Advertisement

ಲಂಡನ್‌ ವಿಶ್ವಚಾಂಪಿಯನ್‌ಶಿಪ್‌ ಬೋಲ್ಟ್ ಗೆ ಕೊನೆಯ ಓಟ

08:30 AM Aug 01, 2017 | Team Udayavani |

ಲಂಡನ್‌: ವಿಶ್ವದ ವೇಗದ ಓಟಗಾರ, ಒಲಿಂಪಿಕ್ಸ್‌ ದಂತಕಥೆ ಉಸೇನ್‌ ಬೋಲ್ಟ್ ಗೆ ಆ.5ರಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ವಿಶ್ವಚಾಂಪಿಯನ್‌ಶಿಪ್‌ ಕೊನೆಯ ಓಟವಾಗಿದೆ. ಜಮೈಕಾದ ಬೋಲ್ಟ್ ತನ್ನ ವೃತ್ತಿ ಜೀವನದ ಕೊನೆಯ ಓಟವನ್ನು ಜಯದೊಂದಿಗೆ ಕೊನೆಗೂಳಿಸಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

Advertisement

ಬೋಲ್ಟ್ 100 ಮೀ. ಓಟದಲ್ಲಿ 9.58 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ 200 ಮೀ.ಓಟದಲ್ಲಿ 19.19 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವುದು 2008ರಲ್ಲಿ ನಡೆದ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ. ನಂತರ 2012ರಲ್ಲಿ ನಡೆದ ಲಂಡನ್‌ ಮತ್ತು 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಒಟ್ಟು 8 ಚಿನ್ನದ ಪದಕ, ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 11 ಪದಕ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next