Advertisement
ತೋಕೂರು ವಿಶ್ವಬ್ಯಾಂಕ್ ಯೋಜನೆ
1996- 97ರಲ್ಲಿ ತೋಕೂರಿನಲ್ಲಿ ವಿಶ್ವಬ್ಯಾಂಕ್ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆಯಲ್ಲಿ ಗ್ರಾಮಸ್ಥರ ಪಾಲು ಬಂಡವಾಳದೊಂದಿಗೆ ಮನೆ ಮನೆಗೆ ನೀರು ಸಂಪರ್ಕ ಪಡೆದುಕೊಂಡು ತೋಕೂರಿನ ಕ್ಲಸ್ಟರ್ 1 ಮತ್ತು 2 ಎಂಬ ಎರಡು ಸಮಿತಿಯನ್ನು ರಚಿಸಿಕೊಂಡು, ನಿರ್ವಹಣೆ, ಲಾಭ, ನಷ್ಟ ಎಲ್ಲವೂ ಸಹ ಸಮಿತಿಯ ಜವಬ್ದಾರಿಯೇ ಹೊರತು ಯಾವುದೇ ಸರಕಾರಿ ಸಂಸ್ಥೆಗಳಾಗಲಿ (ಗ್ರಾಮ ಪಂಚಾಯತ್ ಸಹಿತ) ಹೊಣೆಗಾರಿಕೆಯಿಂದ ನಡೆಸುತ್ತಿಲ್ಲ.
ಕಿಂಡಿ ಅಣೆಕಟ್ಟು
ಕೊಳವೆ ಬಾವಿಗಳಿಗೆ ನಿರಂತರವಾಗಿ ನೀರು ಮರು ಪೂರಣಗೊಳಿಸಲು ಪ್ರತ್ಯೇಕವಾಗಿ ಎರಡು ಕಿಂಡಿ ಅಣೆಕಟ್ಟನ್ನು ವರ್ಷದ ಹಿಂದೆ ನಿರ್ಮಿಸಲಾಗಿದೆ. ನರೇಗಾ ಹಾಗೂ ತೋಕೂರು ಯುವಕ ಸಂಘದ ಸಂಯೋಜನೆಯಲ್ಲಿ ನಿರ್ಮಿಸಿದ್ದು, ಇದರಿಂದ ಈ ವರ್ಷ ಇದರ ಸಂಪೂರ್ಣ ಲಾಭ ಪಡೆಯು ವಂತಾಗಿದೆ. ಫೆಬ್ರವರಿ ಅಥವ ಮಾರ್ಚ್ ಅನಂತರ ದಿನ ಪೂರ್ತಿ ನೀರು ಬಿಡದೇ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಬಿಡಲಾಗುತ್ತದೆ. ಕಾರಣ ನೀರು ಇದ್ದರೂ ಅದನ್ನು ಹಿತಮಿತವಾಗಿ ಬಳಸಬೇಕು ಎಂಬ ಉದ್ದೇಶವನ್ನು ಹೊಂದಿದೆ.
Related Articles
ಪ್ರತೀ ತಿಂಗಳು 75 ರೂ. (ಕನಿಷ್ಠ 15 ಸಾವಿರ ಲೀ.) ಹೆಚ್ಚುವರಿಯಾದರೇ ಪ್ರತ್ಯೇಕ ದರ. 7.5 ಎಚ್.ಪಿ. ಸಾಮರ್ಥ್ಯದ ಪಂಪ್ ಸಮಿತಿಗೆ 18 ಸಾವಿರ (ಮೆಸ್ಕಾಂ ಬಿಲ್ಲು 12 ಸಾವಿರ ರೂ. ನಿರ್ವಹಣೆ, ಪಂಪ್ ಆಪರೇಟರ್, ಬಿಲ್ಲು ಕಲೆಕ್ಟರ್ ಮತ್ತು ಇತರ ) ಖರ್ಚು. ಸುಮಾರು 23 ಸಾವಿರ ರೂ. 175 ಮನೆಗಳ ಸಂಪರ್ಕದಿಂದ ಸಂಗ್ರಹ. ಎಲ್ಲ ನಿರ್ವಹಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ.
Advertisement
ಹಿತಮಿತವಾಗಿ ಬಳಸಬೇಕಿದೆಕುಡಿಯುವ ನೀರು ಗ್ರಾಮಸ್ಥರು ಬಳಸುವಾಗ ಹಿತಮಿತವಾಗಿ ಬಳಸಲು ಕ್ರಮ ಕೈಗೊಂಡಿದ್ದೇವೆ. ಮಳೆಗಾಲ ಆರಂಭವಾಗುವವರೆಗೂ ನೀರು ನಿರ್ವಹಣೆಯಲ್ಲಿ ಬಹಳ ಎಚ್ಚರಿಕೆಯನ್ನು ಅನುಸರಿಸುತ್ತಿದ್ದೇವೆ. ಸಮಿತಿ ಪಾರದರ್ಶಕತೆಯ ವಿಶ್ವಾಸವನ್ನು ಹೊಂದಿದೆ.
- ವಿನೋದ್‌ಕುಮಾರ್,
ಅಧ್ಯಕ್ಷರು, ವಿಶ್ವಬ್ಯಾಂಕ್ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ ಕಿಂಡಿ ಅಣೆಕಟ್ಟು ಹೆಚ್ಚಲಿದೆ
ತೋಕೂರಿನ ಎರಡು ವಿಶ್ವಬ್ಯಾಂಕ್ ಸಮಿತಿಗಳೇ ನೀರಿನ ನಿರ್ವಹಣೆ ನಡೆಸುತ್ತಿರುವುದರಿಂದ ಗ್ರಾಮ ಪಂಚಾಯತ್‌ಗೂ ನೆಮ್ಮದಿ, 22 ವರ್ಷದಿಂದಲೂ ನಡೆಸುತ್ತಿರುವ ಸಮಿತಿಯ ನಿರ್ವಹಣೆಯನ್ನು ಮೆಚ್ಚಲೇ ಬೇಕು. ಗ್ರಾಮ ಪಂಚಾಯತ್‌ಗೂ ಹೆಸರು ಜತೆಗೆ ನೆಮ್ಮದಿಯೂ ಇದೆ. ಮತ್ತೂಂದು ಕಿಂಡಿ ಅಣೆಕಟ್ಟನ್ನು ಈ ಬಾರಿ ಕಂಬಳಬೆಟ್ಟುವಿನಲ್ಲಿ ನಿರ್ಮಿಸುವ ಯೋಜನೆ ಇದೆ.
- ಮೋಹನ್‌ದಾಸ್,
ಅಧ್ಯಕ್ಷರು,ಪಡುಪಣಂಬೂರು ಗ್ರಾ.ಪಂ. -ನರೇಂದ್ರ ಕೆರೆಕಾಡು