರ್ಯಾಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಬೆಳಗಾಂವ್‌ನ ಉದ್ಯಮಿ ಸಾಂತೂರು ಭಾಸ್ಕರ್ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಉಮಾ ಕೃಷ್ಣ ಶೆಟ್ಟಿ, ಹೊಟೇಲ್ ಕೃಷ್ಣ ಪ್ಯಾಲೇಸ್ ಕಾರ್ಯಾಧ್ಯಕ್ಷ ಕೃಷ್ಣ ವೈ. ಶೆಟ್ಟಿ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ರತ್ನಾ ಪಿ. ಶೆಟ್ಟಿ ಸಾಂತಾಕ್ರೂಜ್, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ , ಗೌರವ ಕಾರ್ಯದರ್ಶಿ ಸಿಎ ಸಂಜೀವ್ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟ ಸಂಘಗಳ ಗೌರವ ಕಾರ್ಯದರ್ಶಿ ವಿಜಯ್ ಪ್ರಸಾದ್ ಆಳ್ವ, ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯಕ್ರಮ ಸಂಚಾಲಕ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಕಾರಿ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಯುವ ವಿಭಾಗ ಸಮನ್ವಯಕ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು. ದಿನಪೂರ್ತಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ಪ್ರಥಮ, ದ್ವಿತೀಯ ನವಿಮುಂಬಯಿ ಪ್ರಾದೇಶಿಕ ಸಮಿತಿ ಹಾಗೂ ತೃತೀಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಪಡೆಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಹೃದಯಕ್ಕೆ ತಟ್ಟುವ ರೀತಿಯಲ್ಲಿ ಸಮ್ಮಾನಿಸಿ, ಗೌರವಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಒಬ್ಬ ದಕ್ಷ ನಾಯಕನಾಗಿ ಪ್ರಾಮಾಣಿಕ ಸೇವಾ ದುರಂಧರನಾಗಿ ಬಂಟ ಸಮುದಾಯದ ಸೇವೆಗಾಗಿ ತನ್ನನ್ನು ಮುಡಿಪಾಗಿಸಿರುವ ಐಕಳ ಹರೀಶ್ ಶೆಟ್ಟಿ ಇವರಿಗೆ ಬಂಟರ ಸಂಪೂರ್ಣ ಸಹಕಾರ ಇರಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲಾ ಬಂಟರೊಂದಿಗೆ ಐಕಳ ಹರೀಶ್ ಶೆಟ್ಟಿ ಅವರು ಇಟ್ಟುಕೊಂಡಿರುವ ಅನ್ಯೋನ್ಯ ಸಂಬಂಧ ಅವರ ಯಶಸ್ಸಿಗೆ ಕಾರಣವಾಗಿದೆ. ಯುವ ಪೀಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕೃತಿ-ಸಂಸ್ಕಾರವನ್ನು ನೀಡಲು ಹೆತ್ತವರು ಎಂದಿಗೂ ಮರೆಯಬಾರದು –
ಶಶಿಕಿರಣ್ ಶೆಟ್ಟಿ ( ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ : ಆಲ್‌ಕಾರ್ಗೋ ಲಾಜಿಸ್ಟಿಕ್ಸ್ ಕಂಪೆನಿ). ಇಂದು ಪ್ರಪಂಚದ ಬಂಟರ ಶಕಿÂಯ ಅನಾವರಣಗೊಂಡಿದೆ ಎನ್ನುವುದು ನನಗೆ ಅತ್ಯಂತ ಸಂತಸ ನೀಡಿದೆ. ಬಂಟರು ಒಂದೇ ವೇದಿಕೆಯಲ್ಲಿದ್ದು, ಚಿಂತನ-ಮಂಥನ ಮಾಡುವದರಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು, ಬಂಟರು ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಲು ಸುಲಭ ಸಾಧ್ಯವಾಗುತ್ತದೆ. ದೇವರಲ್ಲಿ ಭಕ್ತಿ, ಮಾತಾ-ಪಿತರಲ್ಲಿ ಪ್ರೀತಿ, ಗೌರವ, ಸಾಧಿಸುವ ಛಲ, ಗುರಿಮುಟ್ಟುವ ಹಂಬಲ ಈ ಧ್ಯೇಯ ನಮ್ಮಲ್ಲಿದ್ದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಐಕಳ ಹರೀಶ್ ಶೆಟ್ಟಿ ಈ ಎಲ್ಲಾ ಗುಣಗಳನ್ನು ಹೊಂದಿರುವುದರಿಂದ ವಿಶ್ವದ ಬಂಟ ಜನನಾಯಕನಾಗಿ ಎತ್ತರಕ್ಕೇರಲು ಸಾಧ್ಯವಾಗಿದೆ. ಅವರ ಯೋಜನೆ-ಯೋಚನೆಗಳು ಇಂದು ನಮ್ಮ ಸಮಾಜಕ್ಕೆ ಅತೀ ಅಗತ್ಯವಾಗಿದೆ. ಆದ್ದರಿಂದ ನಾವೆಲ್ಲರು ಅವರಿಗೆ ಸಹಕರಿಸೋಣ
ಕೆ. ಡಿ. ಶೆಟ್ಟಿ (ಕಾರ್ಯಾಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು : ಭವಾನಿ ಗ್ರೂಪ್ ಆಫ್ ಕಂಪೆನೀಸ್ ಮುಂಬಯಿ). ಐಕಳ ಹರೀಶ್ ಶೆಟ್ಟಿಯವರಲ್ಲಿ ಎಲ್ಲಾ ರೀತಿಯ ಗುಣ ಸ್ವಭಾವ ಮೈಗೂಡಿರುವುದರಿಂದ ಹಾಗೂ ಬಂಟ ಸಮುದಾಯದ ಬಗ್ಗೆ ಅನನ್ಯ ಕಳಕಳಿ ಇರುವುದರಿಂದ ಅವರ ಚಿಂತನೆಯ ಅತ್ಯಮೂಲ್ಯ ಯೋಜನೆಗಳು ಸಾಕಾರವಾಗಲು ಸರ್ವರ ಸಹಕಾರ ಅಗತ್ಯವಾಗಿದೆ. ಜಗತ್ತಿನಲ್ಲಿರುವ ಬಡತನ ನಿವಾರಣೆಗೆ ಶಿಕ್ಷಣವೇ ಮೂಲ ಮಂತ್ರವಾಗಿದೆ. ಶಿಕ್ಷಣವು ಬದುಕಿನ ಪ್ರತಿಯೊಂದು ಹೆಜ್ಜೆಗೂ ಪ್ರೇರಣೆ ನೀಡುತ್ತದೆ ಎಂಬುವುದನ್ನು ನಾವು ಎಂದಿಗೂ ಮರೆಯಬಾರದು –
ಆನಂದ ಶೆಟ್ಟಿ
(ಸಿಎಂಡಿ : ಆರ್ಗಾನಿಕ್ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್). ವಿಶ್ವನಾಯಕನ ಕಾಯಕ ಏನೆಂಬುವುದನ್ನು ಐಕಳ ಹರೀಶ್ ಶೆಟ್ಟಿ ಅವರು ತೋರಿಸಿಕೊಟ್ಟಿದ್ದಾರೆ. ಅವರ ಸಾಧನೆ ಆದಮ್ಯವಾದುದು. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವದ ಬಂಟರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕರ್ಮಭೂಮಿ ನಮಗೆ ನೀಡಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟರೆ ಸಾವಿರ ಸಾವಿರ ಬಂಟ ಕುಟುಂಬಗಳ ಬಾಳು ಬೆಳಗಲು ಸಾಧ್ಯ
ಉಮಾಕೃಷ್ಣ ಶೆಟ್ಟಿ (ಉದ್ಯಮಿ). ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.