Advertisement

ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌: ಅದಿತಿ, ಓಜಸ್‌ ಸ್ವರ್ಣ ತೇಜಸ್ಸು

11:41 PM Aug 05, 2023 | Team Udayavani |

ಬರ್ಲಿನ್‌: ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 17 ವರ್ಷದ ಅದಿತಿ ಸ್ವಾಮಿ ಸೀನಿಯರ್‌ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಬರ್ಲಿನ್‌ ಕೂಟದಲ್ಲಿ ಅವರು ವನಿತಾ ಕಂಪೌಂಡ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ನೂತನ ಎತ್ತರ ತಲುಪಿದರು. ಇದು ವಿಶ್ವ ಆರ್ಚರಿಯಲ್ಲಿ ಭಾರತಕ್ಕೆ ಒಲಿದ ಮೊದಲ ವೈಯಕ್ತಿಕ ಸ್ವರ್ಣ ಪದಕವೂ ಆಗಿದೆ.

Advertisement

ಅನಂತರ ಪುರುಷರ ವಿಭಾಗದ ಕಂಪೌಂಡ್‌ ಸ್ಪರ್ಧೆಯಲ್ಲಿ ಓಜಸ್‌ ದೇವತಾಲೆ ಕೂಡ ಸ್ವರ್ಣ ಸಾಧನೆಗೈದರು. ಇದು ಪುರುಷರ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಸ್ವರ್ಣ ಪದಕವೂ ಹೌದು. ಇವರಿಬ್ಬರೂ ಸತಾರಾ ಅಕಾಡೆಮಿಯಲ್ಲಿ ಪ್ರವೀಣ್‌ ಸಾವಂತ್‌ ಅವರಿಂದ ತರಬೇತಿ ಪಡೆದಿದ್ದರು.

ಇದರೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 3 ಚಿನ್ನ ಹಾಗೂ ಒಂದು ಕಂಚಿನ ಪದಕದ ಸಾಧನೆಗೈದಿತು. ಇದು ಕೂಡ ಒಂದು ದಾಖಲೆಯಾಗಿದೆ. ಆದರೆ ರಿಕರ್ವ್‌ ಸ್ಪರ್ಧಿಗಳಿಗೆ ಯಾವುದೇ ಪದಕ ಒಲಿಯಲಿಲ್ಲ.

ಅದಿತಿ ಸ್ವಾಮಿ 150ರಲ್ಲಿ 149 ಅಂಕ ಗಳಿಸಿದರು. ಮೆಕ್ಸಿಕೋದ ಆ್ಯಂಡ್ರಿಯಾ ಬೆಸೆರಾ (147) ಬೆಳ್ಳಿ ಗೆದ್ದರು. ಅದಿತಿ ಕಳೆದ ತಿಂಗಳಷ್ಟೇ ಜೂನಿಯರ್‌ ವಿಭಾಗದಲ್ಲೂ (ಅಂಡರ್‌-18) ಚಾಂಪಿಯನ್‌ ಆಗಿದ್ದರು. ದೇವತಾಲೆ ಪಫೆìಕ್ಟ್ 150 ಅಂಕ ಸಂಪಾದಿಸಿದರು. ಪೋಲೆಂಡ್‌ನ‌ ಪ್ರೈಬಿಸ್ಕಿ ಬೆಳ್ಳಿ ಗೆದ್ದರು (149).

Advertisement

Udayavani is now on Telegram. Click here to join our channel and stay updated with the latest news.

Next