Advertisement
30 ವರ್ಷದ ಗೋಪಿ 2 ಗಂಟೆ, 13 ನಿಮಿಷ, 39 ಸೆಕೆಂಡ್ಗಳಲ್ಲಿ ಓಟ ಮುಗಿಸಿದರು. ವಿಶ್ವ ಚಾಂಪಿಯನ್ಶಿಪ್ ಅರ್ಹತಾ ಮಾನದಂಡ 2:16.00 ಆಗಿದೆ. ಇದು ಗೋಪಿ ಅವರ ಅತ್ಯುತ್ತಮ ವೈಯಕ್ತಿಕ ದಾಖಲೆಯಾಗಿದೆ. ಅವರ ಹಿಂದಿನ ದಾಖಲೆ 2:15:16.
4 ದಶಕಗಳ ಹಿಂದೆ ಶಿವನಾಥ್ ಸಿಂಗ್ ಜಲಂಧರ್ ಮ್ಯಾರಥಾನ್ನಲ್ಲಿ (1978) 2:12.00 ಸಕೆಂಡ್ಗಳಲ್ಲಿ ಓಟ ಮುಗಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ ಭಾರತೀಯ ಓಟಗಾರರಲ್ಲಿ ಗೋಪಿ ಅವರದೇ ಅತ್ಯುತ್ತಮ ಸಾಧನೆಯಾಗಿದೆ. 2017ರಲ್ಲಿ ಚೀನದಲ್ಲಿ ನಡೆದ ಮ್ಯಾರಥಾನ್ನಲ್ಲಿ ಗೋಪಿ ಪ್ರಥಮ ಸ್ಥಾನಿಯಾಗಿದ್ದರು. 2016ರ ಒಲಿಂಪಿಕ್ಸ್ನಲ್ಲಿ ಅವರು 25ನೇ ಸ್ಥಾನ ಹಾಗೂ 2017ರ ವಿಶ್ವ ಚಾಂಪಿಯನ್ಶಿಪ್ ಕೂಟವನ್ನು 28ನೇ ಸ್ಥಾನದಿಂದ ಮುಗಿಸಿದ್ದರು.