Advertisement
ಬೆಲಿಹುಗೆ ಪ್ರಬಲ ಸ್ಪರ್ಧೆಬೆಲಿಹುಗೆ ಮ್ಯಾರಥಾನ್‌ನ ಕೊನೆಯ ತನಕ ಉಗಾಂಡದ ಮ್ಯಾಂಡೇ ಬುಶೆಂಡಿಚ್ (28 ನಿಮಿಷ, 03 ಸೆಕೆಂಡ್ಸ್) ಪ್ರಬಲ ಸ್ಪರ್ಧೆ ನೀಡಿದ್ದರು. ಇಬ್ಬರ ನಡುವಿನ ಹೋರಾಟದಲ್ಲಿ ಕೊನೆಗೂ ಬೆಲಿಹು ಪರಾಕ್ರಮ ಮೆರೆದು ಗೆಲುವಿನ ನಗು ಬೀರಿದರು. ಬುಶೆಂಡಿಚ್ ದ್ವಿತೀಯ ಸ್ಥಾನ ಪಡೆದುಕೊಂಡರು.
Related Articles
ಭಾರತೀಯ ಎಲೈಟ್ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಸಂಜೀವನಿ ಜಾಧವ್ ಮಹಿಳೆಯರ ವಿಭಾಗದಲ್ಲಿನ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರು. ಅವರು 35 ನಿಮಿಷ 10 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದರು. ಪಾರೂಲ್ ಚೌಧರಿ (35 ನಿಮಿಷ, 36 ಸೆಕೆಂಡ್ಸ್) ದ್ವಿತೀಯ ಹಾಗೂ ಚಿಂತಾ ಯಾದವ್ (36 ನಿಮಿಷ, 34 ಸೆಕೆಂಡ್ಸ್) ತೃತೀಯ ಸ್ಥಾನಿಯಾದರು.
Advertisement
ಭಾರತೀಯ ಎಲೈಟ್ ಆ್ಯತ್ಲೆಟಿಕ್ಸ್ ವಿಭಾಗದಲ್ಲಿ ಕರಣ್ ಸಿಂಗ್ (29 ನಿಮಿಷ, 55 ಸೆಕೆಂಡ್ಸ್) ಪುರುಷರ ವಿಭಾಗದ ಚಾಂಪಿಯನ್ ಆದರು. ಲಕ್ಷ್ಮಣ್ ಗೋವಿಂದನ್ (30 ನಿಮಿಷ, 02 ಸೆಕೆಂಡ್ಸ್) ದ್ವಿತೀಯ ಹಾಗೂ ಅವಿನಾಶ್ ಮುಕುಂದ್ (30 ನಿಮಿಷ, 36 ಸೆಕೆಂಡ್ಸ್) ತೃತೀಯ ಸ್ಥಾನ ಪಡೆದುಕೊಂಡರು.