Advertisement

World Bicycle Day; ಮಾನವನ ಸಾರ್ವಕಾಲಿಕ ಮಿತ್ರ ಸೈಕಲ್‌ : ಇಂದು ವಿಶ್ವ ಬೈಸಿಕಲ್‌ ದಿನ

10:39 AM Jun 03, 2022 | Team Udayavani |

ಜನಸಾಮಾನ್ಯನ ಪಾಲಿಗೆ ಸೈಕಲ್‌ ಇಂದಿಗೂ ಸಂಚಾರ ಸಾಧನವಾಗಿದ್ದರೆ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್‌ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್‌ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್‌ ಪೆಡಲ್‌ಗ‌ಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಬಂದಿವೆ.

Advertisement

ದಿನಪನ ದರ್ಶನವಾಗುವ ಮುನ್ನ ಇಬ್ಬನಿಗಳ ಸೀಳಿಕೊಂಡು, ಸೈಕಲ್‌ ತುಳಿ ಯುತ್ತಾ ವಿಶಾಲವಾದ ಮನೆಯಂಗಳದಲ್ಲೋ, ಊರಿನ ಆಟದ ಮೈದಾನದಲ್ಲೋ, ಉದ್ಯಾನವನದ ಕಾಲುದಾರಿಯಲ್ಲೋ ಸಾಗುವುದೆಂದರೆ ದೇಹ ಮತ್ತು ಮನಸ್ಸಿಗೆ ಎಲ್ಲಿಲ್ಲದ ಪುಳಕ. ದೇಹದ ವ್ಯಾಯಾಮಕ್ಕೆ ಸೈಕಲ್‌ ತುಳಿ ಯುವುದಕ್ಕಿಂತ ಮಿಗಿಲಾದ ಚಟು ವಟಿಕೆ ಇನ್ನೊಂದಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್‌ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಪ್ರತಿನಿತ್ಯ ಸೈಕಲ್‌ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆ ಗಳಿಂದ ದೂರ ವುಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಲು ಸಾಧ್ಯ.

ಕ್ರಿಸ್ತ ಶಕ 1817ರ ಜೂನ್‌ 12ರಂದು ಜರ್ಮನಿಯ ಬ್ಯಾರನ್‌ ಕಾರ್ಲ್ ವನ್‌ ಡ್ರೈಸ್‌ ಅವರು ಬೈಸಿಕಲ್‌ ಅನ್ನು ವಿಶ್ವದ ಜನತೆಗೆ ಪರಿಚಯಿ ಸಿದರು ಎಂಬ ಉಲ್ಲೇಖವಿದೆ. ಆ ಬಳಿಕ ನಿರಂತರ ವಾಗಿ ಜಗತ್ತಿನಾದ್ಯಂತ ಸಂಚಾರ ಸಾಧನವಾಗಿ ಈ ಸೈಕಲ್‌ ವ್ಯಾಪಕವಾಗಿ ಬಳಸಲ್ಪಟ್ಟಿತ್ತು. ಕಾಲಕ್ಕೆ ತಕ್ಕಂತೆ ಸೈಕಲ್‌ಗ‌ಳೂ ಸುಧಾರಣೆ ಕಂಡವು. ಇದರ ಜತೆಯಲ್ಲಿ ಸೈಕ್ಲಿಂಗ್‌ ಒಂದು ಕ್ರೀಡೆಯಾಗಿ, ದೈಹಿಕ ವ್ಯಾಯಾಮಕ್ಕೆ ಬಳಸಲ್ಪಡುವ ಸಾಧನವಾಗಿ ಪರಿಗಣಿಸಲ್ಪಟ್ಟಿತು. 2018 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷದ ಜೂನ್‌ 3 ರಂದು “ವಿಶ್ವ ಬೈಸಿಕಲ್‌ ದಿನ’ವಾಗಿ ಆಚರಿಸಲು ನಿರ್ಧರಿಸಲಾಯಿತು. ಸರ್ವರ ಸ್ನೇಹಿ ಸೈಕಲ್‌ಗೆ ಇನ್ನೂರರ ಹರೆಯ ದಾಟಿದ್ದರೂ ವಿಶ್ವ ಸೈಕಲ್‌ ದಿನವಿನ್ನೂ ಮೂರರ ಎಳೆಯ ಕೂಸು!. ಮಾನವನ ದಿನಚರಿಯಲ್ಲಿ ಹಾಸುಹೊಕ್ಕಾಗಿರುವ ಸೈಕಲ್‌ ಎಲ್ಲ ಆಧುನಿಕ ವಾಹನಗಳ ಭರಾಟೆಯ ಹೊರ ತಾಗಿಯೂ ಇಂದಿಗೂ ಒಂದಲ್ಲ ಒಂದು ತೆರನಾಗಿ ಬಳಕೆಯಾಗುತ್ತಿದೆ. ಜನಸಾಮಾನ್ಯನ ಪಾಲಿಗೆ ಸೈಕಲ್‌ ಇಂದಿಗೂ ಸಂಚಾರ ಸಾಧನವಾಗಿದ್ದರೆ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್‌ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್‌ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್‌ ಪೆಡಲ್‌ಗ‌ಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಬಂದಿವೆ. ಆ ಮೂಲಕ ಪ್ರತಿನಿತ್ಯ ದೈಹಿಕವಾಗಿ ಒಂದಿಷ್ಟು ವ್ಯಾಯಾಮ ನಡೆಸುತ್ತಿದ್ದಾರೆ.

ಸೈಕಲ್‌ ಎಂದರೆ ಅದೊಂದು ವಿಸ್ಮಯದ ವಿಶ್ವ. ಪುಟ್ಟಪುಟ್ಟ ಹೆಜ್ಜೆಯನಿಟ್ಟು ನಡೆವ ಕಂದಮ್ಮನಿಗೆ ಆಗಲೇ ಮೂರು ಚಕ್ರದ ಸೈಕಲ್‌, ತರಹೇವಾರಿ ಗೊಂಬೆಗಳ ಚಿತ್ತಾರದೊಂದಿಗೆ ಮನೆಯ ಹೊಸ ಸದಸ್ಯನಾಗಿ ಬಂದು ಬಿಡುತ್ತದೆ. ಮೂರು ಚಕ್ರದ ಸೈಕಲ್‌ನಲ್ಲಿ ಪ್ರಪಂಚವನ್ನೇ ಸುತ್ತಿದಂತೆ, ಮನೆಯ ಮೂಲೆಮೂಲೆಗಳನ್ನು ಸುತ್ತುವ ಪುಟಾಣಿಗಳ ಆನಂದವು ಮಾತಿಗೆ ನಿಲುಕದ್ದು, ಪದಗಳಲ್ಲಿ ಪಡಿಮೂಡಿಸಲಸದಳವಾದದ್ದು. ಹಾಗೆಯೇ ಬಾಲ್ಯದ ಆರಂಭದ ದಿನಗಳಿಗೆ ಕಾಲಿಡುವಾಗ ಪುಟಾಣಿಗಳ ಸಂಗಾತಿಯಾಗಿ ದೊಡ್ಡದೆರೆಡು ಚಕ್ರಗಳಿಗೆ ಬೆಂಗಾವಲಾಗಿ ನಿಲ್ಲವ ಪುಟ್ಟದೆರೆಡು ಚಕ್ರಗಳಿರುವ ಸೈಕಲ್‌ ಮನೆಯಂಗಳಕ್ಕೆ ಬರುವುದು ಸಾಮಾನ್ಯ. ಮನೆಯಂಗಳವನ್ನೂ ದಾಟಿ, ತನ್ನ ಓರಗೆಯ ಮಕ್ಕಳೊಡನೆ ಆಟವಾಡುವ ಪುಟಾಣಿ ಗಳ ಸಾಮ್ರಾಜ್ಯಕ್ಕೆ ನಾಲ್ಕು ಚಕ್ರದ ಈ ಪುಟ್ಟ ಸೈಕಲ್ಲೇ ಚಕ್ರವರ್ತಿ. ಹದಿಹರೆಯದ ವಯಸ್ಸಿನಲ್ಲಿ ಇಂಧನ ಬಳಸಿ ಸಾಗುವ ದ್ವಿಚಕ್ರ ವಾಹನಗಳಿಗೂ ಕಡಿಮೆ ಇಲ್ಲವೆಂಬಂತೆ, ಶರವೇಗದಲ್ಲಿ ತುಳಿಯುವ ಸಾಮಾನ್ಯ ಸೈಕಲ್‌ ಹಾಗೂ ಆಧುನಿಕ ಗೇರ್‌ ಸೈಕಲ್‌ಗ‌ಳು ಮಕ್ಕಳಿಗೆ ವ್ಯಾಯಾಮದೊಂದಿಗೆ ಪ್ರತಿ ಯೊಂದು ಕೆಲಸಕ್ಕೂ ಆಪ್ತಮಿತ್ರನಂತೆ ಜತೆಗೂಡು ತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ವಯಸ್ಕರು, ಹಿರಿಯ ನಾಗರಿಕರೂ ಕೂಡ ದೈಹಿಕ ಆರೋಗ್ಯದ ದಿವ್ಯಔಷಧ ವೆಂಬಂತೆ ಸೈಕಲ್‌ ಅನ್ನು ಬಳಕೆ ಮಾಡುತ್ತಿರುವುದು ಸೈಕಲ್‌ನ ಸಾರ್ವಕಾಲಿಕ ಉಪಯುಕ್ತತೆಯನ್ನು ಎತ್ತಿ ಹಿಡಿದಿದೆ. ವಯಸ್ಸಿನ ಭೇದ ವಿಲ್ಲದೆ, ಸೈಕಲ್‌ ರೇಸ್‌ಗಳಲ್ಲಿ ಪಾಲ್ಗೊಂಡು, ವಾರಾಂತ್ಯದ ದಿನಗಳಲ್ಲಿ ಮುದ ಪಡೆಯುವ ಒಂದಿಷ್ಟು ಸೈಕಲ್‌ ಪ್ರೇಮಿಗಳೂ ಇದ್ದಾರೆ ಎಂಬುದು ಸೈಕಲ್‌ನ ಪಾರುಪತ್ಯ ವನ್ನು ಪ್ರತಿಬಿಂಬಿಸುತ್ತದೆ. ವಾಯು ಮಾಲಿನ್ಯದಿಂದ ತತ್ತರಿಸಿರುವ ಇಳೆಯ ಮಾಲಿನ್ಯದ ಕೊಳೆ ಕಡಿಮೆ ಮಾಡಲು ಸೈಕಲ್‌ ಬಳಕೆ ಬ್ರಹ್ಮಾಸ್ತ್ರವಿದ್ದಂತೆ.

ಸುಮಾರು 70-80 ರ ದಶಕದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ದೂರ ದೂರಿನ ಶಾಲೆಗೆ ತೆರಳಲು ಮತ್ತು ಜನಸಾಮಾನ್ಯರಿಗೆ ದೈನಂದಿನ ಕೆಲಸಗಳಿಗೆ ತೆರಳಲು ಸೈಕಲ್‌ ಸಾರಿಗೆಯ ಪ್ರಮುಖ ಸಾಧನವಾಗಿತ್ತು. ದಿನಪತ್ರಿಕೆಯ ಹಂಚು ವವರಿಗೂ, ಅಂಚೆಯಣ್ಣನಿಗೂ ಸೈಕಲ್‌ ಎಂದರೆ ವೃತ್ತಿಯ ಅವಿಭಾಜ್ಯ ಅಂಗವೆಂಬಂತಿತ್ತು. ಶಾಲಾ ಮಕ್ಕಳು ಸ್ನೇಹಿತರೊಂದಿಗೆ ಸೈಕಲ್‌ ತುಳಿಯುತ್ತಾ, ಹರಟೆ ಹೊಡೆಯುತ್ತಾ ಸಾಗುವುದೆಂದರೆ ಅವು ವಿದ್ಯಾರ್ಥಿ ಜೀವನದ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನಗಳಾಗಿದ್ದವು. ಪ್ರಸ್ತುತ ದಿನಗಳಲ್ಲಿಯೂ ಗ್ರಾಮೀಣ ಭಾಗದಲ್ಲಿನ ಪ್ರೌಢಶಾಲಾ ಮಕ್ಕಳ ಕಲಿಕೆಗೆ ಪೂರಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಕೂಡ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್‌ ಒದಗಿಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲೆ ಮತ್ತಷ್ಟು ಸನಿಹವಾಗಿದೆ. ಒಟ್ಟಾರೆಯಾಗಿ ಅಂದು-ಇಂದು-ಎಂದೆಂದೂ ಸೈಕಲ್‌ ವಿದ್ಯಾರ್ಥಿ ಮಿತ್ರ ಎಂದರೆ ಉತ್ಪ್ರೇಕ್ಷೆಯಾಗಲಾರದು.

Advertisement

ಪ್ರಸ್ತುತ ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಮನೆಯೊಳಗೆಯೇ ಲಾಕ್‌ ಆಗಬೇಕಾದ ಅನಿವಾರ್ಯ ಎದುರಾದಾಗಲೂ ಎಲ್ಲರ ನೆರವಿಗೆ ಬರುವ ಏಕೈಕ ಸಾಧನವೆಂದರೆ ಅದು ಸೈಕಲ್‌ ಮಾತ್ರ! ಪುಟ್ಟ ಮಕ್ಕಳಿಗೆ ಮನೆ ಯೊಳಗಿನ ಏಕತಾನತೆಯನ್ನು ದೂರಮಾಡಲು ಮನೆಯಂಗಳದಲ್ಲಿ ಆಟವಾಡಿ ಕಾಲ ಕಳೆಯಲು, ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಅತ್ಯುಪ ಯುಕ್ತವಾಗುವ ಮಿತ್ರನೇ ಈ ಸೈಕಲ್‌. ವಿಶ್ವ ಬೈಸಿಕಲ್‌ ದಿನಾಚರಣೆಯ ಈ ಸುಸಮಯದಲ್ಲಿ ಜನಮನದ ಬೆಸುಗೆಯಾಗಿರುವ ಸೈಕಲ್‌, ಸದಾ ನಮ್ಮ ಒಡನಾಡಿಯಾಗಿರಲಿ ಎಂಬ ಸಂಕಲ್ಪವನ್ನು ನಾವು ತೊಡಬೇಕಿದೆ. ಶರವೇಗದಲ್ಲಿ ಚಲಿಸುವ ಬಗೆಬಗೆಯ ಕಾರು, ಬೈಕ್‌ಗಳನ್ನು ತುರ್ತು ಅಗತ್ಯಗಳಿಗೆ ಬಳಸಿದರೂ “ಆರೋಗ್ಯವೇ ಭಾಗ್ಯ’ ಎಂಬ ಸೂತ್ರದಡಿಯಲ್ಲಿ, ಮನದಂಗಳಕ್ಕೆ ಮನೋಲ್ಲಾಸವನ್ನು ನೀಡುವ ಆಪ್ತನಂತೆಯೂ ಈ ಸೈಕಲ್‌ ಅನ್ನು ನಾವೆಲ್ಲರೂ ಬಳಸಬೇಕಿದೆ. ಪ್ರಕೃತಿ ಮಾತೆಯನ್ನು ಮಾಲಿನ್ಯ ರಹಿತಳಾಗಿ ಕಾಪಾಡುವಲ್ಲಿ ಪ್ರತಿಯೊಬ್ಬರೂ ಪುಟ್ಟ ಕಾಣಿಕೆಯನ್ನು ನೀಡುವ ದಿಟ್ಟ ಮನಸ್ಸಿನಿಂದ ವಾರಕ್ಕೊಮ್ಮೆಯಾದರೂ ತಮ್ಮ ದೈನಂದಿನ ಅಗತ್ಯ ಕೆಲಸಗಳಿಗೆ ಸೈಕಲ್‌ ಅನ್ನೇ ಬಳಸಲು ಕಟಿಬದ್ಧರಾಗಬೇಕಿದೆ.

– ಅನೀಶ್‌ ಬಿ., ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next