Advertisement
ಆಂಗಿಕ ಮಲ್ಟಿಮೀಡಿಯಾ ಫೇಸ್‌ಬುಕ್ ಪೇಜ್‌ನಲ್ಲಿ ಸೋಮವಾರ ನಡೆದ ವಿಶ್ವ ಅರೆಭಾಷೆ ಹಬ್ಬದ ಚಿತ್ರಣವಿದು. ಕೊರೊನಾ ಕಾರಣದಿಂದಾಗಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್ ಅನ್ನೇ ಬಳಸಿಕೊಂಡು ವಿಶ್ವ ಅರೆಭಾಷೆ ಹಬ್ಬವನ್ನು ರಂಗ ಕಲಾವಿದ ಲೋಕೇಶ್ ಊರುಬೈಲು ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಅರೆಭಾಷಿಗ ಸಮುದಾಯದವರು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
“ಜನಪದ ಬೊದ್ದ್ಕ್ ಲಿ ಆಟಿನ ಗುಟ್ಟ್’ ಕುರಿತು ಜಾನಪದ ವಿದ್ವಾಂಸ ಡಾ| ಸುಂದರ್ ಕೇನಾಜೆ, “ಅಮರ ಸುಳ್ಯದ ಸ್ವಾತಂತ್ರ್ಯಸಮರ’ ಕುರಿತು ವಿದ್ಯಾಧರ ಕುಡೆಕಲ್ಲು, “ಕೃಷಿ ಜೀವನದೊಟ್ಟಿಗೆ ಅರೆಭಾಷೆ ಸಂಸ್ಕೃತಿ’ ಬಗ್ಗೆ ಲೇಖಕ ದೊಡ್ಡಣ್ಣ ಬರೆಮೇಲು, “ಅರೆಭಾಷೆಲಿ ಯಕ್ಷಗಾನನ ದಿನಂಗ’ ಕುರಿತು ಯಕ್ಷಗಾನ ಕಲಾವಿದ ಜಬ್ಟಾರ್ ಸಮೋ, “ಸಮಾಜಲಿ ಸಂಘಟನೆನ ಬಲ ಮತ್ತೆ ಮಹತ್ವ’ ಕುರಿತು ದಿನೇಶ್ ಮಡಪ್ಪಾಡಿ, “ಕೊಡಗ್ ನಾಡ್‌ಲಿ ಆಟಿ ತಿಂಗಳ ಗೌಜಿ’ ಕುರಿತು ಉಪನ್ಯಾಸಕ ಪಟ್ಟಡ ಶಿವಕುಮಾರ್, “ಮೊನ್ಸ ಸಂಬಂಧ ಮತ್ತೆ ಭಾಷೆ’ ಕುರಿತು ಪತ್ರಕರ್ತ ಲೈನ್ಕಜೆ ರಾಮಚಂದ್ರ, “ಬೊದ್ಕ್ ಮತ್ತೆ ಕಥೆ’ ಬಗ್ಗೆ ಲೇಖಕ ಬಾರಿಯಂಡ ಜೋಯಪ್ಪ, “ಗದ್ದೆ ಬೇಸಾಯದ ಹಸಿರ್ ನೆಂಪ್’ ಕುರಿತು ಸುಳ್ಯ ಕೆವಿಜಿ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ| ಎನ್. ಎ. ಜ್ಞಾನೇಶ್ ನಿಡ್ಯಮಲೆ, “ಭೇಟೆನೊಳಗೆ ಅರೆಭಾಷೆ ಸಂಸ್ಕೃತಿ’ ಬಗ್ಗೆ ತೇಜಕುಮಾರ್ ಬಡ್ಡಡ್ಕ, “ಬೊದ್ಕ್ ನ ಅನುಭವದ ಕಥೆ’ ಕುರಿತು ಭವಾನಿಶಂಕರ ಅಡ್ತಲೆ, “ಅರೆಭಾಷೆಲಿ ಯಕ್ಷಗಾನದ ಸಾಧ್ಯತೆ ಮತ್ತೆ ಸವಾಲು’ ಕುರಿತು ಭವ್ಯಶ್ರೀ ಮಂಡೆಕೋಲು, “ಬೊದ್R ಮತ್ತೆ ರಂಗಭೂಮಿ’ ಬಗ್ಗೆ ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ, “ಕಾರ್ತಿಂಗಳ ಗೌಜಿ’ ಬಗ್ಗೆ ಲೋಕನಾಥ್ ಅಮೆಚೂರ್, “ಅರೆಭಾಷೆ ಸಂಸ್ಕೃತಿಲಿ ಪ್ರದರ್ಶನ ಕಲೆ’ ಕುರಿತು ಗೀತಾ ಮೋಂಟಡ್ಕ, “ಹಿರಿಯವ್ವನ ಕೈರುಚಿ ಮತ್ತು ಅಡುಗೆ’ ಬಗ್ಗೆ ಉಪನ್ಯಾಸಕಿ ಕಾಂಚನಾ ಕೆದಂಬಾಡಿ, “ಆಟಿ ತಿಂಗಳ ನಾಟಿ ಮೊದ್ª’ ಕುರಿತು ವೈದ್ಯ ಡಾ| ಪುನಿತ್ ರಾಘವೇಂದ್ರ ಕುಂಟುಕಾಡು, “ಭಾಷೆ ಮತ್ತೆ ಸಂಸ್ಕೃತಿನ ಬೆಳೆಸುವಲ್ಲಿ ಅಕಾಡೆಮಿಗಳ ಪಾತ್ರ’ ಕುರಿತು ಅರೆಭಾಷೆ ಸಂಸ್ಕೃತಿ ಮತ್ತೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಡಾ| ಪುರುಷೋತ್ತಮ ಬಿಳಿಮಲೆ “ಸ್ವಾಸ್ಥ್ಯ ಸಮಾಜಕ್ಕೆ ಬಾಂಧವ್ಯದ ನಂಟ್ ಮತ್ತೆ ಭಾಷೆನ ಸಾಮರಸ್ಯ’ದ ಬಗ್ಗೆ ಮಾತನಾಡಿದರು.
Related Articles
Advertisement
ಅರೆಭಾಷೆ ಸಂಸ್ಕೃತಿ ವಿಶಿಷ್ಟವಾದುದು“ನಾನ್ ಮತ್ತೆ ಅರೆಭಾಷೆ’ ವಿಷಯದಲ್ಲಿ ವಿಚಾರ ಮಂಡಿಸಿದ ಸಾಹಿತಿ ಡಾ| ಪ್ರಭಾಕರ ಶಿಶಿಲ, ಅರೆಭಾಷೆ ಸಂಸ್ಕೃತಿ ವಿಶಿಷ್ಟ ಸಂಸ್ಕೃತಿ. ಇದರಲ್ಲಿ ಪ್ರದರ್ಶನ ಸಂಸ್ಕೃತಿ ಮತ್ತು ಆಚರಣ ಸಂಸ್ಕೃತಿ ಎಂದು ಎರಡು ವಿಭಾಗಗಳಿವೆ. ಆಚರಣ ಸಂಸ್ಕೃತಿಯಡಿಯಲ್ಲಿ ಭಾಷಿಗರು ಆಚರಿಸುವ ವಿವಿಧ ಹಬ್ಬ, ವಿಶೇಷತೆಗಳು ಸೇರಿವೆ. ಪ್ರದರ್ಶನ ಸಂಸ್ಕೃತಿಯಲ್ಲಿ ಸಿದ್ಧವೇಷ, ಯಕ್ಷಗಾನ, ನಾಟಕ ಕಲೆಗಳು ಮುನ್ನೆಲೆಗೆ ಬರುತ್ತವೆ. ಅರೆಭಾಷೆ ಕಲೆ ಎಂದೇ ಹೇಳಲಾಗುವ ಸಿದ್ಧವೇಷ ಸುಳ್ಯದ ವಿಶಿಷ್ಟ ಪ್ರದರ್ಶನ ಕಲೆ. ಆದರೆ ಪ್ರಸ್ತುತ ಸಿದ್ಧವೇಷ ತಂಡಗಳು ಕಾಣಸಿಗುವುದು ಅಪರೂಪವಾಗಿದೆ ಎಂದು ಅಭಿಪ್ರಾಯಿಸಿದರು.