Advertisement

ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ 

10:28 AM Dec 09, 2017 | Team Udayavani |

ಬೆಂದೂರ್‌ : ಎಚ್‌ಐವಿ ರೋಗವಲ್ಲ, ಅದೊಂದು ವೈರಸ್‌ ಆಗಿದೆ. ಸೂಕ್ತ ಮುನ್ನೆಚ್ಚರಿಕೆಯಿಂದ ಎಚ್‌ಐವಿ ಸೋಂಕಿಗೊಳಗಾಗುವುದನ್ನು ತಡೆಯಬಹುದು ಎಂದು ಮಂಗಳೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಸಂಘಟನೆಗಳ ಆಶ್ರಯಲ್ಲಿ ಸೈಂಟ್‌ ಆ್ಯಗ್ನೆಸ್‌ ಕಾಲೇಜಿನ ಸಭಾಭವನದಲ್ಲಿ ನಡೆದ ವಿಶ್ವ ಏಡ್ಸ್‌ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಘನತೆಯ ಜೀವನ ನಡೆಸಿ
ಎಚ್‌ಐವಿ ಸೋಂಕಿತರ ಬಗೆಗೆ ಸಮಾಜ ತಪ್ಪು ಕಲ್ಪನೆ ಹೊಂದಿದ್ದರಿಂದ ಅವರನ್ನು ದೂರವಿಡುವ ಪ್ರಯತ್ನಗಳಾಗುತ್ತಿವೆ. ಆದರೆ 2017ರ ಎಪ್ರಿಲ್‌ನಲ್ಲಿ ಜಾರಿಗೆ ಬಂದ ಎಚ್‌ಐವಿ ನಿಯಂತ್ರಣ ಕಾನೂನಿನ ಪ್ರಕಾರ ಎಚ್‌ಐವಿ ಪೀಡಿತರು ಕೂಡ ಸಮಾಜದಲ್ಲಿ ಸುರಕ್ಷಾ ಕ್ರಮಗಳೊಂದಿಗೆ ಘನತೆಯಿಂದ ಜೀವನವನ್ನು ಸಾಗಿಸಲು ಅವಕಾಶವಿದೆ. ಅವರನ್ನು ಪ್ರತ್ಯೇಕವಾಗಿ ನೋಡದೆ, ಜನಸಾಮಾನ್ಯರಂತೆ ಬದುಕಲು ಅನುವು ಮಾಡಿಕೊಡಬೇಕು ಎಂದು ಅವರು ಆಶಿಸಿದರು.

ಎಚ್‌ಐವಿ ನಿಯಂತ್ರಣ ಕುರಿತಾದ ನೂತನ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದ ನ್ಯಾಯವಾದಿ ಅನಿತಾ ಕಿಣಿ, ಕಾಯ್ದೆಯು ಎಚ್‌ಐವಿ ಪೀಡಿತರಿಗೆ ಸಮಾಜದಲ್ಲಿ ಇತರರ ಜತೆಗೆ ಬಾಳುವ ಹಕ್ಕು ನೀಡಿದೆ. ಇದರೊಂದಿಗೆ ಕೌನ್ಸೆಲಿಂಗ್‌ ಹಾಗೂ ಜಾಗೃತಿಗೂ ಒತ್ತು ನೀಡಿದೆ ಎಂದರು.

ಪ್ರಾಂಶುಪಾಲೆ ಸಿ| ಜೆಸ್ವಿನಾ ಅಧ್ಯಕ್ಷತೆ ವಹಿಸಿದ್ದರು. ಡಾ| ಕಿಶೋರ್‌ ಕುಮಾರ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಬದ್ರುದ್ದೀನ್‌, ಸವಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್‌ ಪ್ರಸ್ತಾವನೆಗೈದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next