ಫೈನಲ್‌ನಲ್ಲಿ ಅವರು 11ನೇ ಸ್ಥಾನಿಯಾದರು.
Advertisement
27 ವರ್ಷದ ಅವಿನಾಶ್ ಸಬ್ಲೆ 8:31.75 ಸೆಕೆಂಡ್ಸ್‌ನಲ್ಲಿ ಸ್ಪರ್ಧೆ ಮುಗಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ಹಹಣೆಗಿಂತಲೂ ಕಳಪೆ ಸಾಧನೆಯಾಗಿದೆ (8:12.48 ಸೆಕೆಂಡ್ಸ್).
Related Articles
ಮೊರೊಕ್ಕೋದ ಒಲಿಂಪಿಕ್ ಚಾಂಪಿಯನ್ ಸೌಫಿಯೇನ್ ಎಲ್ ಬಕ್ಕಲಿ 8:25.13 ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿ ಚಿನ್ನ ಗೆದ್ದರು. ಇವರ ಶ್ರೇಷ್ಠ ನಿರ್ವಹಣೆ 7:58.28 ಸೆಕೆಂಡ್ಸ್ ಎಂಬುದು ಉಲ್ಲೇಖನೀಯ. ಇಥಿಯೋಪಿಯಾದ ಲಮೇಖ ಗಿರ್ಮ ಬೆಳ್ಳಿ ಗೆದ್ದರು (8:26.01). ಟೋಕಿಯೊ ಒಲಿಂಪಿಕ್ಸ್ ಹಾಗೂ ಕಳೆದ ವಿಶ್ವ ಚಾಂಪಿಯನ್‌ಶಿಪ್ ಗಳೆರಡರಲ್ಲೂ ಬೆಳ್ಳಿ ಜಯಿಸಿದ್ದ ಇವರ ಶ್ರೇಷ್ಠ ಸಾಧನೆ 7:58.68 ಸೆಕೆಂಡ್ಸ್ ಆಗಿದೆ. ಕೀನ್ಯಾದ ಹಾಲಿ ಚಾಂಪಿಯನ್ ಕಾನ್ಸೆಲ್ಸಸ್ ಕಿಪ್ರುಟೊ 8:01.35 ಸೆಕೆಂಡ್‌ಗಳ ಸಾಧನೆಯೊಂದಿಗೆ ಕಂಚು ಜಯಿಸಿದರು.
Advertisement